»   » ವೀರೇಶ್ ಚಿತ್ರಮಂದಿರದಲ್ಲಿ ಸತತ ಹೌಸ್ ಫುಲ್ ಬೋರ್ಡ್ ಬಿದ್ದಿದ್ದು ಈ ಚಿತ್ರಕ್ಕೆ.!

ವೀರೇಶ್ ಚಿತ್ರಮಂದಿರದಲ್ಲಿ ಸತತ ಹೌಸ್ ಫುಲ್ ಬೋರ್ಡ್ ಬಿದ್ದಿದ್ದು ಈ ಚಿತ್ರಕ್ಕೆ.!

Posted By:
Subscribe to Filmibeat Kannada

ಬೆಂಗಳೂರಿನ ವಿಜಯನಗರ ಸುತ್ತ-ಮುತ್ತ ಇರುವ ಚಿತ್ರಮಂದಿರಗಳ ಪೈಕಿ ವೀರೇಶ್ ಥಿಯೇಟರ್ ಒನ್ ಆಫ್ ದಿ ಬೆಸ್ಟ್. ಎರಡು ಸ್ಕ್ರೀನ್ ಗಳು ಇರುವ ಈ ಚಿತ್ರಮಂದಿರಕ್ಕೆ ಬರೀ ಮಾಸ್ ಮಾತ್ರ ಅಲ್ಲ, ಕ್ಲಾಸ್ ಆಡಿಯನ್ಸ್ ಗಳೂ ಬರ್ತಾರೆ.

ಇಂತಿಪ್ಪ ವೀರೇಶ್ ಚಿತ್ರಮಂದಿರದಲ್ಲಿ 'ಮಮ್ಮಿ ಸೇವ್ ಮಿ' ಸಿನಿಮಾ ಸತತ 30 ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿದೆ. ಆ ಮೂಲಕ ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರನ್ನ ಸೆಳೆಯುವಲ್ಲಿ 'ಮಮ್ಮಿ ಸೇವ್ ಮಿ' ಸಿನಿಮಾ ಯಶಸ್ವಿ ಆಗಿದೆ.

mummy-save-me-30-shows-housefull-in-veeresh-theater

ಪ್ರಿಯಾಂಕಾ ಉಪೇಂದ್ರ, ಯುವಿನಾ ಪಾರ್ಥವಿ, ಐಶ್ವರ್ಯ ಸಿಂಧೋಗಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಹಾರರ್ ಸಿನಿಮಾ 'ಮಮ್ಮಿ ಸೇವ್ ಮಿ'. ಯುವ ನಿರ್ದೇಶಕ ಲೋಹಿತ್ ಆಕ್ಷನ್ ಕಟ್ ಹೇಳಿರುವ 'ಮಮ್ಮಿ ಸೇವ್ ಮಿ' ಚಿತ್ರ ಪ್ರೇಕ್ಷಕರನ್ನ ಬೆಚ್ಚಿ ಬೀಳಿಸುವಲ್ಲಿ ಸಕ್ಸಸ್ ಆಗಿದೆ.[ಚಿಲ್ಲರೆ ಸಮಸ್ಯೆ ಇದ್ದರೂ 'ಮಮ್ಮಿ' ನೋಡಲು ನೂಕುನುಗ್ಗಲು.!]

mummy-save-me-30-shows-housefull-in-veeresh-theater

ನೋಟ್ ಬ್ಯಾನ್ ಎಫೆಕ್ಟ್ ನಿಂದಾಗಿ ಎಲ್ಲರಿಗೂ ಚಿಲ್ಲರೆ ಸಮಸ್ಯೆ ಕಾಡುತ್ತಿದ್ದರೂ, 'ಮಮ್ಮಿ ಸೇವ್ ಮಿ' ಚಿತ್ರ ಸತತ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ ಅಂದ್ರೆ ನೀವೇ ಊಹಿಸಿ 'ಮಮ್ಮಿ' ಮ್ಯಾಜಿಕ್ ಹೇಗಿರಬಹುದು ಅಂತ.!

'ಮಮ್ಮಿ ಸೇವ್ ಮಿ' ಚಿತ್ರದ ವಿಮರ್ಶೆ ಓದಬೇಕು ಅಂದ್ರೆ ಈ ಲಿಂಕ್ ಕ್ಲಿಕ್ ಮಾಡಿ....

English summary
Kannada Actress Priyanka Upendra starrer Kannada Movie 'Mummy Save Me' is housefull for 30 shows continuously in Veeresh Theater, Bengaluru. The movie is directed by Lohith.H

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada