Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೈತ್ರಿಯಾ ಗೌಡ ಕೊಟ್ಟ ಮತ್ತೊಂದು ಬ್ರೇಕಿಂಗ್ ನ್ಯೂಸ್ ಏನು?
'ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಪುತ್ರ ಕಾರ್ತಿಕ್ ಗೌಡ ನನ್ನ ಗಂಡ' ಅಂತ್ಹೇಳಿ ಇಡೀ ದೇಶಾದ್ಯಂತ ಬ್ರೇಕಿಂಗ್ ನ್ಯೂಸ್ ಮಾಡಿದ್ದ ಸ್ಯಾಂಡಲ್ ವುಡ್ ನಟಿ ಮೈತ್ರಿಯಾ ಗೌಡ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ವಾದ-ವಿವಾದ, ಕೋರ್ಟು-ಕಛೇರಿ ಅಂತೆಲ್ಲಾ ಆದ ಬಳಿಕ 'ಅಕ್ಷತೆ' ಹಾಗೂ 'Love on NH 4' ಸಿನಿಮಾಗಳಿಗಾಗಿ ಬಣ್ಣ ಹಚ್ಚಿದ್ದ ನಟಿ ಮೈತ್ರಿಯಾ ಗೌಡ ಈಗ ನೀವೆಲ್ಲಾ ನಿಬ್ಬೆರಗಾಗುವ ಮತ್ತೊಂದು ಸುದ್ದಿ ಕೊಟ್ಟಿದ್ದಾರೆ. [ಯಾರೀ ಮೈತ್ರಿಯಾ ಗೌಡ? ರಿಯಲ್ ಕಹಾನಿ]
ಆ ಸುದ್ದಿ ಏನು ಅಂತ ಡೀಟೇಲ್ ಆಗಿ ಹೇಳ್ತೀವಿ, ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....

ಬಣ್ಣದ ಬದುಕ್ಕಲ್ಲೇ ಬಿಜಿಯಾದ ನಟಿ!
ಸದ್ಯಕ್ಕೆ ಯಾವುದೇ ವಿವಾದಗಳಿಗೆ ಗ್ರಾಸವಾಗದ ನಟಿ ಮೈತ್ರಿಯಾ ಗೌಡ ತಮ್ಮ ವೃತ್ತಿ ಬದುಕಿನ ಕಡೆ ಹೆಚ್ಚು ಗಮನ ಹರಿಸಿದ ಹಾಗಿದೆ. ಇದೇ ಕಾರಣಕ್ಕೋ ಏನೋ, ಅವರಿಗೊಂದು ಗೋಲ್ಡನ್ ಚಾನ್ಸ್ ಸಿಕ್ಕಿದೆ. ಅದೇನು ಅಂತ ತಿಳಿಯಲು ಮುಂದಿನ ಸ್ಲೈಡ್ ಕ್ಲಿಕ್ಕಿಸಿ...

ಬಾಲಿವುಡ್ ಗೆ ಹಾರುತ್ತಿದ್ದಾರೆ ಮೈತ್ರಿಯಾ ಗೌಡ!
ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ. ನಟಿ ಮೈತ್ರಿಯಾ ಗೌಡ ಬಾಲಿವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ. 'SHRAAP' ಎಂಬ ಹಾರರ್ ಸಿನಿಮಾದಲ್ಲಿ ನಟಿಸಲು ನಟಿ ಮೈತ್ರಿಯಾ ಗೌಡಗೆ ಬಾಲಿವುಡ್ ಅಂಗಳದಿಂದ ಬುಲಾವ್ ಬಂದಿದೆ. [ನಟಿ ರೂಪಶ್ರೀಯನ್ನು ಬಾಯಿಗೆ ಬಂದಂತೆ ಬೈದ ಮೈತ್ರಿಯಾ ಗೌಡ]

ಬಾಲಿವುಡ್ ಚಿತ್ರದ ಬಗ್ಗೆ ಮೈತ್ರಿಯಾ ಹೇಳುವುದೇನು?
ಬರೋಬ್ಬರಿ 5000 ಹುಡುಗಿಯರು ಹಾಗೂ 2 ಕನ್ನಡದ ನಟಿಯರು 'SHRAAP' ಚಿತ್ರದಲ್ಲಿ ನಟಿಸಲು ಕ್ಯೂ ನಲ್ಲಿದ್ದರಂತೆ. ಎಲ್ಲರನ್ನ ಹಿಂದಿಕ್ಕಿ ನಟಿ ಮೈತ್ರಿಯಾ ಗೌಡ 'SHRAAP' ಚಿತ್ರಕ್ಕೆ ಹೀರೋಯಿನ್ ಆಗಿ ಸೆಲೆಕ್ಟ್ ಆಗಿದ್ದಾರೆ. [ರೀಲ್ ನಲ್ಲಿ ಮೈತ್ರಿಯಾ-ಪ್ರೇಮಕುಮಾರಿ 'ರಿಯಲ್' ಕಹಾನಿ?]

12 ವರ್ಷಗಳ ಶ್ರಮ
ಬಾಲಿವುಡ್ ನಿಂದ ಇಂತಹ ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ನಟಿ ಮೈತ್ರಿಯಾ ಗೌಡ, ''12 ವರ್ಷಗಳ ಶ್ರಮಕ್ಕೆ ಈಗ ಪ್ರತಿಫಲ ಸಿಕ್ಕಿದೆ. ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರುವುದು ಹೆಮ್ಮೆ'' ಅಂತ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಮೈತ್ರಿಯಾ ಗೌಡ ಬರೆದುಕೊಂಡಿದ್ದಾರೆ. [ಗೌಡರ ಪದಚ್ಯುತಿಗೊಳಿಸಲು ರಾಷ್ಟ್ರಪತಿಗೆ ಮೈತ್ರಿಯಾ ಪತ್ರ]

'SHRAAP' ಕುರಿತು....
'SHRAAP' ವ್ಯಾಂಪೈರ್ ಹಾರರ್ 3ಡಿ ಸಿನಿಮಾ. ಚಿತ್ರದಲ್ಲಿ ನೇಹಾ ಭಾರಧ್ವಜ್ ಪಾತ್ರದಲ್ಲಿ ಮೈತ್ರಿಯಾ ಗೌಡ ಕಾಣಿಸಿಕೊಳ್ಳುತ್ತಿದ್ದಾರೆ. ಶಿಲ್ಲಾಂಗ್ ನಲ್ಲಿ ಚಿತ್ರೀಕರಣ ನಡೆಯಲಿದೆ.

ಫೇಸ್ ಬುಕ್ ನಲ್ಲಿ ಮೈತ್ರಿಯಾ ಸಂತಸ
ಬಾಲಿವುಡ್ ನಿಂದ ಬುಲಾವ್ ಬಂದಿರುವುದಕ್ಕೆ ಫುಲ್ ಖುಷ್ ಆಗಿರುವ ನಟಿ ಮೈತ್ರಿಯಾ ಗೌಡ ಫೇಸ್ ಬುಕ್ ನಲ್ಲಿ ಸುದೀರ್ಘ ಸ್ಟೇಟಸ್ ಅಪ್ ಡೇಟ್ ಮಾಡಿದ್ದಾರೆ.

ನಿರ್ದೇಶಕ ಯಾರು?
'SHRAAP' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಫೈಸಲ್ ಸೈಫ್. 'ಮೈ ಹೂಂ ರಜನಿಕಾಂತ್' ಅಂತಹ ವಿವಾದಾತ್ಮಕ ಚಿತ್ರ ನಿರ್ದೇಶಿಸಿದ್ದ ಫೈಸಲ್ ಸೈಫ್, ಕನ್ನಡದಲ್ಲಿ ರಾಗಿಣಿ ದ್ವಿವೇದಿ ಮುಖ್ಯ ಭೂಮಿಕೆಯಲ್ಲಿ 'ಅಮ್ಮ' ಚಿತ್ರಕ್ಕೂ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು.

ಕಾಲಿವುಡ್ ಗೂ ಭರ್ಜರಿ ಎಂಟ್ರಿ!
'SHRAAP' ಸಿನಿಮಾದಿಂದ ಬರೀ ಬಾಲಿವುಡ್ ಗೆ ಮಾತ್ರ ಅಲ್ಲ, ಕಾಲಿವುಡ್ ಗೂ ಲಗ್ಗೆ ಇಡುತ್ತಿದ್ದಾರೆ ಮೈತ್ರಿಯಾ ಗೌಡ. 'SHRAAP' ಸಿನಿಮಾ, ತಮಿಳಿನಲ್ಲಿ 'ಸಾಪಂ' ಆಗಿ ತೆರೆಗೆ ಬರಲಿದೆ.

'SHRAAP' ತಾರಾಗಣ
ರಾಜ್ ಪಾಲ್ ಯಾದವ್, ಕವಿತಾ ರಾಧೇಶ್ಯಾಮ್, ದೇವ್ ಶರ್ಮಾ, ಅಮನ್ ವರ್ಮಾ, ದುಬೈ ರಫೀಕ್ ಸೇರಿದಂತೆ ಹಲವರು 'SHRAAP' ಚಿತ್ರದ ತಾರಾಗಣದಲ್ಲಿದ್ದಾರೆ.