Just In
Don't Miss!
- Lifestyle
ಬುಧವಾರದ ರಾಶಿಫಲ: ಈ ದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕರ್ನಾಟಕ ಮಲ್ಟಿಪ್ಲೆಕ್ಸ್ ಗಳಲ್ಲೂ ಮನೆ ಆಹಾರಕ್ಕೆ ಪ್ರವೇಶ ಕೊಡಲಿ ಕಣ್ರೀ.!
ಸಿನಿ ಪ್ರಿಯರಿಗೆ ಸಿಕ್ಕಾಪಟ್ಟೆ ಸಂತಸ ಆಗುವ ಸುದ್ದಿಯನ್ನ ಮಹಾರಾಷ್ಟ್ರ ಸರ್ಕಾರ ಮೊನ್ನೆಯಷ್ಟೇ ಘೋಷಿಸಿತ್ತು. ರಾಜ್ಯದಲ್ಲಿ ಇರುವ ಮಲ್ಟಿಪ್ಲೆಕ್ಸ್ ಗಳಲ್ಲಿ ಮನೆ ಆಹಾರಕ್ಕೆ ಪ್ರವೇಶ ನೀಡಬೇಕು ಎಂಬ ನಿಯಮ ಜಾರಿಗೆ ತರಲು ಮಹಾರಾಷ್ಟ್ರ ಸರ್ಕಾರ ಮುಂದಾಯಿತು.
ಜೊತೆಗೆ ಗರಿಷ್ಟ ಮಾರಾಟ ಬೆಲೆಗಿಂತ ಹೆಚ್ಚಾಗಿ ತಿಂಡಿ ಪದಾರ್ಥಗಳನ್ನು ಮಾರಾಟ ಮಾಡದೆ ಇರುವ ಹಾಗೆ ಕಾನೂನು ರೂಪಿಸಲು ಮಹಾರಾಷ್ಟ್ರ ಸರ್ಕಾರ ತೀರ್ಮಾನಿಸಿದೆ. ಮಹಾರಾಷ್ಟ್ರ ಸರ್ಕಾರದಂತೆ ಕರ್ನಾಟಕ ಸರ್ಕಾರವೂ ಈ ನಿಯಮಗಳನ್ನು ಜಾರಿಗೆ ತರಬೇಕು ಎನ್ನುವುದು ಕನ್ನಡಿಗರ ಬಯಕೆಯಾಗಿದೆ.
ಟಿಕೆಟ್ ಬೆಲೆಗಿಂತ ಪಾಪ್ ಕಾರ್ನ್ ಬೆಲೆಯೇ ದುಬಾರಿ ಆಗಿರುವ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಗಳಲ್ಲಿ ಮನೆ ಆಹಾರಕ್ಕೆ ಪ್ರವೇಶ ನೀಡಬೇಕು ಎಂಬುದು ಕನ್ನಡಿಗರ ಆಗ್ರಹ. ಮುಂದೆ ಓದಿರಿ...

ಸಚಿವ ಜಮೀರ್ ಅಹ್ಮದ್ ಖಾನ್ ಏನಂತಾರೆ.?
''ಈ ನಿಯಮಗಳನ್ನು ಮಹಾರಾಷ್ಟ್ರ ಸರ್ಕಾರ ಹೇಗೆ ಜಾರಿಗೆ ತರುತ್ತದೆ ಎಂಬುದನ್ನ ಪರಿಶೀಲಿಸುತ್ತೇವೆ. ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಸಿನಿಪ್ರಿಯರ ಮೇಲಿನ ಹೊರೆಯನ್ನು ಕಮ್ಮಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುವೆ. ಈ ಹಿಂದೆ ಮಲ್ಟಿಪ್ಲೆಕ್ಸ್ ಗಳಲ್ಲಿ ನೀರಿನ ಬಾಟಲಿಗಳನ್ನ ಎಂ.ಆರ್.ಪಿಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡದಂತೆ ನಿಯಮವನ್ನ ಯು.ಟಿ.ಖಾದರ್ ಜಾರಿಗೆ ತಂದಿದ್ದರು'' ಎನ್ನುತ್ತಾರೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹ್ಮದ್ ಖಾನ್.
ಪಿವಿಆರ್, ಐನಾಕ್ಸ್ ಗೆ ಪಾಪ್ ಕಾರ್ನ್, ಕೂಲ್ ಡ್ರಿಂಕ್ಸ್ ಲಾಭವೆಷ್ಟು?

ಮಲ್ಟಿಪ್ಲೆಕ್ಸ್ ನವರಿಗೆ ತಲೆನೋವು.!
''ಮಹಾರಾಷ್ಟ್ರದಲ್ಲಿ ನಿಯಮ ಹೇಗೆ ಜಾರಿ ಆಗುತ್ತೋ ಗೊತ್ತಿಲ್ಲ. ಹೊರಗಿನ ತಿಂಡಿ ಅಂತ ಜನ ಏನೇನು ತೆಗೆದುಕೊಂಡು ಒಳಗೆ ಹೋಗ್ತಾರೋ ಹೇಳಲು ಆಗಲ್ಲ. ಸೀಟ್ ಮೇಲೆ ಅನ್ನ-ಸಾರು ಚೆಲ್ಲಿದರೆ ನಾವು ಸ್ವಚ್ಛಗೊಳಿಸುವುದಾದರೂ ಹೇಗೆ.? ಹೀಗಾಗಿ ನಾವು ಹೊರಗಿನ ತಿಂಡಿಗಳಿಗೆ ಅವಕಾಶ ಕೊಡಲ್ಲ. ನಮ್ಮಲ್ಲಿ ಕೇವಲ ಡ್ರೈ ತಿಂಡಿಗಳನ್ನು ಮಾತ್ರ ಮಾರಾಟ ಮಾಡುತ್ತೇವೆ'' ಅಂತಾರೆ ಬೆಂಗಳೂರಿನ ಮಲ್ಟಿಪ್ಲೆಕ್ಸ್ ನ ಮ್ಯಾನೇಜರ್ ಒಬ್ಬರು.
ಮಹಾರಾಷ್ಟ್ರ ಮಲ್ಟಿಪ್ಲೆಕ್ಸ್ ಗಳಲ್ಲಿ ಹೊಸ ಕಾನೂನು: ಅದು ಕರ್ನಾಟಕಕ್ಕೂ ಬರಬಾರದೇ.?

ಆರೋಗ್ಯ ಕಾಪಾಡಿಕೊಳ್ಳಬಹುದು
''ಮನೆಯಲ್ಲಿನ ಆಹಾರ ಪದಾರ್ಥಗಳನ್ನು ಮಲ್ಟಿಪ್ಲೆಕ್ಸ್ ಒಳಗೆ ತೆಗೆದುಕೊಂಡು ಹೋಗಬಹುದು ಅಂತ ಮೊನ್ನೆ ಮಹಾರಾಷ್ಟ್ರ ಸರಕಾರ ಹೊರಡಿಸಿದ ಆದೇಶ ಸರಿಯಾಗಿಯೇ ಇದೆ. ಇದರಿಂದ ಮಲ್ಟಿಪ್ಲೆಕ್ಸ್ ಗಳ ಆದಾಯಕ್ಕೆ ಹೊಡೆತ ಬೀಳಬಹುದೇ ಹೊರತು, ಜನಸಾಮಾನ್ಯರಿಗೆ ಹೊರೆ ಎನಿಸುವುದಿಲ್ಲ. ಮತ್ತೆ ನಮಗಿಷ್ಟ ಬಂದ ತಿಂಡಿ ತಿನಿಸುಗಳನ್ನು ತಿನ್ನುತ್ತಾ ಸಿನಿಮಾ ನೋಡುವ ಆ ಮಜಾನೇ ಬೇರೆ. ಸುಮ್ಮನೆ ಮಲ್ಟಿಪ್ಲೆಕ್ಸ್ ನಲ್ಲಿ ಸಿಗುವ ತಿನಿಸುಗಳನ್ನು ತಿಂದು ಹೊಟ್ಟೆ ಕೆಡಿಸಿಕೊಳ್ಳುವುದಕ್ಕಿಂತ ಮನೆಯ ತಿಂಡಿ ಒಯ್ದು, ನಮ್ಮ ಸ್ವಾಸ್ಥ್ಯ ಕಾಪಾಡಿಕೊಳ್ಳುವುದರ ಜೊತೆಗೆ, ದುಡ್ಡು ಉಳಿತಾಯ ಮಾಡಬಹುದು ಎನ್ನುವುದು ನನ್ನ ಅನಿಸಿಕೆ'' - ಅಥರ್ವ, ಸಿನಿಪ್ರಿಯರು
ಮಹಾರಾಷ್ಟ್ರ ಸರ್ಕಾರ ಕೊಟ್ಟ ಹೊಡೆತ: ಮಲ್ಟಿಪ್ಲೆಕ್ಸ್ ಆದಾಯಕ್ಕೆ ಬೀಳಲಿದೆ ಗುನ್ನ.!

ನ್ಯಾಯಸಮ್ಮತ ಬೆಲೆ ಇರಲಿ
''ಮಹಾರಾಷ್ಟ್ರ ಸರ್ಕಾರ ಮಾಡಿರುವ ಕಾನೂನು ನಮ್ಮ ರಾಜ್ಯದಲ್ಲೂ ಜಾರಿಗೆ ಬರಲಿ. ಜನಸಾಮಾನ್ಯರ ಮೇಲೆ ಬರೆ ಎಳೆಯುವ ಬದಲು ತಿಂಡಿ ಪದಾರ್ಥಗಳ ಮೇಲೆ ನ್ಯಾಯಸಮ್ಮತವಾದ ಬೆಲೆ ಇರಲಿ. ಇದರಿಂದ ಮಲ್ಟಿಪ್ಲೆಕ್ಸ್ ನವರಿಗೂ ಲಾಸ್ ಆಗಬಾರದು. ನಮ್ಮ ಮೇಲೂ ಹೊರೆ ಆಗಬಾರದು'' - ಸದಾಶಿವ, ಸಿನಿಪ್ರಿಯರು

ಬೆಲೆಗಳ ಮೇಲೆ ನಿಯಂತ್ರಣ ಅಗತ್ಯ
''ಮನೆ ಆಹಾರಕ್ಕೆ ಪ್ರವೇಶ ಅನ್ನೋದಕ್ಕಿಂತಲೂ, ಮಲ್ಟಿಪ್ಲೆಕ್ಸ್ ಗಳಲ್ಲಿ ಮಾರುವ ಆಹಾರ ಪದಾರ್ಥಗಳ ಬೆಲೆ ಸಿಕ್ಕಾಪಟ್ಟೆ ದುಬಾರಿ. ಹೊರಗಡೆ ಮಾರುವ ಪಾಪ್ ಕಾರ್ನ್ ಗಿಂತ ಮಲ್ಟಿಪ್ಲೆಕ್ಸ್ ಒಳಗೆ ಮಾರುವ ಪಾಪ್ ಕಾರ್ನ್ ಮೂರು ಪಟ್ಟು ದುಬಾರಿ. ಇದಕ್ಕೆ ಖಂಡಿತ ನಿಯಂತ್ರಣ ಹಾಕಲೇಬೇಕು. ಇನ್ನೂ ಕೂಲ್ ಡ್ರಿಂಕ್ಸ್ ಕೂಡ ಎಂ.ಆರ್.ಪಿ ಬೆಲೆಗೆ ಮಾರಾಟ ಮಾಡಬೇಕು'' - ಶ್ರೀವತ್ಸ, ಸಿನಿಪ್ರಿಯರು.

ಸರ್ಕಾರ ಗಮನ ಹರಿಸಬೇಕು.!
''ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ಬೆಲೆಯೇ ದುಬಾರಿ. ನಮ್ಮ ಫ್ಯಾಮಿಲಿ ಸಿನಿಮಾಗೆ ಹೊರಟರೆ ಮಿನಿಮಂ ಸಾವಿರ ರೂಪಾಯಿ ಬೇಕು. ಇನ್ನೂ ಅಲ್ಲಿ ತಿಂಡಿ ತೆಗೆದುಕೊಂಡು ಬಿಟ್ಟರೆ ನನ್ನ ಜೇಬು ಖಾಲಿ ಖಾಲಿ. ಬರೀ ಕುಡಿಯುವ ನೀರಿನ ಬಾಟಲ್ ಕೇಳಿದರೆ ನಲವತ್ತರಿಂದ-ಐವತ್ತು ರೂಪಾಯಿ ಕೇಳುತ್ತಾರೆ. ನೀರಿನ ಬಾಟಲ್ ಮೇಲೆ 20 ರೂಪಾಯಿ ಎಂ.ಆರ್.ಪಿ ಇದ್ಯಲ್ಲ ಅಂತ ರೇಗಿದ ಮೇಲೆ ಅಷ್ಟೇ ಬೆಲೆಗೆ ಕೊಡ್ತಾರೆ. ಇನ್ನೂ ಉಳಿದ ತಿಂಡಿಗಳ ಬಗ್ಗೆ ಹೇಳುವುದೇ ಬೇಡ. ಇದರ ಬಗ್ಗೆ ಸರ್ಕಾರ ಗಮನ ಹರಿಸಬೇಕು'' - ನವೀನ್, ಸಿನಿಪ್ರಿಯರು.

ಬೆಲೆ ನೋಡಿ ಏನನ್ನೂ ತಿನ್ನಲ್ಲ.!
''ಮಲ್ಟಿಪ್ಲೆಕ್ಸ್ ಗಳಲ್ಲಿ ತಿಂಡಿ ಪದಾರ್ಥಗಳ ಬೆಲೆ ಆಗಸದೆತ್ತರ. ಕೊಟ್ಟ ಕಾಸಿಗೆ ಸಿಗುವ ತಿಂಡಿ ತೀರಾ ಕಡಿಮೆ. ಹೀಗಾಗಿ, ನಾವು ಅಲ್ಲಿ ಯಾವಾಗಲೇ ಹೋದರೂ ಏನನ್ನೂ ಕೊಂಡು ತಿನ್ನುವುದಿಲ್ಲ'' - ಛಾಯಾ, ಸಿನಿಪ್ರಿಯರು.