For Quick Alerts
  ALLOW NOTIFICATIONS  
  For Daily Alerts

  ಬಾಕ್ಸ್ ಆಫೀಸ್ ಭೂತ ಬಿಡಿಸಿದ 'ನಮೋ ಭೂತಾತ್ಮ'

  By Rajendra
  |

  ಹಾಸ್ಯ ನಟ ಕೋಮಲ್ ಕುಮಾರ್ ಅವರ ಚಿತ್ರಗಳಿಗೆ ಅವರದೇ ಆದ ಮಾರುಕಟ್ಟೆ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕಡಿಮೆ ಬಜೆಟ್ ನಲ್ಲಿ ಅತ್ಯುತ್ತಮ ಮನರಂಜನೆ ನೀಡುವುದು ಕೋಮಲ್ ಅವರ ಪಾಲಿಸಿ. ಅವರ ಅಭಿನಯದ ಲೇಟೆಸ್ಟ್ 'ನಮೋ ಭೂತಾತ್ಮ' ಚಿತ್ರ ಬಾಕ್ಸ್ ಆಫೀಸಲ್ಲಿ ಪ್ರೇತ ನರ್ತನ ಮಾಡುತ್ತಿದೆ.

  ಈ ಚಿತ್ರ ಮೊದಲ ವಾರದಲ್ಲೇ ರು.1.75 ಕೋಟಿ ಕಲೆಕ್ಷನ್ ಮಾಡುವ ಭರವಸೆಯನ್ನು ಮೂಡಿಸಿದೆ. ಒಂದರ ಹಿಂದೆ ಒಂದರಂತೆ ಬರುತ್ತಿದ್ದ ಕೋಮಲ್ ಚಿತ್ರಗಳ ಬಗ್ಗೆ ಪ್ರೇಕ್ಷಕರು ಹಾಗೂ ಅವರ ಅಭಿಮಾನಿಗಳು ಕೊಂಚ ಉತ್ಸಾಹ ಕಳೆದುಕೊಂಡಿದ್ದರು. [ನಮೋ ಭೂತಾತ್ಮ ಚಿತ್ರ ವಿಮರ್ಶೆ]

  ಆದರೆ 'ನಮೋ ಭೂತಾತ್ಮ' ಚಿತ್ರ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ನವರಸನಾಯಕ ಜಗ್ಗೇಶ್ ಸಹ ಖುಷಿಯಾಗಿದ್ದು, ಒಂದೇ ವಾರದಲ್ಲಿ ಚಿತ್ರ ಸುಮಾರು ರು.2.5 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ನೃತ್ಯ ನಿರ್ದೇಶಕರಾಗಿ ಹೆಸರು ಮಾಡಿರುವ ಮುರಳಿ ಅವರು ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಚಿತ್ರ ಇದಾಗಿದೆ. ಅವರು ಇದುವರೆಗೂ 200ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿದ್ದು 600ಕ್ಕೂ ಅಧಿಕ ಹಾಡುಗಳಿಗೆ ಡಾನ್ಸ್ ಮಾಸ್ಟರ್ ಆಗಿ ನೃತ್ಯ ಸಂಯೋಜನೆ ಮಾಡಿದ್ದಾರೆ. (ಫಿಲ್ಮಿಬೀಟ್ ಕನ್ನಡ)

  English summary
  Sandalwood film industry sources says, Komal Kumar lead Namo Boothatma will fetch a share of Rs 1.75 crore in first week itself. The horror comedy movie got reve reviews also.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X