»   » ಟ್ರೈಲರ್: ಪ್ರತಿಯೊಬ್ಬರನ್ನು ಕಾಡುವ 'ನಮ್ಮೂರು' ಹೇಗಿದೆ ನೀವೇ ನೋಡಿ..

ಟ್ರೈಲರ್: ಪ್ರತಿಯೊಬ್ಬರನ್ನು ಕಾಡುವ 'ನಮ್ಮೂರು' ಹೇಗಿದೆ ನೀವೇ ನೋಡಿ..

Posted By:
Subscribe to Filmibeat Kannada

ನಿಮ್ಮೂರು ಯಾವುದು?.... ಯಾರನ್ನಾದರೂ ಹೀಗೆ ಕೇಳಿದ ತಕ್ಷಣ ಅವರ ಮುಖದಲ್ಲೇನೋ ಮಂದಹಾಸ. ಮನಸ್ಸಲ್ಲೇನೋ ಹೊಸ ಸಂಚಲನ. ಒಮ್ಮೆಯೇ ಎಲ್ಲಿಲ್ಲದ ಭಾವೋದ್ವೇಗ ಶುರುವಾಗುತ್ತೆ. ಯಾಕಂದ್ರೆ ಪ್ರತಿಯೊಬ್ಬರಿಗೂ ಅವರ ಊರಿನ ಬಗ್ಗೆ ಇರುವ ಸಂಬಂಧ, ಪ್ರೀತಿ ಅಂತಹದ್ದು.

ಇನ್ನೂ ಅದೇ ಒಬ್ಬ ವ್ಯಕ್ತಿ ತನ್ನ ಊರಿನ ಬಗ್ಗೆಯೇ ನಮ್ಮೂರು ಯಾವುದು? ಅದು ನೋಡೋಕೆ ಹೇಗಿದೆ? ಎಂದು ಪ್ರಶ್ನೆ ಮಾಡಿದ್ರೆ...... ಬಹುಶಃ ಎಲ್ಲರ ಬಾಯಲ್ಲಿ ಉತ್ತರ ಬರುವುದಕ್ಕೂ ಮುನ್ನ ಕಣ್ಣಾಲಿಗಳು ಒದ್ದೆ ಆಗಿರುತ್ತವೆ. ಈ ರೀತಿ ಪ್ರಶ್ನೆಯನ್ನು ಬಹುಶಃ ಯಾರು ಕೇಳಬಹುದು ಎಂದು ಪ್ರಶ್ನೆಯೇ ಹೇಳುತ್ತದೆ.

ಇಷ್ಟೆಲ್ಲಾ ಪೀಠಿಕೆಯನ್ನು ನಾವು ಏಕೆ ಹಾಕ್ತಿದ್ದೀವಿ ಅಂದ್ರೆ reThink ಎಂಬ ಪ್ರೊಡಕ್ಷನ್ ಟೀಮ್ ಒಂದು ಪ್ರತಿಯೊಬ್ಬರಿಗೂ ಅವರ ಊರಿನ ಬಗ್ಗೆ ಎಮೋಷನಲ್ ಫೀಲ್ ನೀಡುವ 'ನಮ್ಮೂರು' ಎಂಬ ಕಿರುಚಿತ್ರ ನಿರ್ಮಿಸಿದೆ. ಆ ಕಿರುಚಿತ್ರದ 2.03 ನಿಮಿಷದ ಅಫೀಶಿಯಲ್ ಟ್ರೈಲರ್ ಈಗ ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ. 'ನಮ್ಮೂರು' ಕಿರುಚಿತ್ರದ ಸೌಂಡ್ ಎಷ್ಟರ ಮಟ್ಟಿಗಿದೆ ಎಂದರೇ ಟ್ರೈಲರ್ ನೋಡಿ ಸೆಲೆಬ್ರಿಟಿಗಳು ಸಹ ಭಾವುಕರಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ..

'ನಮ್ಮೂರು' ಕಿರುಚಿತ್ರ

'ನಮ್ಮೂರು' ಕಿರುಚಿತ್ರವನ್ನು ಶಿವಮೊಗ್ಗ ಮೂಲದ ಸ್ನೇಹಿತರ ತಂಡವೊಂದು reThink ಎಂಬ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಿಸಿದ್ದು, ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ಸಂಪತ್ ಕುಮಾರ್ ಎಸ್ ಎಂಬುವವರು ನಿರ್ದೇಶನ ಮಾಡಿದ್ದಾರೆ. ಕಿರಣ್ ಚೆಂಗಪ್ಪ, ರೂಪ ಗೌಡ ಮುಂತಾದವರು ನಟಿಸಿದ್ದಾರೆ. ಮಲೆನಾಡಿನ ಪ್ರದೇಶದ ಸುತ್ತ ಮುತ್ತಲ ಸುಂದರ ತಾಣಗಳಲ್ಲಿ ಅದ್ಭುತ ಕ್ಯಾಮೆರಾ ವರ್ಕ್ ನಿಂದ 'ನಮ್ಮೂರು' ಕಿರುಚಿತ್ರ ಚಿತ್ರೀಕರಣ ಮಾಡಲಾಗಿದೆ. ಟೈಟಲ್ ನಲ್ಲೇ ಎಲ್ಲರನ್ನು ಭಾವುಕರನ್ನಾಗಿಸುವ ಕಿರುಚಿತ್ರದ ಟ್ರೈಲರ್ ನೋಡಲು ಕ್ಲಿಕ್ ಮಾಡಿ

'ನಮ್ಮೂರು' ಟ್ರೈಲರ್ ಗೆ ಸೆಲೆಬ್ರಿಟಿಗಳು ಏನಂದ್ರು ಗೊತ್ತೇ?

ಕಿರುಚಿತ್ರದ ಟ್ರೈಲರ್ ನೋಡಿ ನಿರ್ದೇಶಕ ಎ.ಹರ್ಷ "ಚಿತ್ರದ ಹೆಸರೇ ಎಲ್ಲರಿಗೂ ಬಹುಬೇಗ ಕನೆಕ್ಟ್ ಆಗುತ್ತೆ. ಚಿತ್ರ ವೀಕ್ಷಿಸಬೇಕೆಂಬ ಕುತೂಹಲ ಹೆಚ್ಚಿಸುತ್ತದೆ. ಏನೋ ಒಂದು ಪ್ರಮುಖ ಅಂಶವನ್ನು ಕಿರುಚಿತ್ರದಲ್ಲಿ ಹೇಳಹೊರಟಿದ್ದಾರೆ ಎಂದು ಕ್ಯೂರಿಯಾಸಿಟಿ ಹೆಚ್ಚಾಗುತ್ತದೆ. reThink ಎಂಬ ಪ್ರೊಡಕ್ಷನ್ ಹೆಸರು ಸಹ ತುಂಬಾ ಸೆನ್ಸಿಬಲ್ ಆಗಿದೆ. ಚಿತ್ರಕ್ಕೆ ಆಲ್ ದಿ ಬೆಸ್ಟ್" ಎಂದಿದ್ದಾರೆ. ಕಿರುಚಿತ್ರದ ಟ್ರೈಲರ್ ನೋಡಿ ನಟ ಅನಿರುದ್, ಕಿರಿಕ್ ಕೀರ್ತಿ ಸೇರಿದಂತೆ ಕಿರುತೆರೆ, ಬೆಳ್ಳಿತೆರೆಯ ಇನ್ನೂ ಹಲವು ಸೆಲೆಬ್ರಿಟಿಗಳು ಏನು ಹೇಳಿದರು ನೋಡಲು ಕ್ಲಿಕ್ ಮಾಡಿ

'ನಮ್ಮೂರು' ಟ್ರೈಲರ್ ಗೆ ಸಾರ್ವಜನಿಕರ ಅಭಿಪ್ರಾಯ

'ನಮ್ಮೂರು' ಕಿರುಚಿತ್ರದ ಟ್ರೈಲರ್ ನೋಡಿ ಡೈಲಾಗ್, ಛಾಯಾಗ್ರಹಣ, ಕಥೆಯನ್ನು ಕೇವಲ ಕನ್ನಡ ಭಾಷಿಗರು ಮಾತ್ರವಲ್ಲದೇ ಪರಭಾಷಿಗರು ಇಷ್ಟಪಟ್ಟಿದ್ದಾರೆ. ಪಬ್ಲಿಕ್ ರೆಸ್ಪಾನ್ಸ್ ಹೇಗಿದೆ ನೋಡಲು ಕ್ಲಿಕ್ ಮಾಡಿ

ವಿಡಿಯೋ ಸಾಂಗ್ ನೋಡಿ

'ನಮ್ಮೂರು' ಕಿರುಚಿತ್ರಕ್ಕೆ ವಿಜಯ್ ರಾಜ್‌ ಎಂಬುವವರು ಸಂಗೀತ ಸಂಯೋಜನೆ ನೀಡಿದ್ದು, ಚೇತನ್ ಕೆ ಮತ್ತು ಪ್ರಜ್ವಲ್ ಕೆ.ಎನ್ ಎಂಬುವವರು ಸಾಹಿತ್ಯ ಬರೆದಿದ್ದಾರೆ. ಚಿತ್ರತಂಡ ವಿಡಿಯೋ ಹಾಡುಗಳನ್ನು ಬಿಡುಗಡೆ ಮಾಡಿದ್ದು, 'ಕ್ಷಣ ಕ್ಷಣ ಪ್ರತಿಕ್ಷಣ ಈ ಪ್ರೀತಿಯೂ ನಿರಂತರ' ಹಾಡು ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿದೆ. ಕಿರುಚಿತ್ರದ ಹಾಡು ನೋಡಲು ಕ್ಲಿಕ್ ಮಾಡಿ

English summary
Sampath Kumar S directorial 'Nammuuru' Kannada short movie official trailer released recently.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada