»   » ನಾವು ಹೇಳಿದ್ಹಂಗೆ ಆಯ್ತು : ಅಪ್ಪು-ಅಕ್ಷಯ್ ಬಗ್ಗೆ ಬ್ರೇಕಿಂಗ್ ಬಂತು.!

ನಾವು ಹೇಳಿದ್ಹಂಗೆ ಆಯ್ತು : ಅಪ್ಪು-ಅಕ್ಷಯ್ ಬಗ್ಗೆ ಬ್ರೇಕಿಂಗ್ ಬಂತು.!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ರವರದ್ದು 'ಜಸ್ಟ್ ಮೀಟಿಂಗ್' ಅಲ್ಲ, ಇಬ್ಬರು ಆಗಾಗ ಭೇಟಿ ಆಗುತ್ತಿರುವುದು 'ಸಿನಿಮಾ' ವಿಚಾರವಾಗಿ ಅಂತ ನಿನ್ನೆಯಷ್ಟೇ ನಾವು, ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ವರದಿ ಮಾಡಿದ್ವಿ.

ಆ ಸುದ್ದಿ ಈಗ ಅಧಿಕೃತ ಆಗಿದೆ. ಅಪ್ಪು ಮತ್ತು ಅಕ್ಕಿ ಕುರಿತು ಒಂದು ಬ್ರೇಕಿಂಗ್ ನ್ಯೂಸ್ ಬ್ಲಾಸ್ಟ್ ಆಗಿದೆ. [ಅಪ್ಪು ಜೊತೆ ಅಕ್ಷಯ್ ಕುಮಾರ್.! ಖಾಸ್ ಖಬರ್ ಇದೆ, ಕಾಯ್ತಿರಿ.!]

ಆ ಬ್ರೇಕಿಂಗ್ ನ್ಯೂಸ್ ನಲ್ಲೂ ಒಂದು ಟ್ವಿಸ್ಟ್ ಇದೆ. ಅದು ಏನು ಅಂತ ಹೇಳ್ತೀವಿ, ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ....

ಆಕ್ಷಯ್ ಕುಮಾರ್ ನಿರ್ಮಾಣದಲ್ಲಿ ತಯಾರಾಗಲಿದೆ ಸಿನಿಮಾ

ಬಾಲಿವುಡ್ ನಟ ಅಕ್ಷಯ್ ಕುಮಾರ್ ರವರ 'ಹರಿ ಓಂ ಎಂಟರ್ ಟೇನ್ಮೆಂಟ್' ಸಂಸ್ಥೆ ದಕ್ಷಿಣ ಭಾರತದ ಚಿತ್ರಗಳನ್ನ ನಿರ್ಮಿಸಲು ಮುಂದಾಗಿದೆ. ಅದರಲ್ಲಿ ಸ್ಯಾಂಡಲ್ ವುಡ್ ಗೆ ಮೊದಲ ಆದ್ಯತೆ ನೀಡಿದ್ದಾರೆ 'ಖತರೋಂಕೆ ಖಿಲಾಡಿ' ಅಕ್ಷಯ್ ಕುಮಾರ್. [ಚೆನ್ನೈನಲ್ಲಿ ಬಾಲಿವುಡ್-ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಗಳ ಮಿಲನ.!]

ಸೆಟ್ಟೇರಲಿದೆ ಆಕ್ಷನ್-ಥ್ರಿಲ್ಲರ್ ಸಿನಿಮಾ

ಒಂದು ಆಕ್ಷನ್-ಥ್ರಿಲ್ಲರ್ ಕನ್ನಡ ಚಿತ್ರಕ್ಕೆ ಬಂಡವಾಳ ಹಾಕಲು ಆಕ್ಷಯ್ ಕುಮಾರ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. [ಪುನೀತ್-ನಂದ ಕಿಶೋರ್ ಕಾಂಬಿನೇಷನ್ ನಲ್ಲಿ ಹೊಸ ಚಿತ್ರ!]

ದ್ವಿ-ಭಾಷೆಯಲ್ಲಿ ರೆಡಿ ಆಗಲಿದೆ

ಕನ್ನಡ ಹಾಗೂ ಹಿಂದಿಯಲ್ಲಿ ಆಕ್ಷನ್ - ಥ್ರಿಲ್ಲರ್ ಸಿನಿಮಾ ಏಕಕಾಲಕ್ಕೆ ರೆಡಿ ಆಗಲಿದೆ.

ಅಪ್ಪು-ಅಕ್ಕಿ ಚಿತ್ರ ಕಣ್ರೀ ಇದು.!

ಇಂಟ್ರೆಸ್ಟಿಂಗ್ ವಿಚಾರ ಇರೋದೇ ಇಲ್ಲಿ. ಅಕ್ಷಯ್ ಕುಮಾರ್ ಪ್ರೊಡಕ್ಷನ್ ಹೌಸ್ ಬಂಡವಾಳ ಹಾಕಲು ಮುಂದಾಗಿರುವ ಆಕ್ಷನ್ - ಥ್ರಿಲ್ಲರ್ ಚಿತ್ರದ ಕನ್ನಡ ಅವತರಣಿಕೆಯಲ್ಲಿ ಪುನೀತ್ ರಾಜ್ ಕುಮಾರ್ ಹೀರೋ ಆದರೆ, ಹಿಂದಿ ಅವತರಣಿಕೆಯಲ್ಲಿ ಅಕ್ಷಯ್ ಕುಮಾರ್ ನಾಯಕ.!

ನಂದ ಕಿಶೋರ್ ನಿರ್ದೇಶಕ

ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುವ ಬಿಗ್ ಬಜೆಟ್ ಚಿತ್ರಕ್ಕೆ ನಂದ ಕಿಶೋರ್ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ನಂದ ಕಿಶೋರ್ ಕನಸು ನನಸು

ಬಾಲಿವುಡ್ ನಲ್ಲಿ ಒಂದು ಸಿನಿಮಾ ನಿರ್ದೇಶನ ಮಾಡ್ಬೇಕು ಎಂಬುದು ನಂದ ಕಿಶೋರ್ ಕನಸಾಗಿತ್ತು. ಅದಕ್ಕಾಗಿ ಹಲವಾರು ಕಥೆಗಳನ್ನಿಟ್ಟುಕೊಂಡು ಅನೇಕ ಬಾಲಿವುಡ್ ಸ್ಟಾರ್ ಗಳನ್ನ ನಂದ ಕಿಶೋರ್ ಭೇಟಿ ಮಾಡಿದ್ದರು. ಈಗ ನಂದ ಕಿಶೋರ್ ಕನಸನ್ನು ನನಸು ಮಾಡಲು ಅಕ್ಷಯ್ ಕುಮಾರ್ ಸಜ್ಜಾಗಿದ್ದಾರೆ. [ಬಾಲಿವುಡ್ಡಿಗೆ ಹಾರಲಿದ್ದಾರೆ 'ರನ್ನ'ನ ಚಿನ್ನದ ನಿರ್ದೇಶಕ]

ರಮೇಶ್ ದೆಂಬ್ಲಾಗೆ ಏನು ಕೆಲಸ

ಪುನೀತ್, ಅಕ್ಷಯ್, ನಂದ ಕಿಶೋರ್ ಭೇಟಿ ಆದ ಫೋಟೋಗಳಲ್ಲಿ ಫ್ಯಾಶನ್ ಡಿಸೈನರ್ ರಮೇಶ್ ದೆಂಬ್ಲಾ ಕೂಡ ಇದ್ದರು. ಹಾಗ್ನೋಡಿದ್ರೆ, ದ್ವಿಭಾಷೆಯಲ್ಲಿ ತಯಾರಾಗುವ ಆಕ್ಷನ್-ಥ್ರಿಲ್ಲರ್ ಚಿತ್ರದ ನಿರ್ಮಾಣ ಉಸ್ತುವಾರಿ ನೋಡಿಕೊಳ್ಳುವುದು ಇದೇ ರಮೇಶ್ ದೆಂಬ್ಲಾ.

ಪುನೀತ್ ರಾಜ್ ಕುಮಾರ್ ಸದ್ಯಕ್ಕೆ ಬಿಜಿ

ಪುನೀತ್ ರವರ 'ದೊಡ್ಮನೆ ಹುಡುಗ' ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. 'ರಾಜಕುಮಾರ' ಶೂಟಿಂಗ್ ನಲ್ಲಿ ಸದ್ಯ ಬಿಜಿ ಆಗಿರುವ ಅಪ್ಪು, ಅದು ಮುಗಿದ ಬಳಿಕ ನಂದಕಿಶೋರ್ ಗೆ ಕಾಲ್ ಶೀಟ್ ನೀಡಲಿದ್ದಾರೆ.

ಹಾಗಾದ್ರೆ, ಚಿತ್ರ ಶುರು ಯಾವಾಗ.?

ಜನವರಿ 2017 ರ ಹೊತ್ತಿಗೆ ಈ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

English summary
Bollywood Actor Akshay Kumar's production house is all set to produce Bi-lingual Action Thriller, which is directed by Nanda Kishore, and star Puneeth Rajkumar in Kannada and Akshay Kumar in Hindi.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada