Don't Miss!
- Lifestyle
ನಿಮ್ಮ ಕೂದಲು ಉದುರುವುದಕ್ಕೂ ಮೊಬೈಲ್ಗೂ ಸಂಬಂಧವಿದೆ ಗೊತ್ತೆ?
- News
'ಈ ಬಾರಿ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ' ಕೊಡಿಶ್ರೀಗಳ ರಾಜಕೀಯ ಭವಿಷ್ಯ
- Sports
ಲೂನಾ ಸವಾರಿ ಮಾಡುವುದನ್ನು ನಿಲ್ಲಿಸು ಎಂದು ಚೇತೇಶ್ವರ ಪೂಜಾರಗೆ ಹೇಳಿದ್ದ ರವಿಶಾಸ್ತ್ರಿ
- Automobiles
ವೇಗವಾಗಿ ಮುನ್ನುಗ್ಗುತ್ತಿವೆ ಹೀರೋ, ಹೋಂಡಾ... ಹಿಂದೆಯೇ ಬಂತು ಟಿವಿಎಸ್!
- Technology
ನಿಮ್ಮ ಮೊಬೈಲ್ನಲ್ಲಿ ಹೀಗೆ ಮಾಡಿ, ಸುಲಭವಾಗಿ ತಿಂಗಳ ಆದಾಯ ಗಳಿಸಿ!
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದೊರೆಸ್ವಾಮಿ ನಿಧನಕ್ಕೆ ಕಂಬನಿ ಮಿಡಿದ ಸಿನಿತಾರೆಯರು
ಹಿರಿಯ ಸ್ವಾತಂತ್ರ್ಯ್ ಹೋರಾಟಗಾರ, ಚಿಂತಕ ಎಚ್.ಎಸ್.ದೊರೆಸ್ವಾಮಿ ಇಂದು ನಿಧನರಾಗಿದ್ದಾರೆ. ಅವರಿಗೆ 104 ವರ್ಷ ವಯಸ್ಸಾಗಿತ್ತು.
ಸ್ವಾತಂತ್ರ್ಯ ಹೋರಾಟದಿಂದ ಮೊದಲುಗೊಂಡು ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡು ಶೋಷಿತರ ಪರವಾಗಿ ದನಿ ಎತ್ತುತ್ತಿದ್ದ ಧೀಮಂತ ವ್ಯಕ್ತಿತ್ವದ ದೊರೆಸ್ವಾಮಿ ನಿಧನಕ್ಕೆ ಕನ್ನಡ ಸಿನಿಮಾರಂಗದ ಕೆಲವರು ಕಂಬನಿ ಮಿಡಿದಿದ್ದಾರೆ.
ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಹಲವಾರು ಸಚಿವರುಗಳು ದೊರೆಸ್ವಾಮಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಿನಿಮಾ ರಂಗದೊಂದಿಗೆ ಹೆಚ್ಚಿನ ನಂಟು ಹೊಂದಿರದೇ ಇದ್ದರು ರಂಗಭೂಮಿಯೊಂದಿಗೆ ದೊರೆಸ್ವಾಮಿ ನಂಟು ಹೊಂದಿದ್ದರು. ಹಲವು ರಂಗಕರ್ಮಿಗಳು ದೊರೆಸ್ವಾಮಿ ಅವರ ಆಪ್ತವಲಯದಲ್ಲಿದ್ದರು. ರಂಗಭೂಮಿಯ ಹಲವರು ಸಹ ದೊರೆಸ್ವಾಮಿ ಅಗಲಿಕಗೆ ಸಂತಾಪ ಸೂಚಿಸಿದ್ದಾರೆ.

ನೆನಪು ಮೆಲಕು ಹಾಕಿದ ಚೇತನ್ ಅಹಿಂಸ
''2010 ರಲ್ಲಿ, ದೊರೆಸ್ವಾಮಿ ಸರ್ ನನ್ನ ಚಲನಚಿತ್ರವನ್ನು ಲಾಂಚ್ ಮಾಡಿದಾಗ ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾದೆ ಅವರ ಮಾತುಗಳು ನನಗೆ ಸ್ಫೂರ್ತಿ ಆದವು ಮುಂದಿನ ದಶಕದಲ್ಲಿ, ಹಲವಾರು ಪ್ರತಿಭಟನೆಗಳಲ್ಲಿ ಅವರೊಂದಿಗೆ ಹೋರಾಡಲು ನಾನು ಅದೃಷ್ಟಶಾಲಿಯಾಗಿದ್ದೆ ಅವರು ಮಾರ್ಗದರ್ಶಕ ಮತ್ತು ಜೀವಂತ ರೋಲ್ ಮಾಡಲ್ ಆಗಿದ್ದರು ಇಂತಹ ರತ್ನವನ್ನು ಹೊಂದಿದ್ದ ಕರ್ನಾಟಕ ಅದೃಷ್ಟಶಾಲಿ ಉತ್ತಮ ಸಮಾಜಕ್ಕಾಗಿ, ನಾವೆಲ್ಲರೂ ಅವರ ಆಲೋಚನೆಗಳು ಮತ್ತು ಕಾರ್ಯಗಳನ್ನು ಬದುಕಬೇಕು'' ಎಂದು ಹಳೆ ನೆನಪು ಮೆಲುಕು ಹಾಕಿದ್ದಾರೆ ನಟ ಚೇತನ್ ಅಹಿಂಸ.

ನನ್ನ ಗುರುವೇ, ಸ್ಪೂರ್ತಿಯೇ, ಯೋಧನೆ: ಪ್ರಕಾಶ್ ರೈ ಕಂಬನಿ
ಹಿರಿಯ ನಟ ಪ್ರಕಾಶ್ ರೈ ಸಹ ಟ್ವೀಟ್ ಮಾಡಿದ್ದು, ''ದೊರೆಯೆ.... ಗುರುವೆ.. ನನ್ನ ನೆಲದ ಸಿರಿಯೆ....ನಮ್ಮೆಲ್ಲರ ಸ್ಪೂರ್ತಿಯ ಚಿಲುಮೆಯೆ.. ನಮಗಾಗಿ ಹೋರಾಡಿದ ಯೋಧನೆ ..ನೀವಿಲ್ಲದೆ ಅನಾಥರಾಗಿದ್ದೇವೆ'' ಎಂದಿದ್ದಾರೆ. ದೊರೆಸ್ವಾಮಿ ಅವರೊಟ್ಟಿಗಿನ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಟಿ.ಎನ್.ಸೀತಾರಾಮ್, ಸಿಂಪಲ್ ಸುನಿ ಸಂತಾಪ
ಹಿರಿಯ ನಿರ್ದೇಶಕ ಟಿ.ಎನ್.ಸೀತಾರಾಮ್, ದೊರೆಸ್ವಾಮಿ ಅಗಲಿಕೆಗೆ ಸಂತಾಪ ಸೂಚಿಸಿದ್ದು, 'ಅಂತಿಮ ನಮನಗಳು. ಒಂದು ದೀಪದಂತೆ ಇದ್ದಿರಿ ಸರ್, ನೋವಿನ ವಿದಾಯ' ಎಂದಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಸರಳವಾಗಿ 'ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರಿಗೆ ಭಾವಪೂರ್ಣ ನಮನ' ಎಂದಿದ್ದಾರೆ.

ನಟ, ಕೃಷಿ ಸಚಿವ ಬಿ.ಸಿ.ಪಾಟೀಲ್ ಸಂತಾಪ
ನಟರು, ಈಗ ಕೃಷಿ ಸಚಿವರೂ ಆಗಿರುವ ಬಿ.ಸಿ.ಪಾಟೀಲ್, ದೊರೆಸ್ವಾಮಿ ನಿಧನಕ್ಕೆ ಸಂತಾಪ ಸೂಚಿಸಿದ್ದು, 'ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಗಾಂಧಿವಾದಿ, ಪತ್ರಕರ್ತ, ಜನಪರ ಚಳವಳಿಗಳ ಒಡನಾಡಿಯಾಗಿದ್ದ ಶತಾಯುಷಿ ಶ್ರೀ ಎಚ್.ಎಸ್. ದೊರೆಸ್ವಾಮಿ ಅವರು ವಿಧಿವಶರಾದ ಸುದ್ದಿ ಕೇಳಿ ಅತೀವ ದುಃಖವಾಯಿತು. ಭಗವಂತ ಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಿ, ಕುಟುಂಬ ಸದಸ್ಯರಿಗೆ ಈ ನೋವನ್ನು ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ' ಎಂದಿದ್ದಾರೆ.
Recommended Video

ಜಯದೇವದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು
ದೊರೆಸ್ವಾಮಿ ಅವರು ಕೋವಿಡ್ ಸೋಂಕಿತರಾಗಿ ಜಯದೇವ ಆಸ್ಪತ್ರೆಯಲ್ಲಿ ಕಳೆದ ಹತ್ತು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಅವರಿಗೆ ಕೋವಿಡ್ ನೆಗೆಟಿವ್ ವರದಿ ಬಂದಿತ್ತು. ದೊರೆಸ್ವಾಮಿ ಚೇತರಿಸಿಕೊಂಡಿದ್ದಾರೆ ಶೀಘ್ರವಾಗಿ ಡಿಸ್‌ಚಾರ್ಜ್ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.