»   » 'ರನ್ನ' ಸುದೀಪ್ ಜತೆ ನಟಿಸಿದ ಖುಷಿಯಲಿ ಆನಂದಭಾಷ್ಪ

'ರನ್ನ' ಸುದೀಪ್ ಜತೆ ನಟಿಸಿದ ಖುಷಿಯಲಿ ಆನಂದಭಾಷ್ಪ

Posted By: ಜೀವನರಸಿಕ
Subscribe to Filmibeat Kannada

ಅದು 'ರನ್ನ' ಚಿತ್ರದ ಪತ್ರಿಕಾಗೋಷ್ಠಿ. ಅದು ಆಡಿಯೋ ರಿಲೀಸ್ ಅಂದ್ರೂ ಮತ್ತೊಂದು ರೀತಿಯಲ್ಲಿ ಸರೀನೇ. ಯಾಕಂದ್ರೆ ಚಿತ್ರತಂಡ ಮಾಧ್ಯಮದ ಮುಂದೆ ಧ್ವನಿ ಸುರುಳಿ ಬಿಡುಗಡೆ ಮಾಡಿರಲಿಲ್ಲ. ಇಷ್ಟಕ್ಕೂ ರನ್ನ ಚಿತ್ರ ಆರಂಭವಾದಾಗಿನಿಂದ ಒಮ್ಮೆಯೂ ಮಾಧ್ಯಮದ ಮುಂದೆ ಬಂದಿರಲಿಲ್ಲ.

ರನ್ನ ಚಿತ್ರದಲ್ಲಿ ದೊಡ್ಡ ತಾರಾಗಣವಿದೆ. ಸುದೀಪ್ ಜೊತೆಗೆ ರಚಿತಾರಾಮ್, ಹರಿಪ್ರಿಯ ಇದ್ರೆ ಪ್ರಕಾಶ್ ರಾಜ್, ಮಧುಬಾಲಾ, ಚಿಕ್ಕಣ್ಣ ಸಾಧುಕೋಕಿಲಾ ಮುಖ್ಯಪಾತ್ರಗಳ ಹೊರತಾಗಿ ಟೈಗರ್ ಧರ್ಮ, ವಿಲನ್ ರವಿಚೇತನ್, ಶರತ್ ಲೋಹಿತಾಶ್ವ, ಮೈಕೋ ಚಂದ್ರು, ಕುರಿ ಪ್ರತಾಪ್, ಮುನಿ ಮುಂತಾದ ಕಲಾವಿದರು ಅಭಿನಯಿಸಿರೋ ಚಿತ್ರ ಇದು.


ಚಿತ್ರ ತಂಡವೇ ರಿಲೀಸ್ ಸಂಭ್ರಮದ ಪ್ರೆಸ್ಮೀಟ್ನಲ್ಲಿತ್ತು. ಕಿಚ್ಚ ಸುದೀಪ್ ಜೊತೆಗೆ ಅದ್ಭುತ ಸಿನಿಮಾವೊಂದರಲ್ಲಿ ನಟಿಸಿದ ಖುಷಿ ಅಷ್ಟೂ ಹಿರಿಯ ಕಿರಿಯ ಕಲಾವಿದರಲ್ಲಿತ್ತು. ರನ್ನನಾಗಿ ಕಿಚ್ಚ ಸುದೀಪ್ ಎಲ್ಲರ ಫೇವರೀಟ್ ಆಗಿದ್ದೇಕೆ. ವೇದಿಕೆಯ ಮೇಲೆ ಆನಂದಭಾಷ್ಪ ಯಾಕೆ ಬಂತು ಸ್ಲೈಡ್ ತಿರುಗಿಸ್ತಾ ಹೋಗಿ.. [ಭೂಕಂಪ-ಸುನಾಮಿ ಒಂದು ಮಾಡಿದ 'ಸಿಂಹ']


ಕಿಚ್ಚ ಸುದೀಪ್ ಅಂದ್ರೆ ಹುಲಿ

ರನ್ನ ಚಿತ್ರದಲ್ಲಿ ಮೊದಲ ಬಾರಿಗೆ ಕಿಚ್ಚನ ಜೊತೆ ಅಭಿನಯಿಸಿರೋ ಚಿಕ್ಕಣ್ಣ. ಎರಡನೇ ದಿನ ಶೂಟಿಂಗ್ನಲ್ಲಿ ಸುದೀಪ್ ಜೊತೆ ಅಭಿನಯಿಸೋಕೆ ಹೆದರಿಕೊಂಡಿದ್ರಂತೆ. ಸುದೀಪ್ ಪಕ್ಕದಲ್ಲಿ ನಿಂತ್ರೆ ಹುಲಿಯ ಜೊತೆ ನಿಂತ ಹಾಗಾಗುತ್ತೆ ಅಂದಿದ್ರಂತೆ.


ಕಿಚ್ಚ ಸಖತ್ ಕೂಲ್ ಮಗಾ

ಆದ್ರೆ ಕಿಚ್ಚನ ಜೊತೆ ಬೆರೆತವರು ಹೇಳಿದಂತೆ, ಕಿಚ್ಚ ಎಷ್ಟು ಕೂಲ್ ಅನ್ನೋ ಅನುಭವ ಚಿಕ್ಕಣ್ಣನಿಗೆ ಆ ನಂತ್ರ ಆಯ್ತಂತೆ. ಕಿಚ್ಚ ಒಬ್ಬ ನಿರ್ದೇಶಕನಾಗಿಯೂ ನಟರಿಗೆ ಸಾಕಷ್ಟು ಸಲಹೆ ಕೊಟ್ಟು ಚಿತ್ರವನ್ನ ಮತ್ತಷ್ಟು ಪಕ್ವವಾಗಿಸಿದ್ದಾರಂತೆ.


ಕಿಚ್ಚ ಅಂದ್ರೆ ಹೆಮ್ಮೆ ಸೂಪರ್

ಪಕ್ಕದ ಭಾಷೆಗಳಲ್ಲೂ ತನ್ನ ಪ್ರತಿಭೆಯಿಂದ ಹೆಸರು ಮಾಡಿರೋ ಅಭಿನಯ ಚಕ್ರವರ್ತಿಯ ಬಗ್ಗೆ ವೇದಿಕೆಯೇರಿದ ಪ್ರತಿಯೊಬ್ಬರ ಮುಖದಲ್ಲೂ ಹೆಮ್ಮೆಯಿತ್ತು. ಇನ್ನು ರಚಿತಾರಾಮ್ ಕೂಡ ಸುದೀಪ್ ಅಂದ್ರೆ ಸೂಪರ್ ಅಂದ್ರು..


ತಂದೆಯಂತೆ ಕೈಹಿಡಿದರು ಎಂದು ಕಣ್ಣೀರಿಟ್ಟ ತರುಣ್

ಸುದೀಪ್ ನಮ್ಮನ್ನ ತಂದೆಯಂತೆ ಕೈ ಹಿಡಿದು ನಡೆಸಿದ್ದಾರೆ. ಮಾರ್ಗದರ್ಶಕರಾಗಿ ಪ್ರತಿ ಹೆಜ್ಜೆಯಲ್ಲೂ ಜೊತೆಗಿರ್ತಾರೆ. ಅವ್ರ ಋಣ ತೀರಿಸೋಕಾಗಲ್ಲ ಅಂತ ಭಾವುಕರಾದ್ರೂ. ಮತ್ತೆರಡು ಮಾತಾಡುವಷ್ಟರಲ್ಲಿ ಆನಂದಭಾಷ್ಪದ ಜೊತೆ ಭಾವುಕರಾಗಿ ವೇದಿಕೆಯಿಂದ ಸರಿದ್ರು.


ಕಿಚ್ಚನ ಕಣ್ಣೂ ತುಂಬಿ ಬಂತು

ವೇದಿಕೆಯಲ್ಲಿ ತರುಣ್ ಮಾತ್ನಾಡ್ತಿದ್ರೆ ವೇದಿಕೆಯ ಮುಂಬಾಗ ಕುಳಿತಿದ್ದ ಕಿಚ್ಚ ಕೂಡ ಭಾವುಕರಾದ್ರು. ವೇದಿಕೆ ಏರಿದ ಕಿಚ್ಚನ ಕಣ್ಣಲ್ಲೂ ನೀರಿತ್ತು. ಚಿತ್ರತಂಡದ ಬಗ್ಗೆ ಸಂತಸವಿತ್ತು. ತರುಣ್ ಮತ್ತು ನಂದಕಿಶೋರ್ ಅಣ್ಣ ತಮ್ಮ ಜೋಡಿಗೆ ಕಿಚ್ಚ ಶಹಬ್ಬಾಸ್ ಅಂದ್ರು.


ನಂದಕಿಶೋರ್ ಮಾತಾಡಲೇ ಇಲ್ಲ

ತಮ್ಮ ತರುಣ್ ಜೊತೆ ವೇದಿಕೆಗೆ ಬಂದ ನಿರ್ದೇಶಕ ನಂದಕಿಶೋರ್ ತಮ್ಮ ಕಣ್ಣೀರಾಗಿದ್ದರಿಂದ ತಾವು ಭಾವುಕರಾದ್ರೂ. ವೇದಿಕೆಯ ಬದಿಗೆ ಸರಿದು ಕಣ್ಣೀರು ಒರೆಸಿಕೊಂಡ್ರು. ಕಿಚ್ಚನ ರನ್ನದಂತಹಾ ಗುಣವನ್ನ ಎಲ್ಲರೂ ಗುಣಗಾನ ಮಾಡಿದ್ದೇ ಮಾಡಿದ್ದು.


ರನ್ನ ಟ್ರೈಲರ್ ಸೂಪರ್

ಇನ್ನು ರನ್ನ ಚಿತ್ರದ ರಂಗು ರಂಗಾದ ಅಷ್ಟೇ ರಫ್ ಅಂಡ್ ಟಫ್ ಆದ ಟ್ರೈಲರ್ ಹೊರ ಬಂದಿದ್ದು ಚಿತ್ರ ಜೂನ್ 4ರಂದು ತೆರೆಗೆ ಬರುತ್ತೆ.


ಬಹುನಿರೀಕ್ಷಿತ ಕಿಚ್ಚನ ' ರನ್ನ ' ಟ್ರೈಲರ್ ಔಟ್

ಈಗಷ್ಟೇ ರಿಲೀಸ್ ಆಗಿರುವ 'ರನ್ನ' ಚಿತ್ರದ ಲೇಟೆಸ್ಟ್ ಟ್ರೇಲರ್ ಒಮ್ಮೆ ನೀವೇ ನೋಡಿಬಿಡಿ....


English summary
Entire Ranna team praised Kiccha Sudeep for his dedication, involvement and taking care of everyone. Press conference saw some emotional scenes. Ranna will be hitting the big screen on June 4 all over Karnataka. Sudeep, Rachita Ram, Haripriya, Chikkanna are in the lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada