For Quick Alerts
  ALLOW NOTIFICATIONS  
  For Daily Alerts

  ಈ ಫೈಟ್ ಮಾಡಿದ್ಮೇಲೆ ಪ್ರಥಮ್ ಗೆ 15 ದಿನ ಬೆಡ್ ರೆಸ್ಟ್ ಮಾಡೋಕೆ ಹೇಳಿದ್ರಂತೆ.!

  |

  ಪಿ ಬಾಸ್ ಪ್ರಥಮ್ ಅಭಿನಯದ ನಟಭಯಂಕರ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಹಂತ ಹಂತಕ್ಕೂ ಸುದ್ದಿಯಾಗುತ್ತಲೇ ಇದೆ. ದರ್ಶನ್ ಅವರ ತಾಯಿಯಿಂದ ಪೋಸ್ಟರ್ ರಿಲೀಸ್ ಮಾಡಿಸಿದ್ದ ಪ್ರಥಮ್, ಈಗ ಫೈಟ್ ವೊಂದಕ್ಕೆ ಹೆಡ್ ಲೈನ್ ಆಗಿದ್ದಾರೆ.

  ನಟಭಯಂಕರ ಚಿತ್ರದ ಇಂಟ್ರೊಡಕ್ಷನ್ ಫೈಟ್ ನ ಚಿತ್ರೀಕರಣ ಇತ್ತೀಚಿಗೆ ನಡೆದಿದ್ದು, ಈ ಫೈಟ್ ಬಳಿಕ ನಟ ಪ್ರಥಮ್ ಗೆ 15 ದಿನ ಬೆಡ್ ರೆಸ್ಟ್ ಗೆ ಸಲಹೆ ನೀಡಿದ್ದಾರಂತೆ. ಯಾಕಂದ್ರೆ, ಅಷ್ಟರ ಮಟ್ಟಿಗೆ ಈ ಫೈಟ್ ವಿಶೇಷವಾಗಿದ್ದು, ಅಷ್ಟು ಡೇಂಜರ್ಸ ಆಗಿ ಮಾಡಲಾಗಿದೆಯಂತೆ.

  ಪ್ರಥಮ್ ಇನ್ಮುಂದೆ 'ಪಿ ಬಾಸ್': ಬರ್ತಡೇಗೆ ಕಾದಿದೆ ಇನ್ನೊಂದು ಸರ್ಪ್ರೈಸ್.!

  ಕನ್ನಡದ ಪ್ರಸಿದ್ಧ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಈ ಫೈಟ್ ನಿರ್ದೇಶನ ಮಾಡಿದ್ದು, ಇದು ಹೊಸ ಅನುಭವ ಎಂದಿದ್ದಾರೆ. ಪ್ರಥಮ್ ಜೊತೆ ಕೆಲಸ ಮಾಡಿದ್ದು, ಎರಡು ಆಯಾಮದ ಫೈಟ್ ನಿರ್ದೇಶನ ಮಾಡಿದ್ದು ಖುಷಿ ಕೊಟ್ಟಿದೆ ಎಂದಿದ್ದಾರೆ.

  ಅಂದ್ಹಾಗೆ, ಈ ಚಿತ್ರವನ್ನ ಸ್ವತಃ ಪ್ರಥಮ್ ನಿರ್ದೇಶನ ಮಾಡುತ್ತಿದ್ದು, ತಾವೇ ನಾಯಕರಾಗಿ ನಟಿಸುತ್ತಿದ್ದಾರೆ. ಇವರ ಜೊತೆ ಡೈಲಾಗ್ ಕಿಂಗ್ ಸಾಯಿಕುಮಾರ್, ಹಿರಿಯ ನಟಿ ಲೀಲಾವತಿ, ಶೋಭರಾಜ್, ಕುರಿ ಪ್ರತಾಪ್, ಓಂ ಪ್ರಕಾಶ್ ರಾವ್, ಬಿರಾದರ್ ಅಭಿನಯಿಸುತ್ತಿದ್ದಾರೆ.

  ವಿ ನಾಗೇಂದ್ರ ಪ್ರಸಾದ್, ಬಹದ್ಧೂರ್ ಚೇತನ್ ಕುಮಾರ್, ನಾಗತಿಹಳ್ಳಿ ಚಂದ್ರಶೇಖರ್ ನಟಭಯಂಕರ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಸ್ವರಸ್ಯ ಕ್ರಿಯೇಷನ್ಸ್ ನಲ್ಲಿ ಈ ಚಿತ್ರದ ಮೂಡಿ ಬರ್ತಿದೆ.

  Read more about: pratham ಪ್ರಥಮ್
  English summary
  Bigg boss fame, kannada actor pratham starrer nata bhayankara movie stunt video goes viral in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X