»   » ಡ್ರಗ್ಸ್ ಮಾಫಿಯಾ ಪ್ರಕರಣ: 'ಬಿಗ್ ಬಾಸ್' ನಿಂದ ಹೊರಕ್ಕೆ ಮುಮೈತ್ ಖಾನ್?

ಡ್ರಗ್ಸ್ ಮಾಫಿಯಾ ಪ್ರಕರಣ: 'ಬಿಗ್ ಬಾಸ್' ನಿಂದ ಹೊರಕ್ಕೆ ಮುಮೈತ್ ಖಾನ್?

Posted By:
Subscribe to Filmibeat Kannada

ಟಾಲಿವುಡ್ ಅಂಗಳದ 15 ತಾರೆಯರು ಡ್ರಗ್ಸ್ ಮಾಫಿಯಾದಲ್ಲಿ ತೊಡಗಿಕೊಂಡಿರುವ ಸುದ್ದಿ ಹೊರಬಿದ್ದಿದ್ದು, ಹಲವು ದಿನಗಳಿಂದ ಈ ಸುದ್ದಿ ಚಿತ್ರರಂಗದಲ್ಲಿ ಭುಗಿಲೆದ್ದಿದೆ. ಅಲ್ಲದೇ ಹಲವು ತಾರೆಯರಿಗೆ ತೆಲಂಗಾಣ ಅಬಕಾರಿ ಇಲಾಖೆ ವಿಚಾರಣೆಗೆ ಒಳಗಾಗುವಂತೆ ನೋಟೀಸ್ ನೀಡಿದ್ದು, ಜುಲೈ 27 ರ ಒಳಗೆ ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಡ್ರಗ್ಸ್ ಮಾಫಿಯಾದಲ್ಲಿ 15 ಟಾಲಿವುಡ್ ತಾರೆಯರ ಹೆಸರು

ಅಂದಹಾಗೆ ಈಗ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಐಟೆಂ ಗರ್ಲ್ ಮುಮೈತ್ ಖಾನ್ ಅವರ ಹೆಸರು ಕೇಳಿಬಂದಿದ್ದು, ಅವರಿಗೂ ಅಬಕಾರಿ ಇಲಾಖೆ ವಿಚಾರಣೆಗೆ ಬರುವಂತೆ ನೋಟೀಸ್ ನೀಡಿದೆ. ಈ ಹಿನ್ನೆಲೆಯಲ್ಲಿ ಮುಮೈತ್ ಖಾನ್ ತೆಲುಗು 'ಬಿಗ್ ಬಾಸ್' ಶೋ ನಿಂದ ಹೊರಬರುವ ಸಂಭವ ಇದೆ ಎನ್ನಲಾಗಿದೆ. ಮುಂದೆ ಓದಿರಿ..

ಬಿಗ್‌ ಬಾಸ್ ನಿಂದ ಹೊರನಡೆದ ಮುಮೈತ್ ಖಾನ್

ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಅಬಕಾರಿ ಇಲಾಖೆ ಎನ್‌ಡಿಪಿಎಸ್‌ ಸೆಕ್ಷನ್ 67 ರ ಅಡಿಯಲ್ಲಿ ಮುಮೈತ್ ಖಾನ್‌ ಗೆ ನೋಟೀಸ್ ನೀಡಿದ್ದು, ಜುಲೈ 27 ರ ಒಳಗೆ ವಿಚಾರಣೆಗೆ ಬರುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಜೂನಿಯರ್ ಎನ್‌ಟಿಆರ್ ನಿರೂಪಣೆಯ ತೆಲುಗು 'ಬಿಗ್‌ ಬಾಸ್' ರಿಯಾಲಿಟಿ ಶೋ ನಿಂದ ಈಗ ಮುಮೈತ್ ಖಾನ್ ಹೊರಬರುವ ಸಂಭವ ಇದೆಯಂತೆ. ಮುಮೈತ್ ಖಾನ್ 40 ಹೆಚ್ಚು ತೆಲುಗು ಸಿನಿಮಾ, 20 ಕ್ಕೂ ಹೆಚ್ಚು ಹಿಂದಿ, 16 ಕ್ಕೂ ಹೆಚ್ಚು ತಮಿಳು ಮತ್ತು 5 ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಅಭಿನಯಕ್ಕಿಂತ ಸೊಂಟ ಬಳುಕಿಸಿದ್ದೇ ಹೆಚ್ಚು.

ಎಸ್‌ಐಟಿ ಮುಂದೆ ಹಾಜರಾಗಿದ್ದ ನಟ ತರುಣ್

ಇನ್ನು ಅಕ್ರಮ ಡ್ರಗ್ಸ್ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ(ಜುಲೈ 22) ತೆಲುಗು ನಟ ತರುಣ್ ಅವರು ಸಹ ಅಬಕಾರಿ ಇಲಾಖೆಯ ವಿಶೇಷ ತನಿಖಾ ತಂಡದ ಮುಂದೆ ವಿಚಾರಣೆಗೆ ಹಾಜರಾಗಿದ್ದರು.

ವಿಚಾರಣೆ ಎದುರಿಸಿದ 'ಬಾಹುಬಲಿ 2' ನಟ

'ಬಾಹುಬಲಿ 2' ಚಿತ್ರದಲ್ಲಿ ಬಣ್ಣ ಹಚ್ಚಿದ್ದ ನಟ ಪಿ ಸುಬ್ಬರಾಜು ರವರ ಹೆಸರು ಸಹ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಸಹ ಜುಲೈ 21 ರಂದು ಎಸ್‌ಐಟಿ ಮುಖ್ಯಸ್ಥ ಹಾಗೂ ಇತರೆ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ.

ಪುರಿ ಜಗನ್ನಾಥ್, ಶ್ಯಾಮ್

ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಕೇಳಿಬಂದಿದ್ದ 15 ಟಾಲಿವುಡ್ ಸೆಲೆಬ್ರಿಟಿಗಳ ಲಿಸ್ಟ್ ನಲ್ಲಿ ಪುರಿ ಜಗನ್ನಾಥ್ ಮತ್ತು ಛಾಯಾಗ್ರಾಹಕ ಶ್ಯಾಮ್ ರವರ ಹೆಸರು ಸಹ ಕೇಳಿಬಂದಿತ್ತು. ಇವರು ಸಹ ಈಗಾಗಲೇ ಎಸ್‌ಐಟಿ ಮುಂದೆ ಹಾಜರಾಗಿದ್ದರು.

ಡ್ರಗ್ಸ್ ಮಾಫಿಯಾದಲ್ಲಿ ತಂದೆ ಹೆಸರು: ಕಿಡಿಕಾರಿದ ಪುರಿ ಜಗನ್ನಾಥ್ ಪುತ್ರಿ ಪವಿತ್ರ

English summary
Item girl Mumait Khan to quit Bigg Boss for drug quiz

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada