For Quick Alerts
  ALLOW NOTIFICATIONS  
  For Daily Alerts

  ಫೋಟೋಗಳು : ಅಪ್ಪುಗೆ ಆಶೀರ್ವಾದ ಮಾಡಿದ ಹುಬ್ಬಳ್ಳಿ ಮಂದಿ

  |

  ನಟ ಪುನೀತ್ ರಾಜ್ ಕುಮಾರ್ ಅಭಿನಯದ 'ನಟ ಸಾರ್ವಭೌಮ' ಸಿನಿಮಾದ ಸದ್ದು ನಿನ್ನೆಯಿಂದ ಮತ್ತಷ್ಟು ಜಾಸ್ತಿಯಾಗಿದೆ. ಕಾರಣ ಈ ಸಿನಿಮಾದ ಹಾಡುಗಳು ನಿನ್ನೆ ಬಿಡುಗಡೆಯಾಗಿವೆ.

  ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ನಟ ಪುನೀತ್ ರಾಜ್ ಕುಮಾರ್, ರಚಿತಾ ರಾಮ್, ನಿರ್ದೇಶಕ ಪವನ್ ಒಡೆಯರ್ ಸೇರಿದಂತೆ ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ನಟ ರಾಘವೇಂದ್ರ ರಾಜ್ ಕುಮಾರ್ ಹಾಗೂ ದೊಡ್ಡಣ್ಣ ಚಿತ್ರತಂಡದ ಜೊತೆಗೆ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.

  ವಿಡಿಯೋ : 'ನಟ ಸಾರ್ವಭೌಮ' ಹಾಗೂ 'ಕವಚ' ಹೊಸ ಹಾಡುಗಳನ್ನು ಕೇಳಿ ವಿಡಿಯೋ : 'ನಟ ಸಾರ್ವಭೌಮ' ಹಾಗೂ 'ಕವಚ' ಹೊಸ ಹಾಡುಗಳನ್ನು ಕೇಳಿ

  ಸಾವಿರಾರೂ ಸಂಖ್ಯೆಯ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಬಂದು ಕಾರ್ಯಕ್ರಮವನ್ನು ವೀಕ್ಷಿಸಿದರು. ಅಂದಹಾಗೆ, 'ನಟ ಸಾರ್ವಭೌಮ' ಕಾರ್ಯಕ್ರಮದ ಸಿಹಿ ಕ್ಷಣಗಳ ಫೋಟೋಗಳು ಮುಂದಿವೆ..

  ಅಪ್ಪು ಜೊತೆ ಹುಬ್ಬಳ್ಳಿಯ ಮಂದಿ

  ಅಪ್ಪು ಜೊತೆ ಹುಬ್ಬಳ್ಳಿಯ ಮಂದಿ

  ಪುನೀತ್ ರಾಜ್ ಕುಮಾರ್ ಹಾಗೂ ರಚಿತಾ ರಾಮ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ನಟ ಸಾರ್ವಭೌಮ' ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಿನ್ನೆ ನಡೆದಿದೆ. ಹುಬ್ಬಳ್ಳಿ ಮಂದಿಯ ಮುಂದೆ ಹಾಡುಗಳ ಅನಾವರಣವಾಗಿದೆ. ತಮ್ಮ ನೆಚ್ಚಿನ ನಟರನ್ನು ನೋಡಿ ಜನ ಖುಷಿಯಾಗಿದ್ದಾರೆ.

  ಕಾರ್ಯಕ್ರಮದಲ್ಲಿ ಅತಿಥಿಗಳ ಸಂಗಮ

  ಕಾರ್ಯಕ್ರಮದಲ್ಲಿ ಅತಿಥಿಗಳ ಸಂಗಮ

  'ನಟ ಸಾರ್ವಭೌಮ' ಆಡಿಯೋ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್, ರಚಿತಾ ರಾಮ್, ಚಿಕ್ಕಣ್ಣ, ನಿರ್ದೇಶಕ ಪವನ್ ಒಡೆಯರ್, ದೊಡ್ಡಣ್ಣ, ವಿಜಯ್ ಪ್ರಕಾಶ್, ಸಂಗೀತ ನಿರ್ದೇಶಕ ಡಿ ಇಮಾನ್, ರಾಘವೇಂದ್ರ ರಾಜ್ ಕುಮಾರ್, ಯುವ ರಾಜ್ ಕುಮಾರ್ ಭಾಗಿಯಾಗಿದ್ದರು.

  ಅಪ್ಪು ರೀತಿ ಡ್ಯಾನ್ಸ್ ಮಾಡಿದ್ರೆ ಬಂಪರ್ ಬಹುಮಾನ ಅಪ್ಪು ರೀತಿ ಡ್ಯಾನ್ಸ್ ಮಾಡಿದ್ರೆ ಬಂಪರ್ ಬಹುಮಾನ

  ಯುವ ಡ್ಯಾನ್ಸ್ ಧಮಾಕ

  ಯುವ ಡ್ಯಾನ್ಸ್ ಧಮಾಕ

  ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆ ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವ ರಾಜ್ ಕುಮಾರ್ ಅವರ ಡ್ಯಾನ್ಸ್ ಆಗಿತ್ತು. ಚಿಕ್ಕಪ್ಪನ ಸಿನಿಮಾದ ಆಡಿಯೋ ಕಾರ್ಯಕ್ರಮದಲ್ಲಿ ಯುವ ಅಬ್ಬರ ನಡೆಸಿದರು. ಇನ್ನು, ವಿನಯ್ ರಾಜ್ ಕುಮಾರ್ ಬಳಿಕ ಯುವ ಕೂಡ ಚಿತ್ರರಂಗಕ್ಕೆ ಬರುತ್ತಿದ್ದಾರೆ.

  ಸೆಲ್ಫಿ ಸಂಭ್ರಮ

  ಸೆಲ್ಫಿ ಸಂಭ್ರಮ

  ಕಾರ್ಯಕ್ರಮದ ನಡುವೆ ಪುನೀತ್ ರಾಜ್ ಕುಮಾರ್ ಸೆಲ್ಫಿ ಸಂಭ್ರಮ ನಡೆದಿದೆ. ಗಾಯಕ ವಿಜಯ್ ಪ್ರಕಾಶ್ ಜೊತೆಗೆ ಅಪ್ಪು ಸೆಲ್ಫಿ ತೆರೆದುಕೊಡಿದ್ದು, ಅದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾದ ಒಂದು ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ.

  ಯಶ್ ಬರಲು ಆಗಲಿಲ್ಲ

  ಇನ್ನು ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಯಶ್ ಬರಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ''ಅನಿವಾರ್ಯ ಕಾರಣಗಳ ಹಿನ್ನೆಲೆಯಲ್ಲಿ ಇಂದು ವಿಮಾನ ಕೈತಪ್ಪಿದ ಕಾರಣ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್‍ ಕುಮಾರ್ ಅಭಿನಯದ 'ನಟ ಸಾರ್ವಭೌಮ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.'' ಎಂದು ಫೇಸ್ ಬುಕ್ ನಲ್ಲಿ ಯಶ್ ತಿಳಿಸಿದ್ದಾರೆ.

  English summary
  Power Star Puneet Rajkumar starrer 'Nata Sarwabouma' Kannada movie songs released in Huballi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X