For Quick Alerts
  ALLOW NOTIFICATIONS  
  For Daily Alerts

  ಐದು ಭಾಷೆಯಲ್ಲಿ ದರ್ಶನ್ 'ಕುರುಕ್ಷೇತ್ರ': ನಾಲ್ಕು ಭಾಷೆಯ ಚಿತ್ರದ ಪೋಸ್ಟರ್ ಬಿಡುಗಡೆ

  |
  ದರ್ಶನ್ ಅಭಿಮಾನಿಗಳಿಗೊಂದು ಸಿಹಿಸುದ್ದಿ..! | FILMIBEAT KANNADA

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕುರುಕ್ಷೇತ್ರ' ಸಿನಿಮಾ ಯಾವಾಗ ಬರುತ್ತೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ. ಇವತ್ತು ರಿಲೀಸ್ ಆಗುತ್ತೆ ನಾಳೆ ರಿಲೀಸ್ ಆಗುತ್ತೆ ಅಂತ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಸಿನಿಪ್ರಿಯರಿಗೆ ನಿರಾಸೆ ಮಾಡುತ್ತಲೇ ಬಂದಿದ್ದ ಚಿತ್ರತಂಡ, ಈಗ ನಾಲ್ಕು ಭಾಷೆಯ ಪೋಸ್ಟರ್ಸ್ ಅನ್ನು ರಿಲೀಸ್ ಮಾಡಿ ಅಚ್ಚರಿ ಮೂಡಿಸಿದೆ.

  ಈ ಹಿಂದೆ ಕುರುಕ್ಷೇತ್ರ ಐದು ಭಾಷೆಯಲ್ಲಿ ಬರಲಿದೆ ಅಂತ ಹೇಳಲಾಗುತ್ತಿತ್ತು. ಆದ್ರೆ ಈ ಬಗ್ಗೆ ನಿರ್ಮಾಪಕ ಮುನಿರತ್ನ ಆಗಲಿ ಅಥವಾ ಚಿತ್ರತಂಡ ಯಾವುದೇ ಮಾಹಿತಿ ನೀಡಿರಲಿಲ್ಲ. ಆದ್ರೀಗ ಚಿತ್ರ ಐದು ಭಾಷೆಯಲ್ಲಿ ಬಿಡುಗಡೆಯಾಗುವುದು ಅಧಕೃತವಾಗಿದೆ. ಸದ್ಯ ನಾಲ್ಕು ಭಾಷೆಯ ಪೋಸ್ಟರ್ಸ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ.

  ಮಂಡ್ಯದಲ್ಲಿ ದುರ್ಯೋಧನ vs ಅಭಿಮನ್ಯು: ಮುನಿರತ್ನ 'ಕುರುಕ್ಷೇತ್ರ'ಕ್ಕೆ ಫುಲ್ ಟೆನ್ಷನ್.!

  ದಿನದಿಂದ ದಿನಕ್ಕೆ ಚಿತ್ರಪ್ರಿಯರ ಕುತೂಹಲ ಹೆಚ್ಚಿಸುತ್ತಲೇ ಇದೇ ಕುರುಕ್ಷೇತ್ರ. ಅದರಲ್ಲೂ ದರ್ಶನ್ ಅಭಿನಯದ 50ನೇ ಸಿನಿಮಾ ಹಾಗಾಗಿ ಡಿ ಬಾಸ್ ಅಭಿಮಾನಿಗಳಲ್ಲಿ ಕುತೂಹಲ ತುಸು ಹೆಚ್ಚೇ ಇದೆ. ಆದ್ರೆ ಚಾಲೆಂಜಿಂಗ್ ಸ್ಟಾರ್ 51ನೇ ಸಿನಿಮಾ 'ಯಜಮಾನ' ರಿಲೀಸ್ ಆದ್ರು 'ಮುನಿರತ್ನ ಕುರುಕ್ಷೇತ್ರ'ಕ್ಕೆ ಇನ್ನು ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. ಸದ್ಯ ಬೇರೆ ಬೇರೆ ಭಾಷೆಯ ಪೋಸ್ಟರ್ಸ್ ರಿಲೀಸ್ ಮಾಡಿರುವ ಸಿನಿಮಾದ ಅಪ್ ಡೇಟ್ ಏನು ಗೊತ್ತಾ? ಮುಂದೆ ಓದಿ..

  ನಾಲ್ಕು ಭಾಷೆಯ ಪೋಸ್ಟರ್ಸ್ ರಿಲೀಸ್

  ನಾಲ್ಕು ಭಾಷೆಯ ಪೋಸ್ಟರ್ಸ್ ರಿಲೀಸ್

  ಸ್ಯಾಂಡಲ್ ವುಡ್ ಚಿತ್ರಪ್ರಿಯರು ಉಸಿರು ಬಿಗಿ ಹಿಡಿದು ಕಾಯುತ್ತಿರುವ ಬಹುನಿರೀಕ್ಷೆಯ 'ಕುರುಕ್ಷೇತ್ರ' ಚಿತ್ರದಿಂದ ಇತ್ತೀಚಿಗೆ ಯಾವುದೆ ಅಪ್ ಡೇಟ್ಸ್ ಸಿಕ್ಕಿರಲಿಲ್ಲ. ಆದ್ರೀಗ ನಾಲ್ಕು ಭಾಷೆಯ ಟೈಟಲ್ ಪೋಸ್ಟರ್ಸ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರದ ಟೈಟಲ್ ಪೋಸ್ಟರ್ಸ್ ರಿಲೀಸ್ ಎಲ್ಲರ ಗಮನ ಸೆಳೆಯುತ್ತಿದೆ.

  ಚುನಾವಣೆ ಅಖಾಡಕ್ಕೆ ಧುಮುಕಿರುವ ನಿಖಿಲ್ ಮುಂದಿನ ಸಿನಿಮಾ ಯಾವುದು?

  ಹಿಂದಿಯಲ್ಲು ಬರಲಿದೆ ಕುರುಕ್ಷೇತ್ರ

  ಹಿಂದಿಯಲ್ಲು ಬರಲಿದೆ ಕುರುಕ್ಷೇತ್ರ

  ಸದ್ಯ ರಿಲೀಸ್ ಆಗಿರುವ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರದ ಟೈಟಲ್ ಪೋಸ್ಟರ್ ಗಳು ಎಲ್ಲರ ಗಮನ ಸೆಳೆಯುತ್ತಿದೆ. ಇದ್ರ ಜೊತೆಗೆ 'ಕುರುಕ್ಷೇತ್ರ' ಹಿಂದಿ ಭಾಷೆಯಲ್ಲೂ ತೆರೆಗೆ ಬರಲು ಸಿದ್ಧವಾಗಿದೆ. ಸಧ್ಯದಲ್ಲೇ ಹಿಂದಿ ಪೋಸ್ಟರ್ ಕೂಡ ರಿಲೀಸ್ ಮಾಡಲಿದೆ ಚಿತ್ರತಂಡ. ಸದ್ಯ ಐದು ಭಾಷೆಯಲ್ಲಿ ತೆರೆಗೆ ಬರಲು ತಯಾರಾಗಿರುವ 'ಕುರುಕ್ಷೇತ್ರ' ಇನ್ನು ಬೇರೆ ಬೇರೆ ಭಾಷೆಯಲ್ಲಿ ತೆರೆಗೆ ಬಂದರು ಅಚ್ಚರಿ ಇಲ್ಲ.

  ಪೋಸ್ಟ್ ಪ್ರೊಡಕ್ಷನ್ ಮುಗಿಸಿದ ಕುರುಕ್ಷೇತ್ರ

  ಪೋಸ್ಟ್ ಪ್ರೊಡಕ್ಷನ್ ಮುಗಿಸಿದ ಕುರುಕ್ಷೇತ್ರ

  'ಕುರುಕ್ಷೇತ್ರ' ಸಿನಿಮಾ ಚಿತ್ರೀಕರಣ ಮುಗಿಸಿ ವರ್ಷವೇ ಕಳೆದಿದೆ. ಆದ್ರೆ ಇದುವರೆಗೂ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿತರವಾಗಿತ್ತು. ಆದ್ರೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಬಹುತೇಕ ಮುಗಿಯುತ್ತ ಬಂದಿದೆ. ಚಿತ್ರದ ಡಬ್ಬಿಂಗ್ ಮತ್ತು ವಿ ಎಫ್ ಎಕ್ಸ್ ಕೆಲಸಗಳು ಸಂಪೂರ್ಣಗೊಂಡಿದೆ. ಸದ್ಯ ಪ್ರಮೋಷನ್ ಪ್ಲಾನ್ ಮಾಡುತ್ತಿದೆ 'ಕುರುಕ್ಷೇತ್ರ' ಚಿತ್ರತಂಡ.

  ದರ್ಶನ್ 'ಕುರುಕ್ಷೇತ್ರ' ಬಿಡುಗಡೆಗೆ ಅಡ್ಡಿಯಾಗ್ತಾರಾ ನಿಖಿಲ್ ಕುಮಾರ್.?

  ಸಧ್ಯದಲ್ಲೇ ಬರಲಿದೆ ಆಡಿಯೋ ಮತ್ತು ಟ್ರೈಲರ್

  ಸಧ್ಯದಲ್ಲೇ ಬರಲಿದೆ ಆಡಿಯೋ ಮತ್ತು ಟ್ರೈಲರ್

  ಪೋಸ್ಟ್ ಪ್ರೊಡಕ್ಷನ್ ಕೆಲಸ ಬಹುತೇಕ ಮುಗಿಸಿರುವ ಚಿತ್ರತಂಡ ಸಧ್ಯದಲ್ಲೇ ಚಿತ್ರದ ಆಡಿಯೋ ಮತ್ತು ಟ್ರೈಲರ್ ರಿಲೀಸ್ ಮಾಡಲಿದೆ. ಈಗಾಗಲೆ ಆಡಿಯೋ ರಿಲೀಸ್ ಗೆ ತಯಾರಿ ನಡೆಯುತ್ತಿರುವ ಮುನಿರತ್ನ ತಂಡ ಸಧ್ಯದಲ್ಲೇ ದಿನಾಂಕ ಬಹಿರಂಗ ಪಡಿಸಲಿದೆ. ಸದ್ಯ ಬೇರೆ ಬೇರೆ ಭಾಷೆಯ ಪೋಸ್ಟರ್ಸ್ ರಿಲೀಸ್ ಮಾಡುವ ಮೂಲಕ ಕುತೂಹಲ ಹೆಚ್ಚಿಸಿರುವ ಕುರುಕ್ಷೇತ್ರ ಚಿತ್ರತಂಡ ಟ್ರೈಲರ್ ಮತ್ತು ಆಡಿಯೋ ರಿಲೀಸ್ ಮಾಡಿ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಲಿದೆ.

  ಚಿತ್ರದಲ್ಲಿದೆ ದೊಡ್ಡ ತಾರಾಬಳಗ

  ಚಿತ್ರದಲ್ಲಿದೆ ದೊಡ್ಡ ತಾರಾಬಳಗ

  'ಕುರಕ್ಷೇತ್ರ' ಚಿತ್ರದಲ್ಲಿ ದೊಡ್ಡ ತಾರಬಳಗವೇ ಇದೆ. ನಾಗಣ್ಣ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಕುರುಕ್ಷೇತ್ರ'ದಲ್ಲಿ ದುರ್ಯೋದನ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡರೆ, ಭೀಷ್ಮನ ಪಾತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಬಣ್ಣ ಹಚ್ಚಿದ್ದಾರೆ. ಇನ್ನು ಅಭಿಮನ್ಯು ಆಗಿ ನಿಖಿಲ್ ಕುಮಾರ ಸ್ವಾಮಿ ಮಿಂಚಿದ್ದಾರೆ. ಅರ್ಜುನ್ ಸರ್ಜಾ, ಶಶಿ ಕುಮಾರ್, ರವಿಚಂದ್ರನ್, ಭಾರತಿ ವಿಷ್ಣು ವರ್ಧನ್, ಮೇಘನಾ ರಾಜ್ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದೆ.

  English summary
  Kannada movie 'Muniratna Kurukshetra' Tamil, Telugu, Malayalam title poster released. Kurukshetra movie will released in five language.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X