»   » ಕೊನೆಗೂ ಫಿಕ್ಸ್ ಆಯ್ತು 'ಮುಗುಳುನಗೆ' ರಿಲೀಸ್ ಡೇಟ್

ಕೊನೆಗೂ ಫಿಕ್ಸ್ ಆಯ್ತು 'ಮುಗುಳುನಗೆ' ರಿಲೀಸ್ ಡೇಟ್

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮುಗುಳುನಗೆ' ಚಿತ್ರದ ಬಿಡುಗಡೆ ದಿನಾಂಕ ನಿಗದಿ ಆಗಿದೆ. ಇಷ್ಟು ದಿನ ಹಾಡುಗಳ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದ ಈ ಚಿತ್ರ ಸಪ್ಟೆಂಬರ್ 1 ಕ್ಕೆ ರಿಲೀಸ್ ಆಗಲಿದೆ.

ಶ್ರೇಯಾ ಘೋಷಾಲ್ ಗಾಯನದ 'ಮುಗುಳುನಗೆ' ಚಿತ್ರದ ಹಾಡು ರಿಲೀಸ್

ಈ ಹಿಂದೆ ಎರಡು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಗಣೀ ಮತ್ತು ಯೋಗರಾಜ್ ಭಟ್ ಜೋಡಿ 'ಮುಗುಳುನಗೆ' ಚಿತ್ರದ ಮೂಲಕ ಹ್ಯಾಟ್ರಿಕ್ ಬಾರಿಸುವ ತವಕದಲ್ಲಿದೆ. ಚಿತ್ರದಲ್ಲಿ ನಾಲ್ಕು ಜನ ನಾಯಕಿಯರಿದ್ದು, ಆಶಿಕಾ ರಂಗನಾಥ್, ನಿಖಿತಾ ನಾರಯಣ್, ಅಪೂರ್ವ ಆರೋರ, ಮತ್ತು ವಿಶೇಷ ಪಾತ್ರದಲ್ಲಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ.

'ಮುಗುಳುನಗೆ' ಸಿನಿಮಾದ ಮತ್ತೊಂದು ಮಜಬೂತಾದ ಹಾಡು ಕೇಳಿ

'Mugulu Nage' will be releasing on september 1.

'ಮುಗುಳುನಗೆ' ಸಿನಿಮಾಗೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ವಿಶೇಷ ಅಂದರೆ ಇದು ಹರಿಕೃಷ್ಣ ಅವರ 100ನೇ ಸಿನಿಮಾವಾಗಿದೆ. ಈಗಾಗಲೇ ಚಿತ್ರದ ಟೈಟಲ್ ಸಾಂಗ್ ಸೇರಿದಂತೆ ಎಲ್ಲ ಹಾಡುಗಳು ಜನರಿಗೆ ಇಷ್ಟ ಆಗಿದೆ. ಹಾಡುಗಳ ಮೂಲಕ ಸಿನಿಮಾದ ಮೇಲೆ ಇದ್ದ ಕುತೂಹಲ ಹೆಚ್ಚಾಗಿದೆ.

'Mugulu Nage' will be releasing on september 1.

ಅಂದುಕೊಂಡಂತೆ ಆಗಿದ್ದರೇ, 'ಮುಗುಳುನಗೆ' ಚಿತ್ರ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ಮುಂದೆ ಹೋಗಿ ಈಗ ಸಪ್ಟೆಂಬರ್ 1ಕ್ಕೆ ಅದ್ದೂರಿಯಾಗಿ ಬಿಡುಗಡೆ ಆಗಲಿದೆ.

English summary
Golden star Ganesh's starrer kannada movie 'Mugulu Nage' will be releasing on september 1. the movie is directed by Yogaraj bhat.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada