»   » ಟಾಲಿವುಡ್ ನಲ್ಲಿ ಮಫ್ತಿ: ಯಾರಾಗ್ತಾರೆ ಭೈರತಿ ರಣಗಲ್ಲು

ಟಾಲಿವುಡ್ ನಲ್ಲಿ ಮಫ್ತಿ: ಯಾರಾಗ್ತಾರೆ ಭೈರತಿ ರಣಗಲ್ಲು

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವೃತ್ತಿ ಬದುಕಿನಲ್ಲಿ ಸಾಕಷ್ಟು ದಿನಗಳ ನಂತರ ವಿಭಿನ್ನವಾದ ಪಾತ್ರ ಎಂದು ಪ್ರೇಕ್ಷಕರಿಗೆ ಎನ್ನಿಸಿದ ಸಿನಿಮಾ ಅಂದರೆ ಮಫ್ತಿ. ಮಿತ ಸಂಭಾಷಣೆಯ ಮೂಲಕ ಕಣ್ಣಿನ ನೋಟದಲ್ಲೇ ಅಭಿನಯಿಸಿದ ಶಿವಣ್ಣನ ಖದರ್ ನೋಡಿ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರು. ಇತ್ತೀಚಿಗಷ್ಟೆ ಮಫ್ತಿ ಸಿನಿಮಾ ಶತದಿನೋತ್ಸವವನ್ನೂ ಆಚರಣೆ ಮಾಡಿಕೊಳ್ತು.

ಇದೇ ಮೊದಲ ಬಾರಿಗೆ ರೋರಿಂಗ್ ಸ್ಟಾರ್ ಶ್ರೀ ಮುರಳಿ ಹಾಗೂ ಶಿವರಾಜ್ ಕುಮಾರ್ ಸ್ಕ್ರೀನ್ ಶೇರ್ ಮಾಡಿದ್ದು ಅಭಿಮಾನಿಗಳಿಗೆ ಖುಷಿಯನ್ನೂ ಕೊಟ್ಟಿತ್ತು. ಚೊಚ್ಚಲ ನಿರ್ದೇಶನದಲ್ಲೇ ನಿರ್ದೇಶಕ ನರ್ತನ್ ಜಯಭೇರಿ ಬಾರಿಸಿದ್ದರು. ಕನ್ನಡ ಸಿನಿಮಾರಂಗದಲ್ಲಿ ಸೂಪರ್ ಹಿಟ್ ಆದ ಮಫ್ತಿ ಸಿನಿಮಾದ ತೆಲುಗು ರಿಮೇಕ್ ಹಕ್ಕು ಮಾರಾಟವಾಗಿದೆ.

ನಂಬರ್ 1 ಯಾರಿ ವಿತ್ ಶಿವಣ್ಣ ಶೋ ಗೆ ಬಂದ ಸುದೀಪ್

ಉತ್ತಮ ಬೆಲೆಗೆ ಹಕ್ಕನ್ನು ಬಹಳ ದಿನಗಳ ಹಿಂದೆಯೇ ಮಾರಾಟ ಮಾಡಲಾಗಿತ್ತು. ಸ್ಯಾಂಡಲ್ ವುಡ್ ನ ನಂತರ ಮಫ್ತಿ ಸಿನಿಮಾ ಟಾಲಿವುಡ್ ನಲ್ಲಿ ಸೌಂಡ್ ಮಾಡಲು ಸಜ್ಜಾಗಿದೆ. ಶಿವಣ್ಣನಂತೆ ನಟಿಸುವುದಕ್ಕೆ ರೆಡಿ ಆಗಿರು ಟಾಲಿವುಡ್ ಹೀರೋ ಯಾರು? ಶ್ರೀ ಮುರಳಿ ಪಾತ್ರ ಯಾರು ಮಾಡಬಹುದು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಮುಂದೆ ಓದಿ .

ಟಾಲಿವುಡ್ ನಲ್ಲಿ ಮಫ್ತಿ

ಟಾಲಿವುಡ್ ಅಂಗಳದಲ್ಲಿ ಮಫ್ತಿ ಸಿನಿಮಾ ಸೆಟ್ಟೇರಲು ಸಿದ್ದತೆ ಆಗಿದೆ. ಚಂದನವನದಲ್ಲಿ ಭಾರಿ ಸದ್ದು ಮಾಡಿ ಶತದಿನೋತ್ಸವ ಆಚರಣೆ ಮಾಡಿಕೊಂಡಿದ್ದ ಸಿನಿಮಾ ತೆಲುಗಿನಲ್ಲಿ ರಿಮೇಕ್ ಆಗಲಿದೆ.

ಭೈರತಿ ರಣಗಲ್ಲು ಪಾತ್ರದಲ್ಲಿ ಬಾಲಯ್ಯ

ಮಫ್ತಿ ಸಿನಿಮಾದಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದ ಪಾತ್ರ ಭೈರತಿ ರಣಗಲ್ಲು. ಆ ಪಾತ್ರವನ್ನ ಟಾಲಿವುಡ್ ನಲ್ಲಿ ಯಾರು ಮಾಡುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿತ್ತು. ಅದರಂತೆಯೇ ಟಾಲಿವುಡ್ ಸ್ಟಾರ್ ನಂದಮೂರಿ ಬಾಲಕೃಷ್ಣ ಶಿವಣ್ಣ ಅಭಿನಯಿಸಿದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕವಚ ಸಿನಿಮಾ ನಿರ್ದೇಶಕನಿಂದ ಡೈರೆಕ್ಟ್

ಮಫ್ತಿ ಸಿನಿಮಾವನ್ನ ಹಕ್ಕು ಮಾರಾಟ ಮಾಡಲಾಗಿದೆ. ಹಾಗಾಗಿ ತೆಲುಗಿನಲ್ಲಿ ಅಲ್ಲಿಯ ನಿರ್ದೇಶಕರೇ ಡೈರೆಕ್ಟ್ ಮಾಡುವ ಸಾಧ್ಯತೆಗಳು ಹೆಚ್ಚಾಗಿದೆ. ಕನ್ನಡ ಮಫ್ತಿ ಸಿನಿಮಾ ನಿರ್ದೇಶನ ಮಾಡಿದ್ದ ನರ್ತನ್ ಸದ್ಯ ಹೊಸ ಸಿನಿಮಾದತ್ತ ಗಮನ ಹರಿಸಿದ್ದಾರೆ. ಹಾಗಾಗಿ ಸದ್ಯ ಶಿವರಾಜ್ ಕುಮಾರ್ ಅಭಿನಯದ 'ಕವಚ' ಚಿತ್ರ ಡೈರೆಕ್ಟ್ ಮಾಡುತ್ತಿರುವ ಜಿವಿಆರ್ ವಾಸು ತೆಲುಗು ಮಫ್ತಿಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನುವ ಸುದ್ದಿಗಳಿದೆ.

ದೋಸ್ತಿ ಸಿನಿಮಾದಲ್ಲಿ ಬಾಲಯ್ಯ

ಶಿವರಾಜ್ ಕುಮಾರ್ ಹಾಗೂ ಬಾಲಯ್ಯ ಸಾಕಷ್ಟು ದಿನಗಳಿಂದ ಸ್ನೇಹಿತರು. ಈ ಹಿಂದೆ ಬಾಲಯ್ಯನ ಚಿತ್ರದಲ್ಲಿ ಶಿವರಾಜ್ ಕುಮಾರ್ ಸಣ್ಣದೊಂದು ಪಾತ್ರ ಮಾಡಿದ್ದರು. ಈಗ ಶಿವರಾಜ್ ಕುಮಾರ್ ಅಭಿನಯದ ರಿಮೇಕ್ ಚಿತ್ರದಲ್ಲಿ ಬಾಲಯ್ಯ ಅಭಿನಯಿಸುತ್ತಿದ್ದಾರೆ. ಆದರೆ ಶ್ರೀ ಮುರಳಿ ಪಾತ್ರದಲ್ಲಿ ಯಾರು ಅಭಿನಯಿಸುತ್ತಾರೆ ಎನ್ನುವುದು ಫೈನಲ್ ಆಗಿಲ್ಲ.

'ಗುರುಪ್ರಸಾದ್ ಅಂದರೆ ಭಯ ಜಾಸ್ತಿ' ಹೀಗೆ ಹೇಳಿದ್ದು ಧನಂಜಯ್

English summary
Kannada mufthi movie is remake in Telugu. Nanda Moori Balakrishna will be seen in the role of Bhairathi Ranagallu.Narthan directed the mafthi movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X