'ಬೆಂಕಿ ಬಿರುಗಾಳಿ'ಯಾಗಿ ಬರುತ್ತಿದ್ದಾರೆ ನಮಿತಾ
'ಬೆಂಕಿ ಬಿರುಗಾಳಿ' ಎಂಬ ಹೆಸರಿನ ಚಿತ್ರ ಎರಡು ದಶಕಗಳ ಹಿಂದೆಯೇ ತೆರೆಕಂಡಿತ್ತು. ವಿಷ್ಣುವರ್ಧನ್, ಶಂಕರನಾಗ್, ಜಯಂತಿ, ಜಯಮಾಲಾ, ಜೈ ಜಗದೀಶ್ ಮುಂತಾದವರು ಮುಖ್ಯಭೂಮಿಕೆಯಲ್ಲಿದ್ದ ಚಿತ್ರವದು. ಈಗ ಅದೇ ಹೆಸರಿನ ಚಿತ್ರದಲ್ಲಿ ನಮಿತಾ ಹಾಗೂ ಸಲೋನಿ ಅಭಿನಯಿಸುತ್ತಿದ್ದಾರೆ.
ಈ ವಾರ (ಏಪ್ರಿಲ್ 26) ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಎಸ್.ಬಿ.ಕೆ ಫಿಲಂ ಕಾರ್ಪೊರೇಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ ಇದು. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನೂ ಮಾಡಿರುವ ಎಸ್.ಕೆ.ಬಷೀದ್ ಈ ಚಿತ್ರದ ನಿರ್ಮಾಪಕರು ಹೌದು.
ಎಂ.ಎಂ.ಶ್ರೀಲೇಖ ಸಂಗೀತ ನೀಡಿರುವ ಈ ಚಿತ್ರಕ್ಕೆ ಕೆ.ಎಸ್.ಚೆಲುವರಾಜ್ ಅವರ ಛಾಯಾಗ್ರಹಣವಿದೆ. ಮನೋಹರ್ ಸಂಕಲನ, ಗಣೇಶ್, ನಿಕ್‍ಸನ್, ಅರವಿಂದ್ ನೃತ್ಯ ನಿರ್ದೇಶನ, ಡಿಫರೆಂಟ್ ಡ್ಯಾನಿ ಹಾಗೂ ದಳಪತಿ ದಿನೇಶ್ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ.
ಹಾಂಕಾಂಗ್ ಹಾಗೂ ಆಸ್ಟ್ರೇಲಿಯಾದಲ್ಲೂ ಚಿತ್ರದ ಹಾಡುಗಳನ್ನು ಚಿತ್ರೀಕರಿಸಲಾಗಿರುವ ಈ ಚಿತ್ರದ ನಾಯಕ ನಟರು ರಿಶಿ ಹಾಗೂ ಬಷೀದ್. ನಮಿತಾ, ಕಾದಲ್ ಸಂಧ್ಯಾ, ರಿಷಿಕಾ ಸಿಂಗ್, ರೇಖಾ, ಮೋನಿಕಾ, ಬಾನು ಮೆಹ್ರಾ, ಬುಲೆಟ್ ಪ್ರಕಾಶ್, ಲಯೇಂದ್ರ, ಬ್ಯಾಂಕ್ ಜನಾರ್ದನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











