»   » ಚಿತ್ರಗಳು: ನೂತನ ಬಾಳಿಗೆ ಕಾಲಿಟ್ಟ ಸಮಂತಾ ಮತ್ತು ನಾಗಚೈತನ್ಯ

ಚಿತ್ರಗಳು: ನೂತನ ಬಾಳಿಗೆ ಕಾಲಿಟ್ಟ ಸಮಂತಾ ಮತ್ತು ನಾಗಚೈತನ್ಯ

Posted By:
Subscribe to Filmibeat Kannada

ಟಾಲಿವುಡ್ ಪ್ರೇಮಪಕ್ಷಿಗಳಾದ ಅಕ್ಕಿನೇನಿ ನಾಗಚೈತನ್ಯ ಮತ್ತು ಸಮಂತಾ ಜೋಡಿ ಅಧಿಕೃತವಾಗಿ ಒಂದಾಗಿದೆ. ಗುರು-ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದು ನೂತನ ಬಾಳಿಗೆ ಕಾಲಿಟ್ಟಿದೆ.

ಗೋವಾದ ಕಡಲತೀರಾದಲ್ಲಿ ನಿನ್ನೆ ಇವರಿಬ್ಬರ ಮದುವೆ ನೆರವೇರಿದ್ದು, ಟಾಲಿವುಡ್ ಸ್ಟಾರ್ ನಟರು ಸೇರಿದಂತೆ ಎರಡು ಕುಟುಂಬದವರು ಭಾಗಿಯಾಗಿದ್ದರು.

ನಾಗ್ ಮತ್ತು ಸಮಂತಾ ಅವರ ಮದುವೆಯ ಅದ್ಭುತ ಚಿತ್ರಗಳನ್ನ ಸ್ವತಃ ನಟ ನಾಗಾರ್ಜುನ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗಿದ್ರೆ, ಹೇಗಿತ್ತು. ನಾಗಚೈತನ್ಯ ಮತ್ತು ಸಮಂತಾ ಮದುವೆ ಎಂದು ಚಿತ್ರಗಳ ಸಮೇತ ನೋಡಿ. ಮುಂದೆ ಓದಿ....

ಹಿಂದೂ ಸಂಪ್ರದಾಯಂತೆ ಮದುವೆ

ಸಮಂತಾ ಮತ್ತು ನಾಗ ಚೈತನ್ಯರ ಮದುವೆ ಶುಕ್ರವಾರ ಹಿಂದೂ ಸಂಪ್ರದಾಯದಂತೆ ಮಂತ್ರ, ನಾದಸ್ವರಗಳ ಮಧ್ಯೆ ನೆರವೇರಿದ್ದು, ಕುಟುಂಬದವರು, ಸ್ನೇಹಿತರು ಸಾಕ್ಷಿಯಾದರು.

ರಾಜ-ರಾಣಿಯಂತೆ ಕಂಗೊಳಿಸಿದ ನವಜೋಡಿ

ಬಿಳಿಪಂಚೆ, ಬಿಳಿ ಶರ್ಟ್ ತೊಟ್ಟು ಹಣೆಯಲ್ಲಿ ಬಾಸಿಂಗ ಕಟ್ಟಿ ಮದುಮಗ ಕಂಗೊಳಿಸಿದ್ರೆ, ಬಿಳಿ ರೇಷ್ಮೆ ಸೀರೆಯಲ್ಲಿ ವದು ಸಮಂತಾ ಮಿಂಚಿದ್ದಾರೆ.

ಅಂದು ರೀಲ್ ಇಂದು ರಿಯಲ್

ಈಗಾಗಲೇ ಇವರಿಬ್ಬರು ಒಟ್ಟಿಗೆ ಸಿನಿಮಾಗಳಲ್ಲಿ ಅಭಿನಯಿಸಿದ್ದು, ರೀಲ್ ನಲ್ಲಿ ಹಲವು ಬಾರಿ ಮದುವೆಯಾಗಿದ್ದಾರೆ. ಈಗ ನಿಜಜೀವನದಲ್ಲೂ ಮದುವೆಯಾಘಿದ್ದು, ಇವರ ಸಂತೋಷಕ್ಕೆ ಈ ಫೋಟೋಗಳೇ ಸಾಕ್ಷಿ.

ಚಿತ್ರಗಳು: ಟಾಲಿವುಡ್ ಪ್ರೇಮಪಕ್ಷಿ ಸಮಂತಾ-ನಾಗಚೈತನ್ಯ ನಿಶ್ಚಿತಾರ್ಥ

ಗೋವಾ ಕಡಲತೀರದಲ್ಲಿ ಮಾಂಗಲ್ಯಧಾರಣೆ

ಸಮಂತಾ ಮತ್ತು ನಾಗಚೈತನ್ಯ ಅವರ ವಿವಾಹ ಕಾರ್ಯಕ್ರಮಕ್ಕೆ ಗೋವಾ ಕಡಲತೀರದಲ್ಲಿ ವಿಶೇಷವಾದ ಸೆಟ್ ಹಾಕಲಾಗಿದ್ದು, ಅಲ್ಲಿ ಸಿಂಗರಿಸಿದ್ದ ಮಂಟಪದಲ್ಲಿ ಮಾಂಗಲ್ಯಧಾರಣೆ ನಡೆಯಿತು.

ಶನಿವಾರ ಕ್ರೈಸ್ತ ಧರ್ಮದ ಪ್ರಕಾರ ಮದುವೆ

ಶುಕ್ರವಾರ ಹಿಂದೂ ಸಂಪ್ರದಾಯದಲ್ಲಿ ವಿವಾಹವಾದರೇ, ಶನಿವಾರ (ಅಕ್ಟೋಬರ್ 7) ಕ್ರೈಸ್ತ ಧರ್ಮದ ಪ್ರಕಾರ ಸ್ಯಾಮ್ ಮತ್ತು ನಾಗ್ ಮದುವೆ ನಡೆಯಲಿದೆ.

ಸ್ಟಾರ್ ನಟರು ಭಾಗಿ

ತೆಲುಗಿನ ಸ್ಟಾರ್ ಜೋಡಿಯ ವಿವಾಹ ಸಮಾರಂಭಕ್ಕೆ ವಿಕ್ಟರಿ ವೆಂಕಟೇಶ್, ಸುರೇಶ್ ಬಾಬು, ರಾಹುಲ್ ರವಿಚಂದ್ರನ್, ವೆನ್ನಿಲ್ಲ ಕಿಶೋರ್, ಸುಶಾಂತ್, ಆದಿಲ್ ಶೇಷ ಸೇರಿದಂತೆ ಹಲವರು ಭಾಗವಹಿಸಿದ್ದರು.

ಹೈದರಾಬಾದ್‌ನಲ್ಲಿ ಆರತಕ್ಷತೆ

ಗೋವಾದಲ್ಲಿ ಖಾಸಗಿಯಾಗಿ ನಡೆದ ಮದುವೆಯ ನಂತರ ಅಕ್ಟೋಬರ್ 15 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನೆರವೇರಲಿದೆ. ಇಲ್ಲಿ ಅಭಿಮಾನಿಗಳಿಗೆ ಮತ್ತು ಸೆಲೆಬ್ರಿಟಿಗಳಿಗೆ ಆಹ್ವಾನ ನೀಡುವ ಸಾಧ್ಯತೆ ಇದೆ.

ನ್ಯೂಯಾರ್ಕ್ ನಲ್ಲಿ ಹನಿಮೂನ್

ಈ ಮೊದಲೇ ನಿರ್ಧರಿಸಿದಂತೆ ಹನಿಮೂನ್ ಗಾಗಿ ನ್ಯೂಯಾರ್ಕ್ ಗೆ ತೆರೆಳಲಿದೆ ನವಜೋಡಿ. ಯಾಕಂದ್ರೆ, ಇವರಿಬ್ಬರು ಮೊದಲ ಸಿನಿಮಾ 'ಎ ಮಾಯೇ ಚೇಸಾವೆ' ಆರಂಭವಾಗಿದ್ದೇ ನ್ಯೂಯಾರ್ಕ್ ನಲ್ಲಿ. ಹೀಗಾಗಿ, ಆ ನೆನಪಿಗೋಸ್ಕರ ಹನಿಮೂನ್ ಪ್ಲಾನ್ ಕೂಡ ಅಲ್ಲೇ ಮಾಡಿದ್ದಾರೆ.

ಸಮಂತಾ-ನಾಗಚೈತನ್ಯ ಮದುವೆಯ ಎಕ್ಸ್ ಕ್ಲೂಸಿವ್ ಫೋಟೋ.!

English summary
Naga Chaitanya and Samantha Ruth Prabhu, who have been in a relationship for nearly two years, tied the knot on Friday at a ceremony amidst their families and close friends. ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗಚೈತನ್ಯ ಮತ್ತು ಸಮಂತಾ ಅವರ ಮದುವೆ ಶುಕ್ರವಾರ (ಅಕ್ಟೋಬರ್ 6) ಗೋವಾದಲ್ಲಿ ನೆರವೇರಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada