For Quick Alerts
  ALLOW NOTIFICATIONS  
  For Daily Alerts

  ನಾಗಾ ಚೈತನ್ಯ ಗೂಗ್ಲಿಗೆ ಮಾರುಹೋದದ್ದು ಏಕೆ?

  By Mahesh
  |

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಗೂಗ್ಲಿ ಚಿತ್ರಕ್ಕೆ ಭರ್ಜರಿ ಓಪನಿಂಗ್ ಜತೆಗೆ ಬಾಕ್ಸಾಫೀಸಿನಲ್ಲಿ ಯಶಸ್ವಿಯಾಗಿದೆ. ಪ್ರಣಯ-ಹಾಸ್ಯ ಭರಿತ ಚಿತ್ರದ ಸವಿಯನ್ನು ಸಿನಿ ರಸಿಕರು ಆಸ್ವಾದಿಸಿ ಆನಂದಿಸಿದ್ದಾರೆ. ಯಶ್ ನಾಯಕರಾಗಿ ಕೃತಿ ಕರಬಂದ ನಾಯಕಿಯಾಗಿರುವ ಈ ಚಿತ್ರದಲ್ಲಿ ಪಾತ್ರಕ್ಕೆ ತಕ್ಕ ಸಂಭಾಷಣೆ, ಹಾಡಿಗೆ ತಕ್ಕ ಲೊಕೇಷನ್ ಹುಡುಕಿರುವ ನಿರ್ದೇಶಕ ಪವನ್ ಒಡೆಯರ್ ಮತ್ತೊಮ್ಮೆ ಗೆದ್ದಿದ್ದಾರೆ.

  ಈಗ ಈ ಚಿತ್ರ ತೆಲುಗು ಸೂಪರ್ ಸ್ಟಾರ್ ನಾಗಾರ್ಜುನ ಅವರ ಮಗ ನಾಗ ಚೈತನ್ಯ ಅವರ ಕಣ್ಣಿಗೆ ಬಿದ್ದಿದೆ. ಬೆಂಗಳೂರಿಗೆ ಬಂದು ಒಮ್ಮೆ ಗೂಗ್ಲಿ ಚಿತ್ರವನ್ನು ನೋಡಿ ತಮ್ಮ ಗೆಳೆಯರಿಗೂ ತೋರಿಸಿದ್ದಾರಂತೆ. ಈ ಹಿಂದೆ ತಾಜ್ ಮಹಲ್ ಖ್ಯಾತಿ ಚಂದ್ರು ನಿರ್ದೇಶನದ ಚಾರ್ಮಿನಾರ್ ಚಿತ್ರ ಮೆಚ್ಚಿ ರಿಮೇಕ್ ಮಾಡುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಈಗ ನಾಗ ಚೈತನ್ಯ ಅವರು ಗೂಗ್ಲಿ ಚಿತ್ರದ ತೆಲುಗು ವರ್ಷನ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆ.

  ಈ ಹಿಂದಿನ ಚಿತ್ರ ಗೋವಿಂದಾಯ ನಮಃ ಗೆದ್ದಿದ್ದು ಡಬ್ಬಲ್ ಮೀನಿಂಗ್ ಡೈಲಾಗ್ ನಿಂದ ಎಂಬ ಅಪವಾದ ಹೊತ್ತಿದ್ದ ಪವನ್ ಈ ಚಿತ್ರದಲ್ಲಿ ಎಚ್ಚರಿಕೆ ವಹಿಸಿದಂತೆ ಡೈಲಾಗ್ಸ್ ಬಿಟ್ಟಿದ್ದಾರೆ. ಗೂಗ್ಲಿ ಚಿತ್ರದ ಡೈಲಾಗ್, ಕಥೆಯ ಥೀಮ್ ಇಷ್ಟಪಟ್ಟಿರುವ ನಾಗ ಚೈತನ್ಯ ತಮ್ಮ ಇಮೇಜ್ ಗೆ ತಕ್ಕಂತೆ ಈ ಚಿತ್ರ ಇದೆ ಎಂದಿದ್ದಾರಂತೆ. ಚಿತ್ರದ ರಿಮೇಕ್ ಹಕ್ಕು ಪಡೆಯುವಂತೆ ತಮ್ಮ ಮ್ಯಾನೇಜರ್ ಗೆ ಸೂಚಿಸಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ಪವನ್ ಒಡೆಯರ್ ಅವರೇ ರಿಮೇಕ್ ಚಿತ್ರದ ನಿರ್ದೇಶಕರಾಗುವ ಎಲ್ಲಾ ಸಾಧ್ಯತೆಗಳೂ ಇದೆ ಎನ್ನಲಾಗಿದೆ. ಸದ್ಯಕ್ಕೆ ಯಾವುದೂ ನಿರ್ಧಾರವಾಗಿಲ್ಲ ಎಲ್ಲವೂ ಮಾತುಕತೆ ಹಂತದಲ್ಲಿದೆ. ಮುಂದಿನ ಬೆಳವಣಿಗೆಗಳನ್ನು ಇಲ್ಲಿ ನೋಡಿ...

  ನಾಗಾ ಮೆಚ್ಚಿದ ಗೂಗ್ಲಿ

  ನಾಗಾ ಮೆಚ್ಚಿದ ಗೂಗ್ಲಿ

  ಆದರೆ, ನಿರ್ದೇಶಕ ಪವನ್ ಒಡೆಯರ್ ಅವರು ಇನ್ನೂ ರಿಮೇಕ್ ಮಾಡುವ ಬಗ್ಗೆ ಏನೂ ನಿರ್ಧರಿಸಿಲ್ಲವಂತೆ. ರಿಮೇಕ್ ಹಕ್ಕು ಮಾರಾಟವಾದರು ಪವನ್ ನಿರ್ದೇಶಿಸುವುದು ಸಾಧ್ಯತೆ ಕಡಿಮೆ ಎನ್ನುವ ಸುದ್ದಿಯೂ ಇದೆ. ಭಾಷಾ ಸಮಸ್ಯೆ ಎದುರಾಗಲಿದೆ. ಆದರೆ, ಪವನ್ ಅಭಿಮಾನಿಗಳು ನಾಗಾ ಚೈತನ್ಯ ಚಿತ್ರ ನಿರ್ದೇಶಿಸುವಂತೆ ಒತ್ತಾಯಿಸುತ್ತಿದ್ದಾರೆ.

  ತೆಲುಗಿಗೆ ಪವನ್ ಒಡೆಯರ್

  ತೆಲುಗಿಗೆ ಪವನ್ ಒಡೆಯರ್

  ಆದರೆ, ಪವನ್ ಗೆ ಅಷ್ಟು ಭಾಷಾ ಸಮಸ್ಯೆ ಇಲ್ಲ. ಈಗಾಗಲೇ ತೆಲುಗಿಗೆ ಪವನ್ ಹಾರಿ ಆಗಿದೆ. ಗೋವಿಂದಾಯ ನಮಃ ಚಿತ್ರದ ರಿಮೇಕ್ ಅನ್ನು ಪವನ್ ನಿರ್ದೇಶಿಸುವುದು ದೃಢಪಟ್ಟಿದೆ. ಪೊಟುಗಾಡು ಎಂಬ ಹೆಸರಿನಲ್ಲಿ ಬರುತ್ತಿರುವ ಈ ಚಿತ್ರದಲಿ ಮಂಚು ಮನೋಜ್, ಸಾಕ್ಷಿ ಚೌಧರಿ, ಸಿಮ್ರಾನ್ ಕೌರ್ ಹಾಗೂ ನಾಥಾಲಿಯಾ ಕೌರ್ ಅಭಿನಯಿಸಲಿದ್ದಾರೆ.

  ಗೂಗ್ಲಿ ಬಗ್ಗೆ ಹೇಗಿದೆ ಟಾಕ್

  ಗೂಗ್ಲಿ ಬಗ್ಗೆ ಹೇಗಿದೆ ಟಾಕ್

  ಗೂಗ್ಲಿ ಚಿತ್ರ ಯುವ ಜನರನ್ನು ಆಕರ್ಷಿಸಿದ್ದು, ಯಶ್ ಹಾಗೂ ಕೃತಿ ಖರಬಂದ ಜೋಡೀ ಪ್ರೇಕ್ಷಕರಿಗೆ ಇಷ್ಟವಾಗಿದೆ. ಜತೆಗೆ ಅನಂತ್ ನಾಗ್ ಹಾಗೂ ಸುಧಾ ಬೆಳವಾಡಿ, ನೀನಾಸಂ ಅಶ್ವಥ್ ನಟನೆ ಚಿತ್ರಕ್ಕೆ ಜೀವ ತುಂಬಿದೆ

  ಸರಳ ಪ್ರೇಮಕಥೆ

  ಸರಳ ಪ್ರೇಮಕಥೆ

  ಯಶ್ ಅವರ ನಟನೆ, ನೃತ್ಯ, ಕೃತಿ ನಗು, ಅನಂತ್ ನಾಗ್ ಹಾಸ್ಯ, ಸರಳ ಪ್ರೇಮಕಥೆ, ಕಥೆಗೆ ತಕ್ಕ ಹಾಡುಗಳು ಹಾಗೂ ಪವನ್ ನಿರೂಪಣೆ ಚಿತ್ರವನ್ನು ಗೆಲ್ಲಿಸಿದೆ.

  ಗೂಗ್ಲಿ ಯಶಸ್ಸು

  ಗೂಗ್ಲಿ ಯಶಸ್ಸು

  ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಗೂಗ್ಲಿ ಚಿತ್ರ ಮೊದಲ ವಾರವೇ ಸುಮಾರು 7 ಕೋಟಿ ರು ಬಾಕ್ಸಾಫೀಸಿನಲ್ಲಿ ಬಾಚಿದೆ. ಇಲ್ಲಿ ತನಕ ಸುಮಾರು 13 ಕೋಟಿ ರು ಗಳಿಸಿರುವ ವರದಿ ಸಿಕ್ಕಿದೆ

  ಯಶಸ್ಚಿ ಪ್ರದರ್ಶನ

  ಯಶಸ್ಚಿ ಪ್ರದರ್ಶನ

  ಇಂದಿಗೂ ಚಿತ್ರ ಮಲ್ಟಿಫೆಕ್ಸ್ ವಿವಿಧ ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ ಯುವ ಜನಾಂಗಕ್ಕೆ ಮೆಚ್ಚುಗೆಯಾಗಿದ್ದು ಚಿತ್ರಮಂದಿರದಲ್ಲೆ ಗೂಗ್ಲಿ ಸುತ್ತುತ್ತಲೇ ಇದೆ

  ವಿದೇಶದಲ್ಲೂ ಸದ್ದು

  ವಿದೇಶದಲ್ಲೂ ಸದ್ದು

  ವಿದೇಶಗಳಲ್ಲಿ ಕನ್ನಡ ಸಿನಿಮಾ ಪ್ರದರ್ಶನವಾಗುವುದೇ ದೊಡ್ಡ ಸುದ್ದಿ. ಕ್ಯಾಲಿಫೋರ್ನಿಯಾದಲ್ಲಿ ಕಳೆದ ವಾರ ನಾಲ್ಕು ಯಶಸ್ವಿ ಪ್ರದರ್ಶನ ಕಂಡಿದೆ. ವಿವಿಧ ದೇಶಗಳ ಎನ್ನಾರೈಗಳಿಂದ ಬೇಡಿಕೆ ಕೂಡಾ ಇದೆ.

  ತಾಂತ್ರಿಕ ವರ್ಗದ ಯಶಸ್ಸು

  ತಾಂತ್ರಿಕ ವರ್ಗದ ಯಶಸ್ಸು

  ನಟನೆ, ನಿರ್ದೇಶನದ ಜತೆಗೆ ಜೋಶುವ ಶ್ರೀಧರ್ ಸಂಗೀತ, ಸನತ್ ಸುರೇಶ್ ಸಂಕಲನ ಹಾಗೂ ವೈದಿ ಅವರ ಸಿನಿಮಾಟೋಗ್ರಾಫಿ ಕೂಡಾ ಚಿತ್ರದ ಯಶಸ್ಸಿಗೆ ಕಾರಣವಾಗಿದೆ. ಜಯಣ್ಣ ಹಾಗೂ ಭೋಗೇಂದ್ರ ಅವರ ನಿರ್ಮಾಣ ಈ ಚಿತ್ರ ತೆಲುಗಿನಲ್ಲಿ ಯಶ ಕಾಣಲಿ ಎಂದು ಒನ್ ಇಂಡಿಯಾ ಹಾರೈಸುತ್ತದೆ.

  English summary
  Tollywood Actor Naga Chaitanya is likely to star in the remake of Kannada superhit movie Googly starring Yash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X