»   » 'ಮಿಸ್ ಮಲ್ಲಿಗೆ'ಯಾಗಿ ಬದಲಾದ ಮೈಸೂರು ಮಲ್ಲಿಗೆ

'ಮಿಸ್ ಮಲ್ಲಿಗೆ'ಯಾಗಿ ಬದಲಾದ ಮೈಸೂರು ಮಲ್ಲಿಗೆ

Posted By:
Subscribe to Filmibeat Kannada

ಹಲವಾರು ವಾದ ವಿವಾದ ಚರ್ಚೆಗೆ ಆಸ್ಪದ ನಿಡಿದ್ದ ರೂಪಾ ನಟರಾಜ್ ಅಭಿನಯದ 'ಮೈಸೂರು ಮಲ್ಲಿಗೆ' ವಿವಾದ ಸದ್ಯಕ್ಕೆ ಬಗೆಹರಿದಿದೆ. ಚಿತ್ರಕ್ಕೆ ಹೊಸ ಶೀರ್ಷಿಕೆ ಕೊಡಲಾಗಿದೆ. 'ಮಿಸ್ ಮಲ್ಲಿಗೆ' ಎಂಬುದು ಚಿತ್ರದ ಹೊಸ ಹೆಸರು.

ಈ ಚಿತ್ರದ ಶೀರ್ಷಿಕೆ ವಿರುದ್ಧ ನಿರ್ದೇಶಕ ಟಿಎಸ್ ನಾಗಾಭರಣ, ನಿರ್ಮಾಪಕ ಹರಿ ಖೋಡೆ ಹಾಗೂ ಕೆಎಸ್ ನರಸಿಂಹ ಸ್ವಾಮಿ ಪ್ರತಿಷ್ಠಾನ ಚಿತ್ರದ ಶೀರ್ಷಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಕೋರ್ಟ್ ಮೆಟ್ಟಿಲೇರಿತ್ತು. ['ಮೈಸೂರು ಮಲ್ಲಿಗೆ' ಚಿತ್ರ ಬಿಡುಗಡೆಗೆ ಕೋರ್ಟ್ ತಡೆ]


ಈ ಹಿನ್ನೆಲೆಯಲ್ಲಿ ಆಸ್ಕರ್ ಕೃಷ್ಣ ನಿರ್ದೇಶಿಸಿರುವ 'ಮೈಸೂರು ಮಲ್ಲಿಗೆ' ಚಿತ್ರದ ಶೀರ್ಷಿಕೆಯನ್ನು 'ಮಿಸ್ ಮಲ್ಲಿಗೆ' ಎಂದು ಬದಲಾಯಿಸಲಾಗಿದೆ. ಒಂಟಿ ಹೆಣ್ಣಿನ ಮೇಲೆ ಪ್ರತಿನಿತ್ಯ ನಡೆಯುತ್ತಿರುವ ವಿಲಕ್ಷಣ ಶೋಷಣೆಯ ಕಥೆ ಹೊಂದಿದೆ.

ಈ ಹಿಂದೆ 'ಆಸ್ಕರ್' ಎಂಬ ವಿನೂತನ ಶೈಲಿಯ ಚಿತ್ರ ನಿರ್ದೇಶಿಸಿದ್ದ ಆಸ್ಕರ್ ಕೃಷ್ಣ 'ಮೈಸೂರು ಮಲ್ಲಿಗೆ' ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸುವುದರೊಂದಿಗೆ ನಿರ್ಮಾಣದ ಜವಾಬ್ದಾರಿಯನ್ನು ಕೂಡ ಹೊತ್ತಿದ್ದಾರೆ.

ತಮ್ಮ ಚಿತ್ರದಲ್ಲಿ ಯಾವುದೇ ಅಶ್ಲೀಲತೆ ಇಲ್ಲ. ಸಮಾಜಕ್ಕೆ ಕೆಟ್ಟ ಸಂದೇಶವೂ ಇಲ್ಲ. ಮಹಿಳೆಯರ ಮೇಲಿನ ಶೋಷಣೆಯನ್ನು ಚಿತ್ರದಲ್ಲಿ ತೋರಿಸಲು ಪ್ರಯತ್ನಿಸಿದ್ದೇವೆ. ಈ ಚಿತ್ರದಲ್ಲಿ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುದ ಕೆಲಸ ಮಾಡಿದ್ದೇವೆ ಎನ್ನುತ್ತಾರೆ ಆಸ್ಕರ್ ಕೃಷ್ಣ. (ಏಜೆನ್ಸೀಸ್)

English summary
Actress Roopa Nataraj lead 'Mysore Mallige' title controversy has been finally resolved. The makers of the film has changed the title 'Mysore Mallige' to 'Miss Mallige'.
Please Wait while comments are loading...