twitter
    For Quick Alerts
    ALLOW NOTIFICATIONS  
    For Daily Alerts

    ಜೇಮ್ಸ್ ಕಾಲಿಟ್ಟ ಸೈಡು ಬಿಡೋಲೇ: ಮಾರ್ಚ್ 17ಕ್ಕೆ ಕಾಯುತ್ತಿದೆ ಕರ್ನಾಟಕ

    |

    ಪುನೀತ್ ರಾಜಕುಮಾರ್ ಅವರು 'ರಾಜ್ -ದ ಶೋ ಮ್ಯಾನ್' ನಲ್ಲಿ ಹಾಡುವ ಈ ಹಾಡು ಈಗಿನ ಸಂದರ್ಭದಲ್ಲಿ ಹೇಳುವುದಾದರೆ 'ಜೇಮ್ಸ್ ಕಾಲಿಟ್ಟ ಸೈಡು ಬಿಡೋಲೇ...'! ಏಕೆಂದರೆ ಈಗ ಎಲ್ಲರೂ ಕೂಡ ಜೇಮ್ಸ್ ಚಿತ್ರಕ್ಕಾಗಿ ಕಾತರದಿಂದ ಎದುರು ನೋಡುತ್ತಿದ್ದಾರೆ .

    ಜೇಮ್ಸ್... ಜೇಮ್ಸ್... ಜೇಮ್ಸ್... ಸದ್ಯಕ್ಕೆ ಇದೊಂದೇ ಹೆಸರು ಕರ್ನಾಟಕದಾದ್ಯಂತ ಕೇಳಿಬರುತ್ತಿರುವುದು. ಕರ್ನಾಟಕದ ಮುತ್ತುರಾಜ, ಅಭಿಮಾನಿಗಳ ರತ್ನ, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ 'ಜೇಮ್ಸ್' ಅವರ ಹುಟ್ಟುಹಬ್ಬದ ದಿನದಂದು ಅಂದರೆ ಮಾರ್ಚ್ 17ರಂದು ವಿಶ್ವದಾದ್ಯಂತ ಬಹುದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರ ಹೊರತಾಗಿ ಕೂಡ ಅಪ್ಪು ಅಭಿನಯದ ಮತ್ತೊಂದು ಚಿತ್ರ'ಗಂಧದಗುಡಿ' ಕೂಡ ಮುಂದಿನ ದಿನಗಳಲ್ಲಿ ಬಿಡುಗಡೆಯಾಗುತ್ತದೆ. ಆದರೆ ಆ ಚಿತ್ರ ಹೆಚ್ಚು ಅಡ್ವೆಂಚರಸ್ ಚಿತ್ರವಾಗಿದ್ದು ಅದು ಪರಿಸರದ-ಪ್ರಾಣಿ ಪಕ್ಷಿ ಸಂಕುಲದ ಉಳಿವಿನ ಕಥಾಹಂದರವನ್ನು ಹೊಂದಿದೆ. ಹೀಗಾಗಿ 'ಗಂಧದಗುಡಿ' ಚಿತ್ರದಲ್ಲಿ ಅಪ್ಪು ಅವರ ಡ್ಯಾನ್ಸ್ ಆಕ್ಷನ್- ಕಾಮಿಡಿ- ಒಟ್ಟಾರೆ ಹೇಳಬೇಕೆಂದರೆ ಅಪ್ಪು ಅವರಿಂದ ನಿರೀಕ್ಷಿಸುವ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಅಲ್ಲಿ ಕಾಣಸಿಗುವುದಿಲ್ಲ.ಹೀಗಾಗಿ ಜೇಮ್ಸ್ ಅಪ್ಪು ಅಭಿಮಾನಿಗಳ ಪಾಲಿಗೆ ಭರಪೂರ ಎಂಟರ್ಟೈನ್ಮೆಂಟ್ ನೀಡಲಿರುವ ಕೊನೆಯ ಚಿತ್ರ

    ಜೇಮ್ಸ್. 'ಜೇಮ್ಸ್' ನಿಜವಾದ ಅರ್ಥದಲ್ಲಿ ಹೇಳಬೇಕೆಂದರೆ ಅಭಿಮಾನಿಗಳಿಗೆ ರಸದೌತಣವನ್ನು ನೀಡುವ ಚಿತ್ರ. ಹೀಗಾಗಿ ಇದೇ ಕೊನೆಯ ಚಿತ್ರ ಅಂತ ಹೇಳಬಹುದು ಮತ್ತು ಇಲ್ಲಿಯೇ ಅಪ್ಪು ಅವರ ಅಭಿನಯವನ್ನು ಕೊನೆಯ ಬಾರಿಗೆ ನೋಡಲು ಸಿಗುವುದು. ಹೀಗಾಗಿ

    ಸಹಜವಾಗಿಯೇ ಅಪ್ಪು ಅವರ ಅಭಿಮಾನಿಗಳು, ದೊಡ್ಮನೆಯ ಅಭಿಮಾನಿಗಳು ಮಾತ್ರವಲ್ಲ ಇಡೀ ಕರ್ನಾಟಕ ಅಷ್ಟೇ ಯಾಕೆ ಇಡೀ ಭಾರತ ಅಪ್ಪು ಅವರ ಈ ಚಿತ್ರಕ್ಕಾಗಿ ಎದುರುನೋಡುತ್ತಿದೆ.

    ನಿರೀಕ್ಷೆ ಇಮ್ಮಡಿಗೊಳಿಸಿದ ಜೇಮ್ಸ್ ಅಫಿಶಿಯಲ್ ಟೀಸರ್

    ನಿರೀಕ್ಷೆ ಇಮ್ಮಡಿಗೊಳಿಸಿದ ಜೇಮ್ಸ್ ಅಫಿಶಿಯಲ್ ಟೀಸರ್

    'ಜೇಮ್ಸ್' ಅಫಿಶಿಯಲ್ ಟೀಸರ್ ನಲ್ಲಿ ಪುನೀತ್ ರಾಜ್ ಕುಮಾರ್ ಅಭಿಮಾನಿಗಳನ್ನು ಚಕಿತಗೊಳಿಸಿದ್ದಾರೆ. ಪವರ್ ಪ್ಯಾಕ್ಡ್ ಜೇಮ್ಸ್ ಟೀಸರ್ ನೋಡಿದ ಅಭಿಮಾನಿಗಳು ಸಾಕಷ್ಟು ಥ್ರಿಲ್ಲಾಗಿದ್ದಾರೆ. ಪುನೀತ್ ಅಭಿಮಾನಿಗಳು ಮಾತ್ರವಲ್ಲ ಇತರ ರಾಜ್ಯದಲ್ಲಿನ ಸಿನಿಪ್ರೇಕ್ಷಕರು ಮತ್ತು ಕಲಾವಿದರು ಕೂಡ ಇದರ ಬಗ್ಗೆ ಅಪಾರವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದು ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ, ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರವನ್ನು ಕನ್ನಡದ ಜೊತೆ ಜೊತೆಗೆ ತಮಿಳು, ಹಿಂದಿ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಅವರ ಜನ್ಮದಿನದಂದು ಮಾರ್ಚ್ 17 ರಂದು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧಗೊಳ್ಳುತ್ತಿದೆ. ಜೇಮ್ಸ್ ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಮತ್ತು ಶಿವರಾಜಕುಮಾರ್ ಅವರು ಕೂಡ ನಟಿಸುತ್ತಿದ್ದಾರೆ.

    ಜೇಮ್ಸ್- ಭಾವನಾತ್ಮಕ ಕ್ಷಣ: ಶಿವಣ್ಣ

    ಜೇಮ್ಸ್- ಭಾವನಾತ್ಮಕ ಕ್ಷಣ: ಶಿವಣ್ಣ

    ಸೆಕ್ಯೂರಿಟಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುವ ಜೇಮ್ಸ್ ಅಕಾ ಸಂತೋಷ್ ಕುಮಾರ್ ಎಂಬ ಪಾತ್ರದ ಸುತ್ತ ಕಥೆ ಹೆಣೆಯಲಾಗಿದೆ. ಪುನೀತ್ ರಾಜ್ ಕುಮಾರ್ ಟೀಸರ್‌ನಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳು ಅಪ್ಪು ಅವರ ಲುಕ್ಕಿಗೆ ಫಿದಾ ಆಗಿದ್ದಾರೆ. ಪ್ರಿಯಾ ಆನಂದ್ ನಾಯಕಿ. ನಟರಾದ ಶರತ್ ಕುಮಾರ್, ಶ್ರೀಕಾಂತ್ ಆದಿತ್ಯ ಮೆನನ್, ಮುಖೇಶ್ ರಿಸಿ, ರಂಗಾಯಣ ರಘು, ಅವಿನಾಶ್, ಸಾಧು ಕೋಕಿಲ, ಚಿಕ್ಕಣ್ಣ, ಅನು ಪ್ರಭಾಕರ್, ಸುಚೇಂದ್ರ ಪ್ರಸಾದ್ ಮತ್ತು ಕೇತನ್ ಕರಂಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚೇತನ್ ಕುಮಾರ್ ನಿರ್ದೇಶಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರು ಜೇಮ್ಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಮೂವರು ರಾಜ್‌ಕುಮಾರ್ ಸಹೋದರರು ತೆರೆ ಹಂಚಿಕೊಂಡಿರುವುದು ವೀಕ್ಷಕರ ನಿರೀಕ್ಷೆಯನ್ನು ಹೆಚ್ಚಿಸಿದೆ.ಜೇಮ್ಸ್‌ನಲ್ಲಿ ಪುನೀತ್ ರಾಜ್‌ಕುಮಾರ್‌ಗೆ ಶಿವರಾಜ್‌ಕುಮಾರ್ ಡಬ್ ಮಾಡಿದ್ದಾರೆ, ಇದು 'ಭಾವನಾತ್ಮಕ ಕ್ಷಣ' ಎಂದು ಹೇಳುತ್ತಾರೆ ಶಿವಣ್ಣ.

    ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ರವಿ ವರ್ಮಾ, ರಾಮ್ ಲಕ್ಷ್ಮಣ್, ಚೇತನ್ ಡಿ'ಸೋಜಾ ಸಾಹಸ ಸಂಯೋಜನೆ ಮಾಡಿದ್ದಾರೆ.ಅರ್ಜುನ್ ಮಾಸ್ಟರ್ ಮತ್ತು

    ವಿಜಯ್ ಮಾಸ್ಟರ್ ಕೊರಿಯೋಗ್ರಫಿ ಈ ಚಿತ್ರಕ್ಕೆ ಇದೆ.ಈ ಸಿನಿಮಾ ಕರ್ನಾಟಕದಲ್ಲಿ ದಾಖಲೆ ಬರೆಯಲಿದೆ.

    ಅಪ್ಪು ಅವರ ಜೊತೆಗಿನ ತಮ್ಮ ಕೊನೆಯ ದಿನಗಳನ್ನು ನೆನೆಸಿಕೊಂಡ ನಿರ್ದೇಶಕ ಚೇತನ್ ಕುಮಾರ್

    ಅಪ್ಪು ಅವರ ಜೊತೆಗಿನ ತಮ್ಮ ಕೊನೆಯ ದಿನಗಳನ್ನು ನೆನೆಸಿಕೊಂಡ ನಿರ್ದೇಶಕ ಚೇತನ್ ಕುಮಾರ್

    ಜೇಮ್ಸ್‌ನ ನಿರ್ದೇಶಕರಾದ ಚೇತನ್ ಕುಮಾರ್ ಅವರು ಪುನೀತ್ ರಾಜ್‌ಕುಮಾರ್ ಜೊತೆಗಿನ ತಮ್ಮ ಕೊನೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಅಪ್ಪು ಅಭಿನಯದ ಕೊನೆಯ ಕಮರ್ಷಿಯಲ್ ಚಿತ್ರ ಜೇಮ್ಸ್ ಗೆ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಒಂದು ಹಾಡು ಮತ್ತು ಆಕ್ಷನ್ ಸೀಕ್ವೆನ್ಸ್ ಹೊರತುಪಡಿಸಿ ಚಿತ್ರದ ಚಿತ್ರೀಕರಣವನ್ನು ಪೂರ್ಣ ಗೊಳಿಸಲಾಗಿತ್ತು. "ಪವರ್‌ಸ್ಟಾರ್ ಅನ್ನು ನಿರ್ದೇಶಿಸುವ ಅವಕಾಶವನ್ನು ನಾನು ಪಡೆದಿದ್ದೇನೆ ಎಂದು ನಾನು ಅದೃಷ್ಟಶಾಲಿ ಎಂದು ಪರಿಗಣಿಸಬೇಕೇ ಅಥವಾ ಜೇಮ್ಸ್ ಅವರ ವೃತ್ತಿಜೀವನದ ಕೊನೆಯ ಚಿತ್ರ ಎಂದು ದುಃಖಿತನಾಗಬೇಕೆ ಎಂದು ನನಗೆ ತಿಳಿದಿಲ್ಲ. ಅಪ್ಪು

    ಸರ್ ಇನ್ನಿಲ್ಲದಿರುವುದು ನನಗೇ ದೊಡ್ಡ ನಷ್ಟ, ಈ ನೋವನ್ನು ಸಮಾಧಿಗೆ ಕೊಂಡೊಯ್ಯುತ್ತೇನೆ" ಎನ್ನುತ್ತಾರೆ ಚೇತನ್. ತಮ್ಮ ಕೊನೆಯ ಸಂವಾದವನ್ನು ನೆನಪಿಸಿಕೊಳ್ಳುತ್ತಾ. "ನಾವು ಕೊನೆಯದಾಗಿ ಅಕ್ಟೋಬರ್ 13 ಮತ್ತು 16 ರ ನಡುವೆ ನೃತ್ಯದ ಸರಣಿಯನ್ನು ಚಿತ್ರೀಕರಿಸಿದ್ದೇವೆ. ಡ್ಯಾನ್ಸ್ ಮಾಸ್ಟರ್ ಶೇಖರ್ ಆ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಪುನೀತ್ ತುಂಬಾ ಬದ್ಧತೆ ಹೊಂದಿದ್ದರು ಮತ್ತು ಅದ್ಭುತ ಡ್ಯಾನ್ಸರ್ ಆಗಿದ್ದರೂ ನಾಲ್ಕು ದಿನ ರಿಹರ್ಸಲ್ ಮಾಡುತ್ತಿದ್ದರು' ಎನ್ನುತ್ತಾರೆ ಜೇಮ್ಸ್ ನಿರ್ದೇಶಕರು.

    ಕೊನೆಯ ಭೇಟಿ ಮನೆಯಂಗಳದಲ್ಲಿ

    ಕೊನೆಯ ಭೇಟಿ ಮನೆಯಂಗಳದಲ್ಲಿ

    ಇನ್ನು ತಮ್ಮ ಮತ್ತು ಅಪ್ಪು ಅವರ ಕೊನೆಯ ಭೇಟಿ ಬಗ್ಗೆ ನಿರ್ದೇಶಕರು "ನಾನು ಕೊನೆಯದಾಗಿ ಅವರ ಮನೆಯ ಲಾನ್‌ನಲ್ಲಿ ಗ್ರೀನ್ ಮ್ಯಾಟ್ ನಲ್ಲಿ ಸಾಹಿತ್ಯದ ವೀಡಿಯೊಗಾಗಿ ಅವರನ್ನು ನಿರ್ದೇಶಿಸಿದೆ. ನವೆಂಬರ್ 8 ರಂದು ಕೊನೆಯ ಹಂತದ ಚಿತ್ರೀಕರಣವನ್ನು ಆರಂಭಿಸಬೇಕಿತ್ತು. ಅವರು ಹಾಡಿಗಾಗಿ ಗಡ್ಡವನ್ನು ಬೆಳೆಸುತ್ತಿದ್ದರು. ಚಿತ್ರೀಕರಣದ ಅಂತಿಮ ಹಂತದ ಬಗ್ಗೆ ಚರ್ಚಿಸಲು ಶುಕ್ರವಾರ ( 29 ಅಕ್ಟೋಬರ್ 2021, ಶುಕ್ರವಾರ ಭೌತಿಕವಾಗಿ ಅಪ್ಪು ಅವರು ನಮ್ಮಿಂದ ದೂರವಾಗಿದ್ದು) ಮಧ್ಯಾಹ್ನ ನನ್ನನ್ನು ಭೇಟಿಯಾಗುವಂತೆ ಹೇಳಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು" ಎನ್ನುತ್ತಾರೆ ಚೇತನ್

    ಜೇಮ್ಸ್‌ಗಾಗಿ ಎರಡೂವರೆ ವರ್ಷಗಳಿಂದ ಪುನೀತ್ ಜೊತೆ ಪಯಣಿಸಿದ್ದ ಚೇತನ್ ಅವರು "ಅಪ್ಪು ಸರ್ ಅವರೊಂದಿಗಿನ ನನ್ನ ಒಡನಾಟವು ನನ್ನ ಚೊಚ್ಚಲ ಬಹದ್ದೂರ್‌ಗೆ ಹಿಂತಿರುಗುತ್ತದೆ, ಅದಕ್ಕೆ ಅವರು ಧ್ವನಿ ನೀಡಿದ್ದಾರೆ. ಅವರೇ ಅತಿಥಿಯಾಗಿ ನನ್ನ ಎರಡನೇ ಚಿತ್ರ ಭರ್ಜರಿಗೆ ಸನ್ಮಾನ ಮಾಡಿದರು. ನಾನು ಆಗಾಗ್ಗೆ ಅವರೊಂದಿಗೆ ನನ್ನ ವೃತ್ತಿಜೀವನದ ಬಗ್ಗೆ ಚರ್ಚಿಸುತ್ತಿದ್ದೆ ಮತ್ತು ಅವರು ಯಾವಾಗಲೂ ಬ್ಯುಸಿಯಾಗಿದ್ದರೂ ನನಗಾಗಿ ಸಮಯವನ್ನು ಹೊಂದಿಸಿ ಮುಕ್ತವಾಗಿ ನನಗೆ ಮಾತನಾಡುತ್ತಿದ್ದರು" ಎನ್ನುತ್ತಾ ಹಳೆಯ ನೆನಪುಗಳೊಂದಿಗೆ ಭಾವುಕರಾಗುತ್ತಾರೆ ಚೇತನ್ ಕುಮಾರ್.

    ದೇವರ ಸ್ಕ್ರಿಪ್ಟ್ ಬೇರೆನೆ ಇತ್ತು

    ದೇವರ ಸ್ಕ್ರಿಪ್ಟ್ ಬೇರೆನೆ ಇತ್ತು

    "ಸೆಟ್‌ಗಳಲ್ಲಿ ಅಪ್ಪು ತಾಳ್ಮೆ ಕಳೆದುಕೊಳ್ಳುವುದನ್ನು ನಾನು ನೋಡಿಲ್ಲ" ಎನ್ನುತ್ತಾರೆ ನಿರ್ದೇಶಕರು. "ಅವರು ಉತ್ಸಾಹಿ ನಟರಾಗಿದ್ದರು. ಒಂದು ದಿನವೂ ದಣಿದಿದ್ದೇನೆ ಎಂದು ಹೇಳಿದ್ದನ್ನು ಕೇಳಿದ್ದೆ ಇಲ್ಲ. ವ್ಯಾಯಾಮ ಮಾಡುವುದು ಅವರ ದಿನಚರಿಯಾಗಿತ್ತು; ಅವರು ಚಿಕ್ಕ ವಯಸ್ಸಿನಿಂದಲೂ ಅನುಸರಿಸಿದ ಶಿಸ್ತಿನ ಕ್ರಮ ಅದು. ಈ ಅಗಲಿಕೆಯ ನೋವನ್ನು ಹೇಗೆ ವ್ಯಕ್ತಪಡಿಸಬೇಕು ಎಂದು ಕೂಡ ಅರ್ಥವಾಗುತ್ತಿಲ್ಲ. ಈಗ ಅವರಿಲ್ಲದೆ ಪೂರ್ಣಗೊಳಿಸಿರುವ ಚಿತ್ರ ಅಭಿಮಾನಿಗಳ ಪಾಲಿಗೆ ಒಪ್ಪಿಸುತ್ತಿದ್ದೇನೆ. ಸಿನಿಮಾದ ಸ್ಕ್ರಿಪ್ಟ್ ನಾವು ಮಾಡಬಹುದು ಆದರೆ ಜೀವನದ ಸ್ಕ್ರಿಪ್ಟ್ ಬರೆಯುವುದು ವಿಧಿ. ದೇವರ ಸ್ಕ್ರಿಪ್ಟ್ ನಲ್ಲಿ ಅವನೇ ಪ್ರಾರಂಭ ಮತ್ತು ಅಂತ್ಯವನ್ನು ನಿರ್ಧರಿಸುತ್ತಾನೆ" ಅಂತ ಹೇಳುವ ಚೇತನ್ ಕುಮಾರ್ ಅವರ ಕಣ್ಣಿನಲ್ಲಿ ನೋವಿನ ಹನಿಗಳು ಜಿನುಗುತ್ತದೆ.

    ಮಾರ್ಚ್ 17 ಕನ್ನಡ ಸಿನಿಮಾ ದಿನಾಚರಣೆ

    ಮಾರ್ಚ್ 17 ಕನ್ನಡ ಸಿನಿಮಾ ದಿನಾಚರಣೆ

    ಮಾರ್ಚ್ 17 ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಕನ್ನಡ ಸಿನಿಮಾರಂಗ ಇನ್ನುಮುಂದೆ 'ಕನ್ನಡ ಸಿನಿಮಾ ದಿನಾಚರಣೆ' ಅಂತ ಆಚರಣೆ ಮಾಡಲಿದೆ. ಇದೇ ತರದಲ್ಲಿ ಭಾರತೀಯ ಸಿನಿಮಾ ರಂಗ ಮೇ ನಾಲ್ಕರಂದು ನಿರ್ದೇಶಕರ ದಿನ (Driector's day) ಅಂತ ಆಚರಣೆ ಮಾಡುತ್ತದೆ. ಅದು ತೆಲುಗಿನ ಖ್ಯಾತ ನಿರ್ದೇಶಕ ದಿವಂಗತ ದಾಸರಿ ನಾರಾಯಣ್ ರಾವ್ ಅವರ ಹುಟ್ಟುಹಬ್ಬದ ದಿನ. ನಿರ್ದೇಶಕನ ವ್ಯಕ್ತಿತ್ವವನ್ನು ಹೈಲೈಟ್ ಮಾಡುವಂತಹ ಅಸಾಧಾರಣವಾದ ಪ್ರತಿಭೆ ದಾಸರಿ ನಾರಾಯಣ್ ರಾವ್ ಆಗಿದ್ದರು. ಇಂದು ಅವರ ಹೆಸರಿನಲ್ಲಿ ಆಚರಣೆ ಮಾಡುವ 'ನಿರ್ದೇಶಕರ ದಿನ' ಕೇವಲ ತೆಲುಗು ಸಿನಿಮಾ ರಂಗಕ್ಕೆ ಸೀಮಿತವಾಗದೆ ಇಡೀ ಭಾರತೀಯ ಸಿನಿಮಾರಂಗದ ಆಚರಣೆಯಾಗಿದೆ. ಇದೇ ರೀತಿಯಲ್ಲಿ ಅಪ್ಪು ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಕನ್ನಡ ಸಿನಿಮಾರಂಗ ಆಚರಣೆಗೆ ಮುಂದಾಗಿರುವ 'ಕನ್ನಡ ಸಿನಿಮಾ ದಿನಾಚರಣೆ' ಕೂಡ ಕೇವಲ ಈ ವರ್ಷಕ್ಕೆ ಅಷ್ಟೇ ಸೀಮಿತವಾಗದೆ ಮುಂದೆ ಕೂಡ ಅದು ಯಶಸ್ವಿಯಾಗಿ ಅರ್ಥಪೂರ್ಣವಾಗಿ ಮುಂದುವರಿಯಬೇಕು. ಮುಂದಿನ ಸಂದರ್ಭಗಳಲ್ಲಿ ಕೂಡ ಈ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಅಪ್ಪು ಅವರಿಗೆ ನಿಜವಾದ ಗೌರವವನ್ನು ಕನ್ನಡ ಸಿನಿಮಾರಂಗ ತೋರಿಸಬೇಕು ಎಂಬುದು ಪ್ರತಿಯೊಬ್ಬ ಅಭಿಮಾನಿಯ ಆಶಯವಾಗಿದೆ.

    English summary
    Much awaited punith rajkumar's starer James is going to release on March 17th. Apart from his fans entire Karnataka is waiting to watch punith's last movie, now this movie is one of the much anticipated movie in India.
    Friday, March 4, 2022, 17:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X