For Quick Alerts
  ALLOW NOTIFICATIONS  
  For Daily Alerts

  'ಮುತ್ತಪ್ಪ ರೈ'ಗಾಗಿ ಬುಕ್ ಆಯ್ತು 'ಡಾನ್ ಚಕ್ರವರ್ತಿ'ಯ ಸ್ಪೆಷಲ್ ಶೋ

  By Bharath Kumar
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಬಾಕ್ಸ್ ಆಫೀಸ್ ದಾಖಲೆಗಳನ್ನ ಧೂಳಿಪಟ ಮಾಡಿ ಮುನ್ನುಗ್ಗುತ್ತಿದೆ. ದರ್ಶನ್ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದಾರೆ. ಈ ಮಧ್ಯೆ 'ಚಕ್ರವರ್ತಿ' ಚಿತ್ರವನ್ನ 'ಮುತ್ತಪ್ಪ ರೈ' ನೋಡಲಿದ್ದಾರೆ ಎಂಬ ಎಕ್ಸ್ ಕ್ಲೂಸಿವ್ ಸುದ್ದಿ ಬಹಿರಂಗವಾಗಿದೆ.

  'ಚಕ್ರವರ್ತಿ' ಸಿನಿಮಾ ಬೆಂಗಳೂರು ಭೂಗತ ಜಗತ್ತಿನ ಕೆಲ ನೈಜ ಪಾತ್ರಗಳಿಂದ ಸ್ಪೂರ್ತಿ ಆಗಿರುವ ಕಥೆ ಎಂದು ನಿರ್ದೇಶಕರು ಮೊದಲೇ ಹೇಳಿದ್ದರು. ಈ ಮಾತು ಸಿನಿಮಾ ನೋಡಿದ ಮೇಲೂ ಕೂಡ ನಿಜಾ ಅನ್ಸುತ್ತೆ. ಈಗ ಮುತ್ತಪ್ಪ ರೈ ಸಿನಿಮಾ ನೋಡುತ್ತಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತಿದೆ.[ವಿಮರ್ಶೆ: ಭೂಗತ ಲೋಕಕ್ಕೆ ದೇಶಪ್ರೇಮದ ಪಾಠ ಹೇಳುವ 'ಚಕ್ರವರ್ತಿ']

  ಅಷ್ಟಕ್ಕೂ, 'ಚಕ್ರವರ್ತಿ' ಸಿನಿಮಾ ಸ್ಪೂರ್ತಿಗೊಂಡಿರುವುದು ಯಾರಿಂದ? ಮುತ್ತಪ್ಪ ರೈ ಸಿನಿಮಾ ಯಾವಾಗ ನೋಡ್ತಾರೆ ಎಂಬುದನ್ನ ತಿಳಿದುಕೊಳ್ಳಲು ಮುಂದೆ ಓದಿ...

  'ಚಕ್ರವರ್ತಿ' ನೋಡಲಿದ್ದಾರೆ ಮುತ್ತಪ್ಪ ರೈ!

  'ಚಕ್ರವರ್ತಿ' ನೋಡಲಿದ್ದಾರೆ ಮುತ್ತಪ್ಪ ರೈ!

  ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾವನ್ನ ಮುತ್ತಪ್ಪ ರೈ ನೋಡಲಿದ್ದಾರೆ. ಈಗಾಗಲೇ ಮುತ್ತಪ್ಪ ರೈ ಅವರನ್ನ 'ಚಕ್ರವರ್ತಿ' ಚಿತ್ರತಂಡ ಆಹ್ವಾನಿಸಿದ್ದು, ರೈ ಸಿನಿಮಾ ನೋಡಲು ಒಪ್ಪಿಕೊಂಡಿದ್ದಾರಂತೆ.['ಚಕ್ರವರ್ತಿ' ಚೆನ್ನಾಗಿಲ್ಲ ಅಂದೋರಿಗೆಲ್ಲಾ ಮಾತಲ್ಲೇ ಪೆಟ್ಟು ಕೊಟ್ಟ ಸಂದೇಶ್ ನಾಗರಾಜ್.!]

  ದರ್ಶನ್ ಪಾತ್ರಕ್ಕೂ ಮುತ್ತಪ್ಪ ರೈಗೂ ಸಂಬಂಧ!

  ದರ್ಶನ್ ಪಾತ್ರಕ್ಕೂ ಮುತ್ತಪ್ಪ ರೈಗೂ ಸಂಬಂಧ!

  'ಚಕ್ರವರ್ತಿ' ಚಿತ್ರದಲ್ಲಿ ದರ್ಶನ್ ಪಾತ್ರಕ್ಕೂ ಮತ್ತು ಮುತ್ತಪ್ಪ ರೈಗೂ ಸಂಬಂಧವಿದೆಯಾ ಎಂಬ ಪ್ರಶ್ನೆ ಸಿನಿಮಾ ನೋಡಿ ಹೊರ ಬಂದವರಿಗೆ ಕಾಡುತ್ತೆ. ಯಾಕಂದ್ರೆ, ಚಿತ್ರದಲ್ಲಿ ನಾಯಕನ ಕಥೆಗೂ ಮುತ್ತಪ್ಪ ರೈ ಅವರ ಜೀವನ ಕಥೆಗೂ ಸಾಮ್ಯತೆ ಇದೆ. ಆದ್ರೆ, ಚಿತ್ರತಂಡ ಇದನ್ನ ಸ್ವಷ್ಟಪಡಿಸಿಲ್ಲ.[ಡಾನ್ 'ಚಕ್ರವರ್ತಿ' ಬಗ್ಗೆ ಸಿನಿಮಾ ವಿಮರ್ಶಕರು ಏನಂದ್ರು ನೋಡಿ?]

  'ಚಕ್ರವರ್ತಿ'ಗೆ ಮುತ್ತಪ್ಪ ರೈ ಸ್ಪೂರ್ತಿ!

  'ಚಕ್ರವರ್ತಿ'ಗೆ ಮುತ್ತಪ್ಪ ರೈ ಸ್ಪೂರ್ತಿ!

  ಈ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ ನಿರ್ದೇಶಕ ಚಿಂತನ್ ''ಚಕ್ರವರ್ತಿ' ಚಿತ್ರಕ್ಕೂ ಮುತ್ತಪ್ಪ ರೈಗೂ ಯಾವುದೇ ಸಂಬಂಧವಿಲ್ಲ. ಆದ್ರೆ, ಮುತ್ತಪ್ಪ ರೈ ಅವರ ಮ್ಯಾನರಿಸಂ, ಸ್ಟೈಲ್ ಮತ್ತೆ ಅವರು ಜರ್ನಿಯನ್ನ ಸ್ಪೂರ್ತಿಯಾಗಿರಿಸಿಕೊಂಡು ಅಳವಡಿಸಿಕೊಂಡಿದ್ದೇವೆ ಎನ್ನುತ್ತಾರೆ''- ಚಿಂತನ್, ನಿರ್ದೇಶಕ ['ಚಕ್ರವರ್ತಿ' ಚಕ್ರಾಧಿಪತ್ಯ: ಮತ್ತೆ 'ಬಾಕ್ಸ್ ಆಫೀಸ್ ಸುಲ್ತಾನ್' ಆದ ದರ್ಶನ್]

  'ಡಾನ್' ಬಗ್ಗೆ ಗೊತ್ತಿಲ್ಲದ ಸಂಗತಿಗಳು ಚಿತ್ರಕಥೆಯಾಗಿದೆ!

  'ಡಾನ್' ಬಗ್ಗೆ ಗೊತ್ತಿಲ್ಲದ ಸಂಗತಿಗಳು ಚಿತ್ರಕಥೆಯಾಗಿದೆ!

  ''ಒಬ್ಬ ಡಾನ್ ಅಂದಾಕ್ಷಣ ಅವರ ಭೂಗತ ಲೋಕದ ಜೊತೆ ಅವರ ನಂಟು ಹೇಗಿತ್ತು ಎಂಬುದನ್ನ ಊಹೆ ಮಾಡ್ತಾರೆ. ಆದ್ರೆ, ಈ ಚಿತ್ರದಲ್ಲಿ ಸಾಮಾನ್ಯ ಜನರಿಗೆ ಗೊತ್ತಿಲ್ಲದಂತಹ ಕೆಲವು ವಿಷಯಗಳನ್ನ ತೋರಿಸುವ ಪ್ರಯತ್ನ ಪಟ್ಟಿದ್ದೇವೆ''- ಚಿಂತನ್, ನಿರ್ದೇಶಕ [ಹಿಂದಿನ ರೆಕಾರ್ಡ್ಸ್ ಪೀಸ್ ಪೀಸ್: ಬಾಕ್ಸ್ ಆಫೀಸ್ ಚಿಂದಿ ಉಡಾಯ್ಸಿದ 'ಚಕ್ರವರ್ತಿ']

  ಮುತ್ತಪ್ಪ ರೈಗೆ ದರ್ಶನ್ ಸಾಥ್!

  ಮುತ್ತಪ್ಪ ರೈಗೆ ದರ್ಶನ್ ಸಾಥ್!

  ಮುತ್ತಪ್ಪ ರೈ ಅವರ ಜೊತೆ ದರ್ಶನ್ ಕೂಡ ಸಿನಿಮಾ ನೋಡುವ ಸಾಧ್ಯತೆ ಇದೆ ಎಂದು ನಿರ್ದೇಶಕ ಚಿಂತನ್ ಹೇಳಿದ್ದಾರೆ. ಸದ್ಯ, ದರ್ಶನ್ ಅವರು 'ತಾರಕ್' ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಎಲ್ಲ ಸಿದ್ದತೆಗಳು ನಡೆದಿದ್ದು, ಈ ವಾರದಲ್ಲಿ 'ಡಿ-ಬಾಸ್', ಮುತ್ತಪ್ಪ ರೈಗೆ ಸಿನಿಮಾ ತೋರಿಸಲಿದ್ದಾರೆ.

  English summary
  Specail show to be Organised By Chakravarthy Team for Muthappa Rai says Chakravarthy Movie Director Chinthan to Filmibeat Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X