»   » ಚಿತ್ರಗಳ ಯಶಸ್ಸಿಗೆ ಮುನ್ನುಡಿ ಬರೆದ 2015ರ ಅದ್ಭುತ ಟ್ರೈಲರ್ ಗಳು

ಚಿತ್ರಗಳ ಯಶಸ್ಸಿಗೆ ಮುನ್ನುಡಿ ಬರೆದ 2015ರ ಅದ್ಭುತ ಟ್ರೈಲರ್ ಗಳು

Posted By:
Subscribe to Filmibeat Kannada

ಇನ್ನೇನು 2015 ಕ್ಕೆ ನಾವು ವಿದಾಯ ಹೇಳುವ ಸಮಯ ಹತ್ತಿರವಾಗುತ್ತಿದೆ. ಹೊಸ ವರ್ಷವನ್ನು ಬರಮಾಡಿಕೊಳ್ಳುವ ಆತುರದಲ್ಲಿ, ಕಳೆದು ಹೋದ ಕೆಲವೊಂದು ಮುಖ್ಯವಾದ ವಿಚಾರಗಳನ್ನು ನಾವು ಹೇಳಲು ಮರೆಯಬಾರದು ಅಲ್ವಾ?.

ಅಂದಹಾಗೆ ಈ ಬಾರಿ ಗಾಂಧಿನಗರದಲ್ಲಿ ಹಲವಾರು ಘಟನೆಗಳು ನಡೆದಿವೆ ಅದರಲ್ಲಿ ವಿಶೇಷವಾಗಿ ಚಿತ್ರ ಬಿಡುಗಡೆ ಇರಬಹುದು, ಅಥವಾ ಗಾಸಿಪ್, ಅದು ಬಿಟ್ಟರೆ ಚಿತ್ರದ ಟ್ರೈಲರ್ ಗಳು..! ಹೌದು ಸಿನಿಮಾದ ಟ್ರೈಲರ್ ಗಳು ಈ ವರ್ಷ ಭಯಂಕರ ಸದ್ದು ಮಾಡಿವೆ.

ಇತ್ತೀಚಿನ ದಿನಗಳಲ್ಲಿ ಸಿನಿಮಾ ರಿಲೀಸ್ ಗಿಂತ ಮುನ್ನ ಚಿತ್ರದ ಮುನ್ನೋಟ ಅಂತ ಚಿತ್ರತಂಡದವರು ಬಿಡುಗಡೆ ಮಾಡುವ ಟ್ರೈಲರ್ ಮತ್ತು ಟೀಸರ್ ಗಳು ಹೆಚ್ಚಾಗಿ ಸಿನಿರಸಿಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.

ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶಿಸಿ ನಟಿಸಿದ್ದ 'ಉಪ್ಪಿ 2', ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'Mr ಐರಾವತ', ಕಿಚ್ಚ ಸುದೀಪ್ ಅವರ 'ರನ್ನ' ಹೀಗೆ ಹಲವಾರು ಸ್ಟಾರ್ ನಟರ ಹಾಗೂ ಹೊಸಬರ ಸಿನಿಮಾಗಳ ಟ್ರೈಲರ್ ಗಳು ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡಿವೆ.

ಕೆಲವೊಂದು ಬಹಳ ನಿರೀಕ್ಷೆ ಹುಟ್ಟಿಸಿದ ಟ್ರೈಲರ್ ಗಳು ಲಕ್ಷಾನುಗಟ್ಟಲೆ ನೋಡುಗರನ್ನು ಸಂಪಾದಿಸಿ ದಾಖಲೆ ಸೃಷ್ಟಿಸಿವೆ. ಈ ವರ್ಷ 2015 ರಲ್ಲಿ ಅತೀ ಹೆಚ್ಚು ವೀಕ್ಷಣೆಗೆ ಒಳಪಟ್ಟ ಹಾಗೂ ಭಾರಿ ಸೌಂಡ್ ಮಾಡಿದ ಟಾಪ್ 15 ಚಿತ್ರದ ಟ್ರೈಲರ್ ಗಳನ್ನು ನಾವು ನಿಮಗೆ ತೋರಿಸ್ತೀವಿ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

ಹೊಸಬರ 'ರಂಗಿತರಂಗ'

ಸ್ಯಾಂಡಲ್ ವುಡ್ ನ ಕೋಲ್ಮಿಂಚು ಅಂತಾನೇ ಕರೆಸಿಕೊಳ್ಳುವ ಹೊಸಬರ 'ರಂಗಿತರಂಗ' ಸಿನಿಮಾ ಮೊದಲಿಗೆ ಕಲರ್ ಫುಲ್ ಟ್ರೈಲರ್ ಮೂಲಕನೇ ಭಾರಿ ಪ್ರೇಕ್ಷಕರನ್ನು ಸಂಪಾದಿಸಿದ್ದು. ಅದರಂತೆ ಸುಮಾರು 452,471 ವೀಕ್ಷಕರನ್ನು ಸಂಪಾದಿಸಿ 2015 ರ ಟಾಪ್ ಒಂದನೇ ಸ್ಥಾನದಲ್ಲಿ ಏರಿ ನಿಂತಿದೆ ಚೊಚ್ಚಲ ನಿರ್ದೇಶಕ ಅನುಪ್ ಭಂಡಾರಿ ಅವರ 'ರಂಗಿತರಂಗ' ಟ್ರೈಲರ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ..[ಸೋಷಿಯಲ್ ಮೀಡಿಯಾದಲ್ಲಿ 'ರಂಗಿತರಂಗ' ಸೂಪರ್ ಹಿಟ್]

'ಜೋಗಿ' ಪ್ರೇಮ್ 'ಡಿ.ಕೆ'

'ರಿಯಲ್ ಶೋ ಮ್ಯಾನ್' ಅಂತ ನಾಮಾಂಕಿತಗೊಂಡ ನಿರ್ದೇಶಕ 'ಜೋಗಿ' ಪ್ರೇಮ್ ಅವರ 'ಡಿ.ಕೆ' ಸಿನಿಮಾ ಅಟ್ಟರ್ ಪ್ಲಾಪ್ ಆದರೂ ಕೂಡ ಟ್ರೈಲರ್ ಮಾತ್ರ ಗಾಂಧಿನಗರದಲ್ಲಿ ಸಖತ್ ಸದ್ದು ಮಾಡಿತ್ತು. ಡಿ.ಕೆ ಟೈಟಲ್ ಕೆಳಗೆ 'ರಾ ಲವ್ ಸ್ಟೋರಿ' ಎಂದು ಅಡಿಬರಹ ಕೊಟ್ಟು ಇಲ್ಲ-ಸಲ್ಲದ ಗದ್ದಲ ಉಂಟು ಮಾಡಿದ್ದರು ನಮ್ಮ ಪ್ರೇಮ್ ಸಾಹೇಬರು. ಅಂದಹಾಗೆ ಬರೋಬ್ಬರಿ 319,654 ವೀಕ್ಷಕರನ್ನು ಸಂಪಾದಿಸಿದ್ದ 'ಡಿ.ಕೆ' ಟ್ರೈಲರ್ 2015 ರಲ್ಲಿ ಭರ್ಜರಿ ಎರಡನೇ ಸ್ಥಾನದಲ್ಲಿದೆ. ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ.

ರೋರಿಂಗ್ ಸ್ಟಾರ್ 'ರಥಾವರ'

ಕಳೆದ ವರ್ಷ 'ಉಗ್ರಂ' ಯಶಸ್ಸಿನಲ್ಲಿ ಭರ್ಜರಿಯಾಗಿ ಬೀಗಿದ್ದ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಈ ವರ್ಷ ಮತ್ತೆ 'ರಥಾವರ' ಚಿತ್ರದ ಮೂಲಕ ಗೆಲುವಿನ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ. ಈ ವರ್ಷದ ಕೊನೆಗೆ ಚಿತ್ರ ಬಿಡುಗಡೆಯಾದರೂ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಅಂದಹಾಗೆ ಟ್ರೈಲರ್ ಮೂಲಕ ಭಾರಿ ನಿರೀಕ್ಷೆ ಹುಟ್ಟಿಸಿದ ಶ್ರೀಮುರಳಿ ಅವರ 'ರಥಾವರ' ಟ್ರೈಲರ್ ಸುಮಾರು 319,190 ಜನ ವೀಕ್ಷಣೆ ಮಾಡಿದ್ದರಿಂದ ಭರ್ಜರಿ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ. [ ಟ್ರೈಲರ್: 'ರಥಾವರ'ದಲ್ಲಿ ಉಗ್ರರೂಪ ತಾಳಿದ ರೋರಿಂಗ್ ಸ್ಟಾರ]

ರಕ್ಷಿತ್ ಶೆಟ್ಟಿ 'ರಿಕ್ಕಿ' ಟ್ರೈಲರ್

ಸ್ಯಾಂಡಲ್ ವುಡ್ ಪ್ರತಿಭಾವಂತ ನಟ ಕಮ್ ನಿರ್ದೇಶಕ ರಕ್ಷಿತ್ ಶೆಟ್ಟಿ ಹಾಗೂ ನಟಿ ಹರಿಪ್ರಿಯಾ ಅವರು ನಟಿಸಿರುವ ಬಹುನಿರೀಕ್ಷಿತ ಚಿತ್ರ 'ರಿಕ್ಕಿ' ಇನ್ನೂ ಬಿಡುಗಡೆಯಾಗದಿದ್ದರೂ, ಟ್ರೈಲರ್ ಮೂಲಕ ಭಾರಿ ಕುತೂಹಲ ಸೃಷ್ಟಿಸಿದೆ. ಬಿಡುಗಡೆಯಾದ ಒಂದೇ ದಿನಕ್ಕೆ ಅತೀ ಹೆಚ್ಚು ವೀಕ್ಷಣೆಗೊಳಗಾದ ಟ್ರೈಲರ್ ಎಂಬ ಹೆಮ್ಮೆ 'ರಿಕ್ಕಿ' ಚಿತ್ರದ್ದು. ಕಿಚ್ಚ ಸುದೀಪ್ ಅವರ ವಿಶಿಷ್ಟ ಧ್ವನಿಯಲ್ಲಿ ಮೂಡಿಬಂದಿರುವ 'ರಿಕ್ಕಿ' ಟ್ರೈಲರ್ 317,174 ಜನರ ವೀಕ್ಷಣೆಗೆ ಒಳಪಟ್ಟು ನಾಲ್ಕನೇ ಸ್ಥಾನದಲ್ಲಿದೆ. [ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣು, ರಕ್ತಕ್ಕೆ ರಕ್ತ - ರಿಕ್ಕಿ ಟ್ರೈಲರ್ ನೋಡಿ]

ಶಿವಣ್ಣ 'ವಜ್ರಕಾಯ'

ನೃತ್ಯ ನಿರ್ದೇಶಕ ಕಮ್ ನಿರ್ದೇಶಕ ಎ ಹರ್ಷ ಅವರು ಆಕ್ಷನ್-ಕಟ್ ಹೇಳಿರುವ 'ವಜ್ರಕಾಯ' ಸಿನಿಮಾ 'ಭಜರಂಗಿ' ಸಿನಿಮಾದಂತೆ ಗಾಂಧಿನಗರದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿತ್ತು. ಅದರಂತೆ ಟ್ರೈಲರ್ ಮೂಲಕ ಕೂಡ 'ವಜ್ರಕಾಯ' ಸಖತ್ ಸೌಂಡ್ ಮಾಡಿದ್ದು, 273,872 ಜನರ ವೀಕ್ಷಣೆಗೆ ಒಳಪಟ್ಟ ಈ ಚಿತ್ರದ ಟ್ರೈಲರ್ ಐದನೇ ಸ್ಥಾನವನ್ನು ಅಲಂಕರಿಸಿದೆ. ಚಿತ್ರದ ಟ್ರೈಲರ್ ನ ಝಲಕ್ ಇಲ್ಲಿದೆ ನೋಡಿ..

ಹಾರರ್-ಥ್ರಿಲ್ಲರ್ 'ಊಜಾ'

ಇತ್ತೀಚಿನ ದಿನಗಳಲ್ಲಿ ಯುವಜನತೆ ಹೆಚ್ಚಾಗಿ ಹಾರರ್-ಥ್ರಿಲ್ಲರ್ ಮತ್ತು ಮಿಸ್ಟರಿ ಕಥೆಯಾಧರಿತ ಸಿನಿಮಾಗಳನ್ನು ಇಷ್ಟಪಡುತ್ತಿದ್ದು, ಅದಕ್ಕಾಗಿಯೇ ನಿರ್ದೇಶಕ ರಾಜ್ ಕುಮಾರ್ ರೆಡ್ಡಿ ಅವರು 'ಊಜಾ' ಎನ್ನುವ ವಿಭಿನ್ನ ಕಥೆಯಾಧರಿತ ಸಿನಿಮಾವನ್ನು ಈ ವರ್ಷ ತೆರೆಗೆ ತಂದಿದ್ದರು. ಮಾಧುರಿ ಇಟಗಿ ಸೇರಿದಂತೆ ಹಲವಾರು ಹೊಸ ಪ್ರತಿಭೆಗಳು ಸೇರಿ ನಟಿಸಿದ 'ಊಜಾ' ಸಿನಿಮಾ ಟ್ರೈಲರ್ ಮೂಲಕ ಸಖತ್ ಸುದ್ದಿ ಮಾಡಿತ್ತು. ಅದರಂತೆ ಸುಮಾರು 268,250 ವೀಕ್ಷಣೆಗೆ ಒಳಪಟ್ಟು ಆರನೇ ಸ್ಥಾನದಲ್ಲಿ ಇದೆ. ['ಊಜಾ': ಇದು ಆತ್ಮಗಳ ಜೊತೆ ಆಡುವ ಆಟ]

'ಉಪೇಂದ್ರ 'ಶಿವಂ'

'ಸೂಪರ್ ರಂಗ' ಚಿತ್ರದ ನಂತರ ರಿಯಲ್ ಸ್ಟಾರ್ ಉಪೇಂದ್ರ ಅವರು 'ಶಿವಂ' ಎಂಬ ಡಿಫರೆಂಟ್ ಸಿನಿಮಾವನ್ನು ಪ್ರೇಕ್ಷಕರಿಗೆ ನೀಡಿದರು. ಸಾಮಾನ್ಯವಾಗಿ ಉಪ್ಪಿ ಸಿನಿಮಾ ಅಂದ್ರೆ ಕೊಂಚ ವಿಭಿನ್ನವಾಗಿಯೇ ಇರುತ್ತದೆ ಎಂದು ಅಭಿಮಾನಿಗಳ ಅಭಿಪ್ರಾಯ. ಅದರಂತೆ ಉಪ್ಪಿ ಅವರು ಶ್ರೀನಿವಾಸ ರಾಜು ಅವರ ನಿರ್ದೇಶನದಲ್ಲಿ ಮೂಡಿಬಂದ 'ಶಿವಂ' ಚಿತ್ರದಲ್ಲಿ ನಟಿಸಿದ್ದರು. ಅಂದಹಾಗೆ 'ಶಿವಂ' ಚಿತ್ರದ ಟ್ರೈಲರ್ 206,898 ಜನರ ವೀಕ್ಷಣೆಗೆ ಒಳಪಟ್ಟು ಏಳನೇ ಸ್ಥಾನಕ್ಕೆ ಕುಸಿದಿದೆ. [ಬಸವಣ್ಣ ನಾಮಸ್ಮರಣೆ ಭರಿತ 'ಶಿವಂ' ಟ್ರೇಲರ್]

ಕಿಚ್ಚ ಸುದೀಪ್ ಅವರ 'ರನ್ನ'

ತೆಲುಗಿನ 'ಅತ್ತಾರೆಂಟಿಕಿ ದಾರೇದಿ' ಸಿನಿಮಾದ ರಿಮೇಕ್ ಆದರೂ ಕೂಡ ಚಿತ್ರ ಭರ್ಜರಿ 50 ದಿನಗಳನ್ನು ಪೂರೈಸಿತ್ತು. ಮಾತ್ರವಲ್ಲದೇ ಆರಂಭದಿಂದಲೇ ಟ್ರೈಲರ್ ಮೂಲಕ ಚಿತ್ರ ಸದ್ದು ಮಾಡಿತ್ತು. ಇನ್ನು 199,213 ಅಭಿಮಾನಿಗಳ ವೀಕ್ಷಣೆಗೆ ಒಳಪಟ್ಟ ಕಿಚ್ಚನ 'ರನ್ನ' ಟ್ರೈಲರ್ ಈ ಬಾರಿ ಎಂಟನೇ ಸ್ಥಾನದಲ್ಲಿದೆ. ['ರನ್ನ' ಸುದೀಪ್ ಜತೆ ನಟಿಸಿದ ಖುಷಿಯಲಿ ಆನಂದಭಾಷ್ಪ]

ಹೊಸಬರ 'ಆರಂಭ'

ನಿರ್ದೇಶಕ ಎಸ್ ಹಬಿ ಹನಕೆರೆ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಆರಂಭ' ಸಿನಿಮಾ ಆರಂಭದಿಂದಲೂ ತುಂಬಾ ಸದ್ದು ಮಾಡಿತ್ತು. ಜೊತೆಗೆ ಚಿತ್ರದ ಟೀಸರ್ ಮತ್ತು ಟ್ರೈಲರ್ ಗಳು ಕೂಡ ಚಿತ್ರತಂಡದವರನ್ನು ತಿರುಗಿ ನೋಡುವಂತೆ ಮಾಡಿತ್ತು. ಸುಮಾರು 175,175 ಜನ ವೀಕ್ಷಣೆ ಮಾಡಿದ್ದರಿಂದ 'ಆರಂಭ' ಟ್ರೈಲರ್ ಒಂಭತ್ತನೆಯ ಸ್ಥಾನ ಪಡೆದುಕೊಂಡಿದೆ. ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ..

ವರ್ಮಾರ 'ಕಿಲ್ಲಿಂಗ್ ವೀರಪ್ಪನ್'

ಚಿತ್ರ ಸೆಟ್ಟೇರಿದಾಗಿನಿಂದ ಗಾಂಧಿನಗರದಲ್ಲಿ ಭಾರಿ ಸುದ್ದಿ ಮಾಡುತ್ತಿದ್ದ ರಾಮ್ ಗೋಪಾಲ್ ವರ್ಮಾ ಅವರ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾದ ಟ್ರೈಲರ್ 139,572 ವೀಕ್ಷಕರನ್ನು ಸಂಪಾದಿಸಿದೆ. ಕುಖ್ಯಾತ ಕಾಡುಗಳ್ಳ ವೀರಪ್ಪನ್ ಅವರ ನಿಜ ಜೀವನಕಥೆಯಾಧರಿತ ಈ ಸಿನಿಮಾ ಇನ್ನು ಬಿಡುಗಡೆಯಾಗಿಲ್ಲ. ಆದರೂ ಟ್ರೈಲರ್ ಮಾತ್ರ ಸುದ್ದಿ ಮಾಡಿ ಭರ್ತಿ ಹತ್ತನೇ ಸ್ಥಾನವನ್ನು ಅಲಂಕರಿಸಿದೆ. [ಟ್ರೈಲರ್: ದೊಡ್ಡ ಯುದ್ಧ ಗೆಲ್ಲ ಬೇಕು ಅಂದ್ರೆ, ಸಣ್ಣ ಸಣ್ಣ ಯುದ್ದ ಸೋಲಬೇಕು]

ಕೃಷ್ಣಲೀಲಾ ಟ್ರೈಲರ್

ಸ್ಯಾಂಡಲ್ ವುಡ್ ನಲ್ಲಿ 'ಕೃಷ್ಣ' ಎಂದೇ ಖ್ಯಾತಿ ಗಳಿಸಿರುವ ಅಜೇಯ್ ರಾವ್ ಅವರ 'ಕೃಷ್ಣಲೀಲಾ' ಭರ್ಜರಿ 100 ದಿನಗಳನ್ನು ಆಚರಿಸಿದೆ. ಚಿತ್ರ ಚೆನ್ನಾಗಿ ರೆಸ್ಪಾನ್ಸ್ ಗಳಿಸಿದರೂ ಕೂಡ ಟ್ರೈಲರ್ ಮಾತ್ರ ಜಾಸ್ತಿ ಸದ್ದು ಮಾಡಿಲ್ಲ. ಆದ್ದರಿಂದ 125,320 ವೀಕ್ಷಕರನ್ನು ಸಂಪಾದಿಸಿ 11 ಸ್ಥಾನಕ್ಕೆ ಕುಸಿದಿದೆ. ಚಿತ್ರದ ಕಲರ್ ಫುಲ್ ಟ್ರೈಲರ್ ಇಲ್ಲಿದೆ ನೋಡಿ.

ವಿನಯ್ ರಾಜ್ ಅವರ 'ಸಿದ್ದಾರ್ಥ'

ರಾಜ್ ಕುಟುಂಬದ ಮತ್ತೊಂದು ಕುಡಿ 'ಸಿದ್ದಾರ್ಥ' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದು, ಚಿತ್ರ ಮಾತ್ರ ಅಷ್ಟಾಗಿ ಯಶಸ್ಸು ಕಾಣಲಿಲ್ಲ. ಆದರೆ ಟ್ರೈಲರ್ ತಕ್ಕ ಮಟ್ಟಿಗೆ ಸದ್ದು ಮಾಡಿ 124,201 ವೀಕ್ಷಕರನ್ನು ಸಂಪಾದಿಸಿ ಹನ್ನೆರಡನೇ ಸ್ಥಾನ ಗಿಟ್ಟಿಸಿಕೊಂಡಿದೆ. ಚಿತ್ರದ ಬ್ಯೂಟಿಫುಲ್ ಟ್ರೈಲರ್ ಇಲ್ಲಿದೆ ನೋಡಿ..

ಚಾಲೆಂಜಿಂಗ್ ಸ್ಟಾರ್ 'Mr ಐರಾವತ' ಟ್ರೈಲರ್

ಶೂಟಿಂಗ್ ಶುರುವಾದಗಿನಿಂದಲೇ ಗಾಂಧಿನಗರದಲ್ಲಿ ದರ್ಶನ್ ಅವರ 'Mr ಐರಾವತ' ಟಾಕ್ ಆಫ್ ದ ಟಾಪಿಕ್ ಆಗಿತ್ತು. ಪೋಸ್ಟರ್ ಗಳ ಮೂಲಕ ಸಖತ್ ಸದ್ದು ಮಾಡಿದ ಸಿನಿಮಾ ಭರ್ಜರಿ ಹಾಫ್ ಸೆಂಚುರಿ ಬಾರಿಸಿತು. ಆದರೆ ಟ್ರೈಲರ್ ಯಾಕೋ ಹಿಟ್ ಆಗಲಿಲ್ಲ. ಆದ್ದರಿಂದ 123,958 ವೀಕ್ಷಕರ ಮನಗೆದ್ದು ಹದಿಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ. ['ಮಿಸ್ಟರ್ ಐರಾವತ' ಟ್ರೈಲರ್ ದರ್ಶನ್ ಖಡಕ್ ಲುಕ್]

'ವಾಸ್ಕೋಡಿಗಾಮ'ನಾದ ಕಿಶೋರ್

ನಿಜ ಜೀವನದಲ್ಲಿ ಗುರುವಾಗಿದ್ದ ನಟ ಕಿಶೋರ್ ಅವರು 'ವಾಸ್ಕೋಡಿಗಾಮ' ಚಿತ್ರದಲ್ಲಿ ವಿಭಿನ್ನ ಗುರುವಿನ ಪಾತ್ರ ಮಾಡಿದ್ದರು. ವಿಭಿನ್ನ ಸಿನಿಮಾ ಆದ್ದರಿಂದ ಟ್ರೈಲರ್ ಕೊಂಚ ಸೌಂಡ್ ಮಾಡಿತ್ತು. ಆದರೂ ಹೆಚ್ಚೇನು ಸುದ್ದಿ ಮಾಡದ ಕಿಶೋರ್ ಅವರ 'ವಾಸ್ಕೋಡಿಗಾಮ' ಸಿನಿಮಾದ ಟ್ರೈಲರ್ 104,146 ವೀಕ್ಷಕರನ್ನು ಸಂಪಾದಿಸಿ ಬರೋಬ್ಬರಿ ಹದಿನಾಲ್ಕನೇ ಸ್ಥಾನಕ್ಕೆ ಕುಸಿದಿದೆ. [ಕಾಲೇಜುಗಳಿಗೆ ವಾಸ್ಕೋಡಿಗಾಮನಾಗಿ ಕಿಶೋರ್ ಎಂಟ್ರಿ]

ಲಂಕೇಶ್ ಅವರ 'ಲವ್ ಯೂ ಆಲಿಯಾ'

ಸ್ಟಾರ್ ನಟರಾದ ಕ್ರೇಜಿಸ್ಟಾರ್ ರವಿಚಂದ್ರನ್, ಅತಿಥಿ ಪಾತ್ರದಲ್ಲಿ ಕಿಚ್ಚ ಸುದೀಪ್, ಚಂದನ್, ದಕ್ಷಿಣ ಭಾಗದ ನಟಿ ಭೂಮಿಕಾ ಚಾವ್ಲಾ ಅವರು ಕಾಣಿಸಿಕೊಂಡಿದ್ದ 'ಲವ್ ಯೂ ಆಲಿಯಾ' ಸಿನಿಮಾ ಮಾತ್ರ ಈ ವರ್ಷ ಅಷ್ಟಾಗಿ ಯಶಸ್ಸು ಕಾಣಲಿಲ್ಲ. ಹಾಗಾಗಿ ಟ್ರೈಲರ್ ಕೂಡ ಅಷ್ಟಾಗಿ ಹಿಟ್ ಆಗಲಿಲ್ಲ, ಆದ್ದರಿಂದ ಭರ್ತಿ 100,266 ವೀಕ್ಷಕರನ್ನು ಸಂಪಾದಿಸಿ ಕೊನೆಯಲ್ಲಿ ಹದಿನೈದನೇ ಸ್ಥಾನಕ್ಕೆ ಕುಸಿದಿದೆ. ಚಿತ್ರದ ಕಲರ್ ಫುಲ್ ಟ್ರೈಲರ್ ನೋಡಿ..

English summary
Many movie trailers have won our hearts and have made it to the top watched trailers of 2015. With so many Sandalwood movie trailers like 'Mr Airavata', 'Ranna', 'Uppi 2' 'Rathaavara' and many more, YouTube has been searched again and again by viewers to watch the trailers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada