»   » ಮದರ್ಸ್ ಡೇ ವಿಶೇಷ: ಅಮ್ಮನ ಪ್ರೀತಿ ಸಾರುವ ಚೆಂದದ 10 ಕನ್ನಡ ಚಿತ್ರಗಳು

ಮದರ್ಸ್ ಡೇ ವಿಶೇಷ: ಅಮ್ಮನ ಪ್ರೀತಿ ಸಾರುವ ಚೆಂದದ 10 ಕನ್ನಡ ಚಿತ್ರಗಳು

Posted By:
Subscribe to Filmibeat Kannada

'ಅಮ್ಮಾ' ಅನ್ನೋ ಪದದಲ್ಲಿ ಸುಂದರವಾದ ಭಾವನೆ ಇದೆ, ಒಂಥರಾ ಅಪ್ಯಾಯಮಾನ ಇದೆ. ಅಮ್ಮ ಅನ್ನೋ ಪದ ಹೇಳಲು ಅದೇನೋ ಹಿಗ್ಗು-ಸಂಭ್ರಮ, ಸಡಗರ, ಸಂತೋಷ ಎಲ್ಲವೂ ಆಗುತ್ತದೆ. ಒಂಭತ್ತು ತಿಂಗಳು ಹೊತ್ತು-ಹೆತ್ತು ಸಾಕಿ ಸಲಹುವ ಮಮತಾಮಯಿ ತಾಯಿಗೆ ಈ ಪ್ರಪಂಚದಲ್ಲಿ ಯಾರೂ ಸರಿ ಸಾಟಿನೇ ಇಲ್ಲ.

ಇಂತಹ ಕರುಣಾಮಯಿ ಅಮ್ಮನಿಗೂ ಅಂತ ಒಂದು ವಿಶೇಷ ದಿನ ಇದೆ. ಹೌದು ಮೇ ತಿಂಗಳ ಎರಡನೇ ಭಾನುವಾರವನ್ನು 'ವಿಶ್ವ ಅಮ್ಮಂದಿರ' ದಿನವಾಗಿ ಎಲ್ಲಾ ಕಡೆ ಬಹಳ ಸಂಭ್ರಮದಿಂದ ಆಚರಿಸುತ್ತಾರೆ.[ಬೆಳ್ಳಿಪರದೆ ಬೆಳಗಿದ ಕನ್ನಡದ ಚಿನ್ನದಂತಹ ಅಮ್ಮಂದಿರು]

ಅಂದಹಾಗೆ 'ಅಮ್ಮಂದಿರ ದಿನ' ಅಂದಾಗ ನೆನಪಾಯಿತು, ಅಮ್ಮಂದಿರ ಬಗ್ಗೆ ನಮ್ಮ ಕನ್ನಡ ಚಿತ್ರರಂಗದಲ್ಲೂ ಅಮ್ಮನ ಪ್ರೀತಿಯನ್ನು ಸಾರುವ ಹಲವಾರು ಸಿನಿಮಾಗಳು ಬಂದು ಹೋಗಿವೆ. ಮಾತ್ರವಲ್ಲದೇ ಅಮ್ಮನ ಮಹತ್ವ ಎಂತಹದ್ದು ಅನ್ನೋದನ್ನ ಹಲವಾರು ಸಿನಿಮಾಗಳು ನಮಗೆ ತೋರಿಸಿಕೊಟ್ಟಿವೆ.[ಮದರ್ಸ್ ಡೇ ವಿಶೇಷ: ಚಿತ್ರರಂಗದ ಸ್ಟಾರ್ ತಾಯಿ ಮಕ್ಕಳು]

ಇದೀಗ 'ವಿಶ್ವ ಅಮ್ಮಂದಿರ' ದಿನದ ಅಂಗವಾಗಿ ವಿಶೇಷ ಅಂತ ಅಮ್ಮಂದಿರ ಮಹತ್ವ ಸಾರುವ ಟಾಪ್ ಹತ್ತು ಕನ್ನಡ ಚಿತ್ರಗಳ ಚಿತ್ರಣವನ್ನು ನಾವು ನಿಮಗೆ ತೋರಿಸುತ್ತೇವೆ. ನೋಡಿ ಕೆಳಗಿನ ಸ್ಲೈಡುಗಳಲ್ಲಿ...

ತಾಯಿಗಿಂತ ದೇವರಿಲ್ಲ

1977 ರಲ್ಲಿ ತೆರೆಕಂಡ ಅಮ್ಮನ ಪ್ರೀತಿಯನ್ನು ಸಾರುವ 'ತಾಯಿಗಿಂತ ದೇವರಿಲ್ಲ' ಚಿತ್ರದಲ್ಲಿ 'ಅಮ್ಮ ಎಂದರೆ ಮೈ ಮನವೆಲ್ಲ ಹೂವಾಗುವುದಮ್ಮ' ಎಂದು ಗಾಯಕಿ ಎಸ್ ಜಾನಕಿ ಅವರು ಹಾಡಿರುವ ಅಮ್ಮನಿಗಾಗಿ ರಚಿಸಿದ ಸುಂದರವಾದ ಹಾಡೊಂದಿದೆ. ಇದನ್ನು ಕೇಳುತ್ತಿದ್ದರೆ, ಮೈಯೆಲ್ಲಾ ಪುಳಕವಾಗುತ್ತದೆ. ಈ ಚಿತ್ರದಲ್ಲಿ ನಟ ಶ್ರೀನಾಥ್, ನಟಿ ಜಯಂತಿ, ನಟಿ ಮಂಜುಳಾ, ಲೋಕನಾಥ್, ವಜ್ರಮುನಿ ಮುಂತಾದವರು ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು.[ಅಮ್ಮನ ದಿನಕ್ಕಾಗಿ ಟಿಎನ್ ಸೀತಾರಾಂ ನೆನಪುಗಳು]

ಕೆರಳಿದ ಸಿಂಹ

ವರನಟ ಡಾ.ರಾಜ್ ಕುಮಾರ್ ಮತ್ತು ನಟಿ ಸರಿತ ಅವರು ಕಾಣಿಸಿಕೊಂಡಿದ್ದ 'ಕೆರಳಿದ ಸಿಂಹ' ಚಿತ್ರ 1981 ರಲ್ಲಿ ತೆರೆಕಂಡಿತ್ತು. ಈ ಚಿತ್ರದಲ್ಲಿ ಡಾ. ರಾಜ್ ಕುಮಾರ್ ಮತ್ತು ಪಿ.ಬಿ ಶ್ರೀನಿವಾಸ್ ಅವರು ಧ್ವನಿ ನೀಡಿರುವ 'ಅಮ್ಮ ನೀನು ನಮಗಾಗಿ' ಅನ್ನೋ ಸುಂದರವಾದ ಹಾಡಿದೆ. ಇದರಲ್ಲಿ ತಾಯಿಯ ಬಗ್ಗೆ ಬಹಳ ರಸವತ್ತಾಗಿ ಬಣ್ಣಿಸಲಾಗಿದೆ.[ಅಮ್ಮನ ನೆನೆಯುವ ಚೆಂದದ ಕನ್ನಡ ಸಿನೆಮಾ ಹಾಡು]

ಅಮ್ಮ

1968 ರಲ್ಲಿ ತೆರೆಕಂಡ 'ಅಮ್ಮ' ಚಿತ್ರದಲ್ಲಿ ಡಾ.ರಾಜ್ ಕುಮಾರ್ ಮತ್ತು ನಟಿ ಭಾರತಿ ಅವರು ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದಾರೆ. ಬಿ.ಆರ್ ಪಂತುಲು ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಮಮತಾಮಯಿ ಅಮ್ಮನ ಬಗ್ಗೆ ಬಣ್ಣಿಸಲಾಗಿದೆ.

ತಾಯಿಯ ಮಡಿಲಲ್ಲಿ

1981 ರಲ್ಲಿ ತೆರೆಕಂಡ 'ತಾಯಿಯ ಮಡಿಲಲ್ಲಿ' ಚಿತ್ರದಲ್ಲಿ ನಟ ಅಶೋಕ್ ಮತ್ತು ನಟಿ ಆರತಿ ನಟಿಸಿದ್ದರು. ಈ ಚಿತ್ರದಲ್ಲಿ 'ಅಮ್ಮ ನೀನು ನಕ್ಕರೆ' ಅನ್ನೋ ಚೆಂದದ ಹಾಡಿದ್ದು, ನಟಿ ಲೀಲಾವತಿ ಅವರು ತಾಯಿಯ ಪಾತ್ರದಲ್ಲಿ ಮಿಂಚಿದ್ದರು.

ತಾಯಿಯ ಮಡಿಲು

2007ರಲ್ಲಿ ತೆರೆಕಂಡ 'ತಾಯಿಯ ಮಡಿಲು' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಟಿ ರಕ್ಷಿತಾ ಅವರು ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಬಲು ಜೋರಾಗೇ ಇದ್ದು, ಸಿನಿಮಾ ನೋಡುತ್ತಿದ್ದವರು ಕಣ್ಣೀರು ಸುರಿಸೋದು ಗ್ಯಾರಂಟಿ. ಚಿತ್ರಕ್ಕೆ ಎಸ್ ನಾರಾಯಣ್ ಅವರು ನಿರ್ದೇಶನ ಮಾಡಿದ್ದರು.

'ಅಣ್ಣಯ್ಯ'

ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ನಟಿ ಮಧು ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದ 'ಅಣ್ಣಯ್ಯ' ಸಿನಿಮಾ 1993 ರಲ್ಲಿ ತೆರೆಕಂಡಿದ್ದು, ಈ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ಅವರ ಅಮ್ಮ ಅಂದರೆ ಪ್ರಾಣ. ಈ ಚಿತ್ರದಲ್ಲಿ ಅಮ್ಮ-ಮಗನ ಸಂಬಂಧವನ್ನು ಹೇಳಲಾಗಿದೆ. ನಿರ್ದೇಶಕ ಡಿ.ರಾಜೇಂದ್ರ ಬಾಬು ಅವರು ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ.

ಹಾಲುಂಡ ತವರು

1994 ರಲ್ಲಿ ತೆರೆಕಂಡ 'ಹಾಲುಂಡ ತವರು' ಎಂಬ ಚಿತ್ರದಲ್ಲಿ ನಟ ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಮತ್ತು ಸಿತಾರಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ 'ತಾಯಿ ಇಲ್ಲದಂತೆ' ಎಂಬ ಹಾಡಿದ್ದು, ತಾಯಿಯ ಪ್ರಾಮುಖ್ಯತೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಚಿತ್ರಕ್ಕೆ ಡಿ.ರಾಜೇಂದ್ರ ಬಾಬು ನಿರ್ದೇಶನ ಮಾಡಿದ್ದರು.

ಎಕ್ಸ್ ಕ್ಯೂಸ್ ಮಿ

2003 ರಲ್ಲಿ ತೆರೆಕಂಡ ರೋಮ್ಯಾಂಟಿಕ್ ಡ್ರಾಮಾ 'ಎಕ್ಸ್ ಕ್ಯೂಸ್ ಮಿ' ಚಿತ್ರದಲ್ಲಿ ತಾಯಿಯ ಮಹತ್ವವನ್ನು ಕೂಡ ಸಾರಲಾಗಿದೆ. ಈ ಚಿತ್ರದಲ್ಲಿ ನಟಿ ಸುಮಲತಾ ಅಂಬರೀಶ್ ಅವರು ತಾಯಿಯ ಪಾತ್ರ ವಹಿಸಿದ್ದರು. ಈ ಚಿತ್ರದಲ್ಲಿ 'ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರು' ಎಂಬ ಹಾಡಿದ್ದು ಕೇಳುಗರ ಕಣ್ಣಂಚಲ್ಲಿ ನೀರುಕ್ಕಿಸುತ್ತದೆ. ಪ್ರೇಮ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಚಿತ್ರದಲ್ಲಿ ನಟ ಸುನೀಲ್, ನಟಿ ರಮ್ಯಾ ಮತ್ತು ನಟ ಅಜೇಯ್ ರಾವ್ ಮಿಂಚಿದ್ದರು.

ಮೌರ್ಯ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ನಟಿ ಮೀರಾ ಜಾಸ್ಮೀನ್ ನಟಿಸಿದ್ದ 'ಮೌರ್ಯ' ಚಿತ್ರದಲ್ಲಿ ಅಮ್ಮ-ಮಗನ ಪ್ರೀತಿಯ ಬಗ್ಗೆ ಸುಂದರವಾಗಿ ಬಣ್ಣಿಸಲಾಗಿದೆ. ನಿರ್ದೇಶಕ ಎಸ್ ನಾರಾಯಣ್ ನಿರ್ದೇಶನ ಮಾಡಿದ್ದ ಈ ಚಿತ್ರ 2004ರಲ್ಲಿ ತೆರೆಕಂಡು ಎಲ್ಲರ ಮೆಚ್ಚುಗೆ ಗಳಿಸಿತ್ತು. ಈ ಚಿತ್ರದಲ್ಲಿರುವ 'ಅಮ್ಮ ಅಮ್ಮ ಐ ಲವ್ ಯೂ' ಹಾಡು ಎಲ್ಲರ ಬಾಯಲ್ಲೂ ಗುನುಗುನಿಸುತ್ತಿತ್ತು.

ಜೋಗಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಬ್ರೇಕ್ ಕೊಟ್ಟ ಪ್ರೇಮ್ ನಿರ್ದೇಶನದ 'ಜೋಗಿ' ಚಿತ್ರದಲ್ಲಿ ಅಮ್ಮ-ಮಗನ ಸೆಂಟಿಮೆಂಟ್ ಇಡೀ ಪ್ರೇಕ್ಷಕರ ಮನಗೆದ್ದಿತ್ತು. ಇದರಲ್ಲಿರುವ 'ಬೇಡುವೆನು ವರವನ್ನು' ಹಾಡಂತೂ ಸೂಪರ್ ಹಿಟ್ ಆಗಿತ್ತು. ಪ್ರೇಮ್ ನಿರ್ದೇಶನ ಮಾಡಿದ್ದ ಈ ಚಿತ್ರ 2005 ರಲ್ಲಿ ತೆರೆ ಕಂಡಿತ್ತು. ತದನಂತರ ಇತ್ತೀಚೆಗೆ ಶಿವಣ್ಣ ಅವರು ತಾಯಿ ಸೆಂಟಿಮೆಂಟ್ ಇರುವ 'ವಜ್ರಕಾಯ' ಚಿತ್ರದಲ್ಲಿ ನಟಿಸಿದ್ದರು.

English summary
It is said that, God could not be everywhere, and therefore he made MOTHERS". Celebrate this Mothers Day with the best kannada movies on mothers. Here is the list check it.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada