For Quick Alerts
  ALLOW NOTIFICATIONS  
  For Daily Alerts

  'ನಟಸಾರ್ವಭೌಮ' ಆಡಿಯೋ ಕಾರ್ಯಕ್ರಮಕ್ಕಿಲ್ಲ 'ಐಟಿ' ಭಯ.!

  |
  Nata Sarvabhouma Kannada Movie: ನಟಸಾರ್ವಭೌಮ' ಆಡಿಯೋ ಕಾರ್ಯಕ್ರಮಕ್ಕೆ 'ಐಟಿ' ಭಯ.! | FILMIBEAT KANNADA

  ನಟ ಪುನೀತ್ ರಾಜ್ ಕುಮಾರ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಮನೆ ಐಟಿ ದಾಳಿ ಆಗಿರುವ ಹಿನ್ನಲೆ ಈಗಾಗಲೇ ನಿಗದಿಯಾಗಿರುವ 'ನಟಸಾರ್ವಭೌಮ' ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆಯುತ್ತಾ ಇಲ್ವಾ ಎಂಬ ಅನುಮಾನ ಶುರುವಾಗಿತ್ತು.

  ಜನವರಿ 5ರ ಸಂಜೆ 5.30ಕ್ಕೆ ಹುಬ್ಬಳ್ಳಿಯ ನೆಹರು ಸ್ಟೇಡಿಯಂನಲ್ಲಿ ನಟಸಾರ್ವಭೌಮ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಈ ಶೋನಲ್ಲಿ ಪುನೀತ್ ರಾಜ್ ಕುಮಾರ್, ರಚಿತಾ ರಾಮ್, ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ಪವನ್ ಒಡೆಯರ್ ಸೇರಿದಂತೆ ಇನ್ನು ಹಲವು ಗಣ್ಯರು ಭಾಗಿಯಾಗಲಿದ್ದಾರೆ.

  ಸ್ಯಾಂಡಲ್ ವುಡ್ ನ '8' ಶ್ರೀಮಂತ ಮನೆಗಳ ಮೇಲೆ ಐಟಿ ರೈಡ್

  ಆದ್ರೆ, ಪುನೀತ್ ಮತ್ತು ರಾಕ್ ಲೈನ್ ಮನೆ ಮೇಲೆ ಆಗಿರುವ ಐಟಿ ದಾಳಿ ಎರಡನೇ ದಿನವೂ ಮುಂದುವರಿದಿದೆ. ಒಂದು ವೇಳೆ ನಾಳೆಯೂ ಪರಿಶೀಲನೆ ಮುಂದುವರಿದರೇ 'ನಟಸಾರ್ವಭೌಮ' ಆಡಿಯೋ ಕಾರ್ಯಕ್ರಮ ನಡೆಯುವುದು ಬಹುತೇಕ ಗೊಂದಲವಾಗಿಯೇ ಇತ್ತು

  ನಟಸಾರ್ವಭೌಮ ಆಡಿಯೋ ಶೋನಲ್ಲಿ ಯುವರಾಜ್ ಕುಮಾರ್ ಸರ್ಪ್ರೈಸ್

  ಈ ಗೊಂದಲಕ್ಕೆ ಸ್ವತಃ ನಿರ್ದೇಶಕ ಪವನ್ ಒಡೆಯರ್ ಸ್ಪಷ್ಟನೆ ನೀಡಿದ್ದು, ನಾಳೆ ನಿಗದಿಯಾಗಿರುವ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆಯುತ್ತೆ, ಅದಕ್ಕೆ ಯಾವುದೇ ತೊಂದರೆ ಇಲ್ಲ. ಎಲ್ಲರೂ ಬನ್ನಿ, ಕಾರ್ಯಕ್ರಮವನ್ನ ಯಶಸ್ವಿಗೊಳಿಸೋಣ. ಯಾವ ಗೊಂದಲವೂ ಇಲ್ಲ'' ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.

  ಪವನ್ ಒಡೆಯರ್ ಸ್ಪಷ್ಟನೆ ಕೇಳಿದ್ಮೇಲೂ, ಈ ಅನುಮಾನ ಹಾಗೆ ಇದೆ. ಯಾಕಂದ್ರೆ, ಪುನೀತ್ ಮತ್ತು ರಾಕ್ ಲೈನ್ ಮನೆಯಿಂದ ಐಟಿ ಅಧಿಕಾರಿಗಳು ಹೊರಹೋಗುವವರೆಗೂ ಅಭಿಮಾನಿಗಳಿಗೆ ಈ ಗೊಂದಲ ಇದ್ದೇ ಇರುತ್ತೆ. ಇನ್ನು ಸಂಜೆವರೆಗು ಸಮಯವಿದೆ. ಕಾದುನೋಡೋಣ.

  English summary
  Puneeth rajkumar starrer natasaarvabhowma movie audio will release on tomorrow at Neharu Ground Hubli. its no change says director pavan wadeyar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X