»   » ವಿದೇಶಗಳಲ್ಲಿ ರಾರಾಜಿಸಲಿದೆ ಕನ್ನಡದ 'ಮಮ್ಮಿ ಸೇವ್ ಮಿ'

ವಿದೇಶಗಳಲ್ಲಿ ರಾರಾಜಿಸಲಿದೆ ಕನ್ನಡದ 'ಮಮ್ಮಿ ಸೇವ್ ಮಿ'

Posted By:
Subscribe to Filmibeat Kannada

ಕರ್ನಾಟಕದಲ್ಲಿ ಕನ್ನಡ ಚಿತ್ರಗಳನ್ನ ಕೇಳುವವರಿಲ್ಲ. ಎಂತೆಂಥ ಸಿನಿಮಾಗಳೇ ಕೇವಲ ಎರಡು ವಾರಕ್ಕೆ ಎತ್ತಂಗಡಿ ಆಗಿರುವ ಉದಾಹರಣೆ ನಮ್ಮ ಕಣ್ಣೆದುರಿದೆ. ಅಂಥದ್ರಲ್ಲಿ ಹೊಸ ಪ್ರತಿಭೆ ಲೋಹಿತ್ ನಿರ್ದೇಶನದ ಪ್ರಿಯಾಂಕಾ ಉಪೇಂದ್ರ ಅಭಿನಯದ 'ಮಮ್ಮಿ ಸೇವ್ ಮಿ' ಚಿತ್ರ ಯಶಸ್ವಿ 25 ದಿನಗಳನ್ನು ಪೂರೈಸಿದೆ.

ವೀರೇಶ್ ಸೇರಿದಂತೆ ಅನೇಕ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ 'ಮಮ್ಮಿ ಸೇಮ್ ಮಿ' ಸಿನಿಮಾ ಸತತ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಮಲ್ಟಿಪ್ಲೆಕ್ಸ್ ಗಳಲ್ಲೂ 'ಮಮ್ಮಿ' ನೋಡಿ ನಡುಗುವವರ ಸಂಖ್ಯೆ ಕಮ್ಮಿ ಏನಿಲ್ಲ. ಹೀಗಿರುವಾಗಲೇ, 'ಮಮ್ಮಿ ಸೇವ್ ಮಿ' ಚಿತ್ರ ವಿದೇಶಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ.[ವಿಮರ್ಶೆ: ಗುಂಡಿಗೆ ಗಟ್ಟಿ ಮಾಡಿಕೊಂಡು ಮಿಸ್ ಮಾಡದೇ 'ಮಮ್ಮಿ' ನೋಡಿ]

'Mummy Save Me' to release in Foreign countries

'ಶಿಕಾಗೋ, ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್, ನ್ಯೂ ಜರ್ಸಿ, ಅಟ್ಲಾಂಟಾ ಸೇರಿದಂತೆ ಅಮೇರಿಕಾದ ಪ್ರಮುಖ ಸಿಟಿಗಳಲ್ಲಿ 'ಮಮ್ಮಿ ಸೇವ್ ಮಿ' ಸಿನಿಮಾ ಜನವರಿ 6 ರಂದು ಗ್ರ್ಯಾಂಡ್ ರಿಲೀಸ್ ಆಗಲಿದೆ.[ವೀರೇಶ್ ಚಿತ್ರಮಂದಿರದಲ್ಲಿ ಸತತ ಹೌಸ್ ಫುಲ್ ಬೋರ್ಡ್ ಬಿದ್ದಿದ್ದು ಈ ಚಿತ್ರಕ್ಕೆ.!]

ಏಳು ತಿಂಗಳ ತುಂಬು ಗರ್ಭಿಣಿಯಾಗಿ ಪ್ರಿಯಾಂಕಾ ಉಪೇಂದ್ರ ಅಭಿನಯಿಸಿರುವ ಸಿನಿಮಾ 'ಮಮ್ಮಿ ಸೇವ್ ಮಿ'. ಪಕ್ಕಾ ಹಾರರ್ ಚಿತ್ರವಾಗಿರುವ 'ಮಮ್ಮಿ ಸೇವ್ ಮಿ' ಕನ್ನಡ ಸಿನಿ ಪ್ರೇಕ್ಷಕರಿಗೆ ಸಖತ್ ಥ್ರಿಲ್ ಕೊಟ್ಟಿದೆ. ಈಗ ವಿದೇಶಗಳಲ್ಲಿ ಚಿತ್ರಕ್ಕೆ ಸಿಗುವ ಪ್ರತಿಕ್ರಿಯೆ ತಿಳಿಯುವ ಕುತೂಹಲ 'ಮಮ್ಮಿ' ತಂಡಕ್ಕಿದೆ.

English summary
Kannada Actress Priyanka Upendra starrer Kannada Movie 'Mummy Save Me' is all set to release in Foreign countries

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada