For Quick Alerts
  ALLOW NOTIFICATIONS  
  For Daily Alerts

  ಅತ್ಯಾಚಾರ ಸಂತ್ರಸ್ತೆಯರ ಪರ ದನಿ: ನೈಜ ಘಟನೆ ಆಧರಿತ ಸಿನಿಮಾ 'ವಿ3' ಬಿಡುಗಡೆ

  By ಫಿಲ್ಮಿಬೀಟ್ ಡೆಸ್ಕ್
  |

  ವರಲಕ್ಷ್ಮಿ ಶರತ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ 'ವಿ3' ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ಕನ್ನಡದ ನಟಿ ಪಾವನಾ ಗೌಡ ಈ ಸಿನಿಮಾದ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. 'ಅದುಕುಲಂ' ನರೆನ್, ಈಸ್ಟರ್ ಅನಿಲ್ ಸಿನಿಮಾದಲ್ಲಿ ಇತರ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ನೈಜ ಕಥೆಯನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಅಪ್ಪ, ಮಗಳು ಹೀಗೆ ಸುಖ ಸಂಸಾರದಲ್ಲಿ ಇದ್ದಕ್ಕಿದ್ದಂತೆ ಇವರ ಮೇಲೆ ಒಂದು ದಿನ ಕರಿ ಕಾರ್ಮೋಡ ಸರಿದಂತೆ ಒಂದು ಘಟನೆ ನಡೆಯುತ್ತದೆ. ಜೀವನದಲ್ಲಿ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡು ಗುರಿ ಸಾಧಿಸುವ ಕಡೆ ಹೆಜ್ಜೆ ಇಡುತ್ತಿದ್ದ ಮಗಳ ಜೀವನದಲ್ಲಿ ಒಂದು ಕೆಟ್ಟ ಘಟನೆ ನಡೆಯುತ್ತದೆ. ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾದ ಅವಳ ಬದುಕು, ಗೊತ್ತು ಗುರಿ ಇಲ್ಲದಂತೆ ಆಗುತ್ತದೆ.

  ಐಎಎಸ್ ವರಲಕ್ಷ್ಮಿ ನಡೆಸುವ ತನಿಖೆಯಿಂದ ಈ ಕುಟುಂಬಕ್ಕೆ ನ್ಯಾಯ ಸಿಗಬಹುದಾ ಅನ್ನೋದೇ ಈ ಸಿನಿಮಾದ ರೋಚಕತೆ. ಸಂತ್ರಸ್ತೆ ವಿಂಧ್ಯಾ ಕುರಿತ ತೀರ್ಪಿನಿಂದ ಸ್ಪೂರ್ತಿ ಪಡೆದು ಈ ಸಿನಿಮಾ ರೂಪುಗೊಂಡಿದೆ. ಅಮುದವನ್ ನಿರ್ದೇಶನ ಮಾಡಿರುವ ಈ ಸಿನಿಮಾಕ್ಕೆ ಶಿವ ಪ್ರಭು ಕ್ಯಾಮರಾ ಹಿಡಿದಿದ್ದಾರೆ.

  ಕನ್ನಡ, ತಮಿಳು, ತೆಲುಗು ಮೂರು ಭಾಷೆಯಲ್ಲಿ ದೇಶದ 450 ಸಿನಿಮಾ ಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. 'ತೂತುಮಡಿಕೆ', 'ಆಟಗಾರ', 'ಸದ್ದು ವಿಚಾರಣೆ ನಡೆಯುತ್ತಿದೆ' ಮುಂತಾದ ಕನ್ನಡ ಚಿತ್ರಗಳಲ್ಲಿ ಪಾವನಾ ನಟಿಸಿದ್ದಾರೆ. ಮೊದಲ ಬಾರಿ ತಮಿಳು ಮೂಲದ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  ಕನ್ನಡದ 'ಮಾಣಿಕ್ಯ' ಚಿತ್ರದಲ್ಲಿ ಸುದೀಪ್ ಅವರಿಗೆ ನಾಯಕಿ ನಟಿಯಾಗಿ ಅಭಿನಯಿಸಿರುವ ವರಲಕ್ಷ್ಮಿ ಸಹ ಈ ಸಿನಿಮಾದ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ವರಲಕ್ಷ್ಮಿ ಅವರಿಗೆ ಈ ರೀತಿಯ ಪಾತ್ರಗಳು ಹೊಸದೇನೂ ಅಲ್ಲ. ರಾಜಕಾರಣಿಯಾಗಿ ಪೊಲೀಸ್ ಅಧಿಕಾರಿಯಾಗಿ ಅವರು ತೆರೆಯ ಮೇಲೆ ಚೆನ್ನಾಗಿ ಅಭಿನಯಿಸಿ ಮೆಚ್ಚುಗೆ ಗಳಿಸಿದ್ದಾರೆ. ಐಎಎಸ್ ಅಧಿಕಾರಿಯಾಗಿ ಈ ಸಿನಿಮಾದ ಮೂಲಕ ಮತ್ತೊಮ್ಮೆ ಮಿಂಚಲಿದ್ದಾರೆ.

  ತನಿಖೆಯ ಪ್ರತಿ ಹಂತದಲ್ಲೂ ರೋಚಕತೆ ಹೊಂದಿರುವುದು ಈ ಸಿನಿಮಾದ ಜೀವಾಳ. ಅತ್ಯಾಚಾರಕ್ಕೆ ಒಳಾಗದ ಸಂತ್ರಸ್ತೆಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುವ ಸಂದೇಶ ಈ ಸಿನಿಮಾದಲ್ಲಿ ಇದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪರವಾಗಿ ಈ ಸಿನಿಮಾ ದನಿ ಎತ್ತಲಿದೆ.

  English summary
  multi language movie V3 released on January 06. Movie is based on real incidents. Pavana, Varalakshmi acted in the lead role.
  Friday, January 6, 2023, 19:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X