For Quick Alerts
  ALLOW NOTIFICATIONS  
  For Daily Alerts

  75 ರೂಪಾಯಿಗೆ ಮಲ್ಟಿಪ್ಲೆಕ್ಸ್ ಟಿಕೆಟ್ಸ್ ಲಭ್ಯ; ಯಾವ ದಿನ, ಎಲ್ಲೆಲ್ಲಿ? ಇಲ್ಲಿದೆ ಮಾಹಿತಿ

  |

  ಎಲ್ಲಾ ಯೋಜನೆಯ ಪ್ರಕಾರವೇ ನಡೆದಿದ್ದರೆ ಇದೇ ತಿಂಗಳ 16ರಂದೇ ರಾಷ್ಟ್ರೀಯ ಸಿನಿಮಾ ದಿನ ಆಯೋಜನೆಗೊಳ್ಳಬೇಕಿತ್ತು. ಆದರೆ, ಆ ಸಮಯಕ್ಕೆ ಬಾಲಿವುಡ್‌ನ ದೊಡ್ಡ ಚಿತ್ರ ಬ್ರಹ್ಮಾಸ್ತ್ರ ಕೇವಲ ಒಂದು ವಾರ ಪೂರೈಸಿದ್ದ ಕಾರಣ ಚಿತ್ರದ ಕಲೆಕ್ಷನ್ ಮೇಲೆ ಪ್ರಭಾವ ಬೀರಬಾರದೆಂದು ಚಿತ್ರದ ನಿರ್ಮಾಪಕರು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಜತೆ ಚರ್ಚಿಸಿ ಈ ವಿಶೇಷ ದಿನವನ್ನು ಒಂದು ವಾರ ಮುಂದೂಡಿಸಿದ್ದರು.

  ಹೀಗಾಗಿ ಕಳೆದ ವಾರ ನಡೆಯಬೇಕಿದ್ದ ರಾಷ್ಟ್ರೀಯ ಸಿನಿಮಾ ದಿನ ಈ ವಾರ ಆಯೋಜನೆಗೊಳ್ಳಲಿದ್ದು, ಸೆಪ್ಟೆಂಬರ್ 23ರಂದು ಈ ವಿಶೇಷ ದಿನವನ್ನು ದೇಶದಾದ್ಯಂತ ಇರುವ ಹಲವು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಆಚರಿಸಲಾಗುತ್ತದೆ. ಇನ್ನು ಈ ವಿಶೇಷ ದಿನದಂದು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಚಿತ್ರಗಳ ಟಿಕೆಟ್ ದರವನ್ನು ಕೇವಲ 75 ರೂಪಾಯಿ ಎಂದು ನಿಗದಿಪಡಿಸಿದೆ.

  ಕೊರೊನಾ ವೈರಸ್ ಕಾರಣದಿಂದಾಗಿ ದೇಶದಾದ್ಯಂತ ಚಿತ್ರಮಂದಿರಗಳು ಮುಚ್ಚಲ್ಪಟ್ಟು ನಂತರ ಪುನರಾರಂಭವಾದಾಗ ಸಿನಿ ಪ್ರೇಕ್ಷಕರು ಮತ್ತೆ ಚಿತ್ರಮಂದಿರಗಳಿಗೆ ಬಂದು ಚಿತ್ರ ವೀಕ್ಷಿಸಿದ ಕಾರಣದಿಂದಾಗಿಯೇ ತಮ್ಮ ಮಲ್ಟಿಪ್ಲೆಕ್ಸ್ ವ್ಯವಹಾರ ಯಥಾಸ್ಥಿತಿಗೆ ಮರಳಿತು, ಹೀಗಾಗಿ ಅಂದು ತಮ್ಮ ಕೈಹಿಡಿದ ಸಿನಿ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಿಂದ ಈ ರೀತಿ ವಿನಾಯಿತಿ ದರದಲ್ಲಿ ಟಿಕೆಟ್ ನೀಡಲು ಮುಂದಾಗಿರುವುದಾಗಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತಿಳಿಸಿತ್ತು.

  ಇನ್ನು ಈ ದಿನದಂದು ದೇಶದಾದ್ಯಂತ ಇರುವ 4000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ವಿಶೇಷ ಆಚರಣೆ ಇರಲಿದ್ದು, ಪಿವಿಆರ್, ಐನಾಕ್ಸ್, ಕಾರ್ನಿವಾಲ್, ಗೋಪಾಲನ್, ಮೀರಜ್, ಸಿನಿಪೊಲಿಸ್, ಸಿಟಿ ಪ್ರೈಡ್, ಏಷ್ಯನ್, ಮುಕ್ತ ಎ2, ವೇವ್, ಎಂ2ಕೆ, ಡಿಲೈಟ್ ಸೇರಿದಂತೆ ಹಲವಾರು ಸಿಂಗಲ್ ಸ್ಕ್ರೀನ್‌ಗಳೂ ಸಹ ಈ 'ಥ್ಯಾಂಕ್ಯು' ಅಭಿಯಾನದಡಿಯಲ್ಲಿ ಭಾಗವಹಿಸಲಿವೆ. ಇನ್ನು ಈ ದಿನದಂದು ಬಿಡುಗಡೆಗೊಳ್ಳುವ ಚಿತ್ರಗಳ ಜತೆಗೆ ಆರ್ಆರ್ಆರ್ ಹಾಗೂ ಕೆಜಿಎಫ್ ರೀತಿಯ ದೊಡ್ಡ ಸಿನಿಮಾಗಳೂ ಸಹ ವಿಶೇಷ ಪ್ರದರ್ಶನ ಕಾಣಲಿವೆ.

  English summary
  National cinema day 2022: Multiplex tickets to be sold for 75 rupees

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X