For Quick Alerts
  ALLOW NOTIFICATIONS  
  For Daily Alerts

  'ಕುರುಕ್ಷೇತ್ರ'ದ ಬಗ್ಗೆ 'ಅದೊಂದು' ಬಿಟ್ಟು ಎಲ್ಲ ಹೇಳಿದ್ರು ನಿರ್ಮಾಪಕ ಮುನಿರತ್ನ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದಲ್ಲಿ ತಯಾರಾಗಿರುವ ಪೌರಾಣಿಕ ಸಿನಿಮಾ 'ಕುರುಕ್ಷೇತ್ರ' ಕನ್ನಡ ಚಿತ್ರರಂಗದ ಬಹದೊಡ್ಡ ಪ್ರಾಜೆಕ್ಟ್. ಈ ಸಿನಿಮಾ ನಮ್ಮ ಇಂಡಸ್ಟ್ರಿಯ ಗೌರವ, ಘನತೆಯನ್ನ ಹೆಚ್ಚಿಸುತ್ತೆ, ಇಡೀ ದೇಶ ಸ್ಯಾಂಡಲ್ ವುಡ್ ಕಡೆ ನೋಡುವಂತಾಗುತ್ತೆ ಎಂಬ ಭರವಸೆ ಹುಟ್ಟಿಸಿದೆ.

  ಇಂತಹ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಇಷ್ಟೋತ್ತಿಗಾಲೇ ತೆರೆಮೇಲೆ ಬರಬೇಕಿತ್ತು. ಅದ್ಯಾಕೋ ರಿಲೀಸ್ ಆಗ್ತಾನೆ ಇಲ್ಲ. ಸ್ವತಃ ನಿರ್ಮಾಪಕರೇ ಹೇಳಿದ್ದ ಪ್ರಕಾರ, 2018ರ ಕರ್ನಾಟಕ ವಿಧಾನಸಭೆ ಎಲೆಕ್ಷನ್ಗೂ ಮುಂಚೆಯೇ ಬಿಡುಗಡೆಯಾಗಬೇಕಿತ್ತು.

  ಸೆನ್ಸಾರ್ ಆಗಿದ್ದರೂ, 'ಕುರುಕ್ಷೇತ್ರ' ದರ್ಶನ ಸದ್ಯಕ್ಕಿಲ್ಲ.!

  ವಿಧಾನಸಭೆ ಎಲೆಕ್ಷನ್ ಮುಗಿದು, ಈಗ ಲೋಕಸಭೆ ಎಲೆಕ್ಷನ್ ಬರ್ತಿದೆ. ಆದ್ರೂ ರಿಲೀಸ್ ಮಾಡುವ ಸುಳಿವು ಕೊಡ್ತಿಲ್ಲ. ಶೂಟಿಂಗ್ ಮುಗಿದಿದೆ, ಡಬ್ಬಿಂಗ್ ಮುಗಿದಿದೆ, ಮೊದಲ ಪ್ರತಿ ಸಿದ್ಧವಾಗಿದೆ. ನಿರ್ಮಾಪಕರು ಸಿನಿಮಾನೂ ನೋಡಿದ್ದಾರೆ. ಆದ್ರೂ, ರಿಲೀಸ್ ಆಗ್ತಿಲ್ಲ. ಯಾಕೆ? ಮುಂದೆ ಓದಿ.....

  ಹುಂ ಅಂದ್ರೆ 'ಕುರುಕ್ಷೇತ್ರ' ರೆಡಿ

  ಹುಂ ಅಂದ್ರೆ 'ಕುರುಕ್ಷೇತ್ರ' ರೆಡಿ

  ನಿರ್ಮಾಪಕ ಮುನಿರತ್ನ ಹೇಳುವ ಪ್ರಕಾರ 'ಕುರುಕ್ಷೇತ್ರ' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಮನಸ್ಸು ಮಾಡಿದ್ರೆ, ನಟಸಾರ್ವಭೌಮ ಸಿನಿಮಾ ನಂತರ ತೆರೆಗೆ ತರಲು ಸಿದ್ಧರಿದ್ದಾರಂತೆ. ಆದ್ರೆ, ಅದು 2ಡಿ ಪ್ರಿಂಟ್. ಬಟ್, ಮುನಿರತ್ನ ಅವರಿಗೆ 3ಡಿ ಮಾಡ್ತೀನಿ ಅಂತ ಹೇಳಿರುವ ಕಾರಣ, ಅದರ ಕೆಲಸ ನಡೆಯುತ್ತಿದೆ. ಅದಕ್ಕೆ ವಿಳಂಬವಾಗ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

  'ಕುರುಕ್ಷೇತ್ರ' ಸಿನಿಮಾದ ಅವಧಿ ಕೇಳಿದ್ರೆ ಆಶ್ಚರ್ಯ ಆಗುತ್ತೆ

  ನಾಲ್ಕು ಭಾಷೆಯ ಡಬ್ಬಿಂಗ್ ಆರಂಭವಾಗಿದೆ

  ನಾಲ್ಕು ಭಾಷೆಯ ಡಬ್ಬಿಂಗ್ ಆರಂಭವಾಗಿದೆ

  'ಕುರುಕ್ಷೇತ್ರ' ಸಿನಿಮಾ ಕೇವಲ ಕನ್ನಡದಲ್ಲಿ ಮಾತ್ರ ರಿಲೀಸ್ ಆಗುತ್ತಿಲ್ಲ. ಐದಕ್ಕೂ ಹೆಚ್ಚು ಭಾಷೆಯಲ್ಲಿ ಸಿನಿಮಾ ಬರಲಿದೆ. ಈಗಾಗಲೇ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ದಕ್ಷಿಣ ಭಾರತದ ಭಾಷೆಯಗಳ ಡಬ್ಬಿಂಗ್ ನಡೆಯುತ್ತಿದೆ ಎಂದು ನಿರ್ಮಾಪಕರು ಖಚಿತಪಡಿಸಿದ್ದಾರೆ. ನಂತರ ಬೆಂಗಾಳಿ, ಮರಾಠಿ, ಹಿಂದಿ ಸೇರಿದಂತೆ ಉತ್ತರ ಭಾರತದ ಭಾಷೆಯಲ್ಲಿ ಸಿನಿಮಾ ಡಬ್ ಮಾಡಲಿದ್ದಾರಂತೆ.

  ''ನನ್ನ ಕನಸು ಈಡೇರುವ ತನಕ 'ಕುರುಕ್ಷೇತ್ರ' ತೆರೆ ಮೇಲೆ ಬರಲ್ಲ'' ಎಂದ ಮುನಿರತ್ನ!

  ಮೊದಲ ಆಡಿಯೋ ರಿಲೀಸ್ ಮಾಡ್ತೀವಿ

  ಮೊದಲ ಆಡಿಯೋ ರಿಲೀಸ್ ಮಾಡ್ತೀವಿ

  ಕುರುಕ್ಷೇತ್ರ ಯಾವಾಗ ರಿಲೀಸ್ ಹೇಳಿ ಸರ್ ಎಂದು ಎಷ್ಟೇ ಕೇಳಿದ್ರು, ಮುನಿರತ್ನ ಅವರು ಮಾತ್ರ ರಿಲೀಸ್ ಬಗ್ಗೆ ಯಾವುದೇ ಸುಳಿವು ನೀಡಿಲ್ಲ. ''ಮೊದಲ ಆಡಿಯೋ ರಿಲೀಸ್ ಮಾಡೋಣ. ಅದಕ್ಕೊಂದು ದಿನಾಂಕ ನಿಗದಿ ಮಾಡಿದ್ದೀನಿ. 3ಡಿ ಕೆಲಸ ಮುಗಿಲಿ ಬೇಗ ತೆರೆಮೇಲೆ ನೋಡಬಹುದು'' ಅಂತ ಹೇಳಿ ಸುಮ್ಮನಾದರು.

  'ಕುರುಕ್ಷೇತ್ರ' ಚಿತ್ರವನ್ನ ರಿಜೆಕ್ಟ್ ಮಾಡಿದ್ರಂತೆ ಈ ಬಹುಭಾಷಾ ನಟಿ.!

  ಸದ್ಯಕ್ಕೆ 'ಕುರುಕ್ಷೇತ್ರ' ದರ್ಶನ ಆಗಲ್ಲ

  ಸದ್ಯಕ್ಕೆ 'ಕುರುಕ್ಷೇತ್ರ' ದರ್ಶನ ಆಗಲ್ಲ

  ಮುನಿರತ್ನ ಅವರ ಛಲ, ಹಠ ನೋಡಿದ್ರೆ ಸದ್ಯಕ್ಕೆ ಕುರುಕ್ಷೇತ್ರ ಸಿನಿಮಾ ನೋಡುವ ಅವಕಾಶ ಸಿಕ್ಕಲ್ಲ. ಅದಕ್ಕೆ ಇನ್ನು ಹೆಚ್ಚಿನ ಸಮಯ ಬೇಕಾಗುತ್ತೆ. ಎಲ್ಲ ಭಾಷೆಯಲ್ಲಿ ಡಬ್ಬಿಂಗ್, 3ಡಿ ಎಫೆಕ್ಟ್, ಇದಕ್ಕೆ ಮತ್ತಷ್ಟು ಸಮಯ ಅವಶ್ಯಕ. ಹಾಗಾಗಿ, ಕುರುಕ್ಷೇತ್ರದ ಮೇಲಿನ ನಿರೀಕ್ಷೆ ಇನ್ನು ಸ್ವಲ್ಪ ದಿನ ಹಾಗೆ ಇರಬೇಕಿದೆ.

  'ಕುರುಕ್ಷೇತ್ರ' ನೋಡಿದ ರಾಕ್ ಲೈನ್ ಏನಂದ್ರು, ಜಗ್ಗೇಶ್ ನುಡಿದ ಭವಿಷ್ಯವೇನು.?

  English summary
  Producer Munirathna spoke about most expected movie kurukshetra release date

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X