For Quick Alerts
  ALLOW NOTIFICATIONS  
  For Daily Alerts

  "ಲೋ ರಾಮಾಚಾರಿ ಎಲ್ಲಿದ್ದೀಯೋ" ಟೀಸರ್ ಸೂಪರ್

  By Rajendra
  |

  ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ 'ನಾಗಹಾವು' (1972) ಕನ್ನಡ ಚಿತ್ರೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿದ ಚಿತ್ರ. ಆ ಚಿತ್ರದ ಪ್ರತಿಯೊಂದು ಪಾತ್ರವೂ ಒಂದೊಂದು ಸಿನಿಮಾಗೆ ಸ್ಫೂರ್ತಿಯಾಗಬಲ್ಲದು. ಕೆ.ಎಸ್.ಅಶ್ವತ್ಥ್ ಅವರ ಛಾಮಯ್ಯ ಮೇಷ್ಟ್ರು ಪಾತ್ರ ಸಹ ಇಂದಿಗೂ ಕಾಡುತ್ತದೆ.

  ಛಾಮಯ್ಯ ಮೇಷ್ಟ್ರ ಡೈಲಾಗ್ ಕಿವಿಗೆ ಬಿದ್ದರೆ ಮೈ ಝುಮ್ಮೆನ್ನುತ್ತದೆ. "ಲೋ ರಾಮಾಚಾರಿ ಎಲ್ಲಿದ್ದೀಯೋ" ಎಂಬ ಡೈಲಾಗ್ ಮೂಲಕ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಟೀಸರ್ ಗೆ ಅಬ್ಬರದ ಓಪನಿಂಗ್ ನೀಡಲಾಗಿದೆ.

  'ರಾಮಾಚಾರಿ'ಯಾಗಿ ರಾಕಿಂಗ್ ಸ್ಟಾರ್ ಯಶ್ ಎಂಟ್ರಿ ಕೊಟ್ಟು ಧೂಳೆಬ್ಬಿಸಿದ್ದಾರೆ. ಅಂದುಕೊಂಡಂತೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಟೀಸರ್ ಸಾಹಸಸಿಂಹ ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ (ಸೆ.18) ದಿನ ಬಿಡುಗಡೆಯಾಗಿದೆ.

  ಹಿನ್ನೆಲೆಯಲ್ಲಿ ಸಿಂಹ ಗರ್ಜನೆ

  ಹಿನ್ನೆಲೆಯಲ್ಲಿ ಸಿಂಹ ಗರ್ಜನೆ

  ಲೋ ರಾಮಾಚಾರಿ ಎಲ್ಲಿದ್ದೀಯೋ ಎಂಬ ಡೈಲಾಗ್ ನೊಂದಿಗೆ ಆರಂಭವಾಗುವ ಟೀಸರ್ ನ ಹಿನ್ನೆಲೆಯಲ್ಲಿ ಸಿಂಹದ ಗರ್ಜನೆಯೂ ಕೇಳಿಸುತ್ತಿರುತ್ತದೆ. ಕೊನೆಗೆ "ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಬುಕ್ ಆಗೋದ ರೀ ರಾಮಚಾರಿ..." ಎಂಬ ಹಾಡಿನ ಸಾಲುಗಳೂ ಇವೆ.

  ಯಶ್ ಗೆ ರಾಧಿಕಾ ಪಂಡಿತ್ ಜೋಡಿ

  ಯಶ್ ಗೆ ರಾಧಿಕಾ ಪಂಡಿತ್ ಜೋಡಿ

  ರಾಧಿಕಾ ಪಂಡಿತ್ ಹಾಗೂ ಯಶ್ ಮತ್ತೆ ಜೋಡಿಯಾಗಿರೋ ಸಿನಿಮಾ ಇದು. ಎರಡೆರೆಡು ಯಶಸ್ವಿ ಸಿನಿಮಾ ಕೊಟ್ಟು ಸ್ಯಾಂಡಲ್ ವುಡ್ ನ ಯಶಸ್ವಿ ಜೋಡಿ ಅನ್ನಿಸಿಕೊಂಡಿರೋ ಯಶ್-ರಾಧಿಕಾ ಪಂಡಿತ್ ಜೋಡಿಯಾಗ್ತಿರೋ ಮುಂದಿನ ಸಿನಿಮಾ ಇದು. 'ರಾಮಾಚಾರಿ'ಯ ಚಿತ್ರೀಕರಣ ಶೇ.90ರಷ್ಟು ಮುಗಿದಿದೆ.

  'ನಾಗರಹಾವು' ಛಾಯೆಯುಳ್ಳ ಪಾತ್ರ

  'ನಾಗರಹಾವು' ಛಾಯೆಯುಳ್ಳ ಪಾತ್ರ

  ಈ ಚಿತ್ರದಲ್ಲಿ ವಿಷ್ಣು ಅಭಿನಯದ ದಾಖಲೆ ಚಿತ್ರ ನಾಗರಹಾವಿನ ಛಾಯೆಯೂ ಇದೆ.ರಾಕಿಂಗ್ ಸ್ಟಾರ್ ಯಶ್ ರನ್ನ ಮತ್ತೊಮ್ಮೆ ಹಳ್ಳಿ ಹೈದನ ಗೆಟಪ್ ನಲ್ಲಿ ನೋಡೋಕೆ ಕಾದಿರೋ ಚಿತ್ರಪ್ರೇಮಿಗಳಿಗೆ ಈ ಚಿತ್ರ ಹಬ್ಬ ನೀಡಲಿದೆ.

  ದೀಪಾವಳಿಗೆ ಬರಲಿದೆ ರಾಮಾಚಾರಿ

  ದೀಪಾವಳಿಗೆ ಬರಲಿದೆ ರಾಮಾಚಾರಿ

  ಯಶ್ ಮತ್ತೊಂದು ಧಮಾಕಾ 'ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ' ದೀಪಾವಳಿಗೆ ತೆರೆಗೆ ಬರಲಿದೆ. ದೀಪಾವಳಿಗೆ ಸಾಧ್ಯವಾಗದಿದ್ರೆ ರಾಜಾಹುಲಿ ಚಿತ್ರ ಬಂದ ದಿನಕ್ಕೆ ಅಂದ್ರೆ ನವೆಂಬರ್ ಒಂದಕ್ಕೆ ರಂಗ್ ರಂಗ್ ರಾಮಚಾರಿ ತೆರೆಗೆ ಬರ್ತಾನೆ.

  ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣದ ಚಿತ್ರ

  ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣದ ಚಿತ್ರ

  ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಡ್ರಾಮಾ ಮತ್ತು ಮೊಗ್ಗಿನ ಮನಸು ಚಿತ್ರಗಳ ಬಳಿಕ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ಅಭಿನಯದ ಚಿತ್ರ ಇದಾಗಿದೆ. ಸಂತೋಷ್ ಅವರು ಆಕ್ಷನ್ ಕಟ್ ನಲ್ಲಿ ಚಿತ್ರ ಮೂಡಿಬರುತ್ತಿದೆ.

  English summary
  Rocking Star Yash and Radhika pandit lead Mr & Mrs Ramachari video teaser is released on Sahasasimha Dr.Vishnuvardhan's 64th birth anniversary. The movie made under the Jayanna Combines banner and produced by Jayanna and Bhogendra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X