For Quick Alerts
  ALLOW NOTIFICATIONS  
  For Daily Alerts

  ನಯನತಾರಾ ಒಂದು ಕೋಟಿ ಜರತಾರಿ ಸೀರೆ ಡೀಲ್

  By Rajendra
  |

  ದಕ್ಷಿಣ ಚಿತ್ರರಂಗದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿರುವ ತಾರೆ ನಯನತಾರಾ. ತೆಲುಗು, ತಮಿಳಿನಲ್ಲಿ ಉತ್ತಮ ಆಫರ್ ಗಳು ಬರುತ್ತಿದ್ದರೂ ಸಾಕಷ್ಟು ಚಿತ್ರಗಳನ್ನು ತಿರಸ್ಕರಿಸಿದ ಖ್ಯಾತಿಯೂ ನಯನತಾರಾ ಅವರದು. ಇನ್ನು ಜಾಹೀರಾತುಗಳ ವಿಚಾರಕ್ಕೆ ಬಂದರೂ ಅವುಗಳಿಂದ ಗಾವುದ ದೂರ ಉಳಿದಿರುವ ತಾರೆ.

  ಈಗ ಹೊಸತೊಂದು ಜಾಹೀರಾತಿಗಾಗಿ ನಯನತಾರಾ ರು.1 ಕೋಟಿ ಎಣಿಸಿದ್ದಾರಂತೆ. ಕಲಾನಿಕೇತನ್ ಬ್ರ್ಯಾಂಡ್ ನ ಇನ್ನೊಂದು ಹೊಸ ಬ್ರ್ಯಾಂಡ್ ಶ್ರೀನಿಕೇತನ್ ಗಾಗಿ ಈ ಆಫರ್ ಎನ್ನುತ್ತವೆ ಮೂಲಗಳು. ಈ ಜಾಹೀರಾತಿಗಾಗಿ ರು.1 ಕೋಟಿ ಎಣಿಸುವ ಮೂಲಕ ನಯನತಾರಾ ಜಾಹೀರಾತು ಪ್ರಪಂಚದಲ್ಲೂ ಹೊಸ ಎತ್ತರಕ್ಕೆ ಏರಿದ್ದಾರೆ.

  ಬ್ರ್ಯಾಂಡ್ ನ ಕಾನ್ಸೆಪ್ಟ್ ಕೇಳಿದ ಕೂಡಲೆ ನಯನತಾರಾ ಒಪ್ಪಿಕೊಂಡರಂತೆ. ಸದ್ಯಕ್ಕೆ ಬಾಯಿ ಮಾತಿನಲ್ಲಿ ಒಪ್ಪಿಗೆ ಕೊಟ್ಟಿದ್ದು ಇನ್ನು ಒಪ್ಪಂದ ಪತ್ರಗಳಿಗೆ ಸಹಿ ಹಾಕುವುದೊಂದು ಬಾಕಿ ಇದೆ. ಆರಂಭದಿಂದಲೂ ಜಾಹೀರಾತುಗಳಿಂದ ದೂರ ಉಳಿದ ತಾರೆ ಎಂದರೆ ನಯನತಾರಾ.

  ತನ್ನ ಸುದೀರ್ಘ ಹತ್ತು ವರ್ಷಗಳ ವೃತ್ತಿ ಬದುಕಿನಲ್ಲಿ ಬಹಳಷ್ಟು ಜಾಹೀರಾತುಗಳು ಹುಡುಕಿಕೊಂಡು ಬಂದಿದ್ದವು. ಆದರೆ ಯಾವುದನ್ನೂ ಒಪ್ಪಿಕೊಂಡಿರಲಿಲ್ಲ. ಪೋಥಿಸ್ ದೀಪಾವಳಿ ವಸ್ತ್ರಭಂಡಾರ ಜಾಹೀರಾತಿನಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಈಗ ಒಂದು ಕೋಟಿ ಪಡೆಯುವ ಮೂಲಕ ಮತ್ತೊಮ್ಮೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಗಂಟಿಕೆ ತಕ್ಕಂತೆ ಸಿನಿಮಾ ತಾರೆಗಳ ನಂಟು

  ಗಂಟಿಕೆ ತಕ್ಕಂತೆ ಸಿನಿಮಾ ತಾರೆಗಳ ನಂಟು

  ಸಿನಿಮಾ ತಾರೆಗಳಿಗೂ ಜಾಹೀರಾತು ಒಪ್ಪಂದಗಳಿಗೂ ಅವಿನಾಭಾವ ಸಂಬಂಧ. ಇದೊಂದು ತರಹ ಗಂಟಿಗೆ ತಕ್ಕಂತೆ ನಂಟು. ಕಿರುತೆರೆ ವೀಕ್ಷಕರಿಗೂ ಹತ್ತಿರವಾಗಬಹುದು ಎಂಬ ಲೆಕ್ಕಾಚಾರ ಕೆಲವರದು. ಆದರೆ ನಯನತಾರಾ ಮಾತ್ರ ಇದರಿಂದ ಸ್ವಲ್ಪ ದೂರ.

  ಉಳಿದವರು ಜಾಹೀರಾತು ಸಿಕ್ಕರೆ ಸಾಕು ಎನ್ನುತ್ತಾರೆ

  ಉಳಿದವರು ಜಾಹೀರಾತು ಸಿಕ್ಕರೆ ಸಾಕು ಎನ್ನುತ್ತಾರೆ

  ನಯನತಾರಾ ಸಹವರ್ತಿಗಳಾದ ಅಸಿನ್, ತ್ರಿಷಾ, ಅನುಷ್ಕಾ ಶೆಟ್ಟಿ, ಕಾಜಲ್ ಅಗರವಾಲ್ ಸಾಕಷ್ಟು ಉತ್ಪನ್ನಗಳಿಗೆ ರಾಯಭಾರಿಗಳಾಗಿದ್ದಾರೆ. ಇವರೆಲ್ಲಾ ಒಂದೊಂದು ಜಾಹೀರಾತಿಗಾಗಿ ರು.15 ರಿಂದ 20 ಲಕ್ಷ ಪಡೆಯುತ್ತಾರಂತೆ.

  ಜಾಹೀರಾತುಗಳಿಂದ ಗಾವುದ ದೂರ

  ಜಾಹೀರಾತುಗಳಿಂದ ಗಾವುದ ದೂರ

  ಇವರೆಲ್ಲರಿಗಿಂತಲೂ ನಯನತಾರಾ ಯಾವುದರಲ್ಲೂ ಕಮ್ಮಿ ಇಲ್ಲ. ಆದರೂ ಜಾಹೀರಾತುಗಳಿಂದ ಮಾತ್ರ ತುಂಬಾ ದೂರ. ಅದೆಷ್ಟೋ ಕಂಪನಿಗಳು ನಯನತಾರಾ ಜಾಹೀರಾತಿಗಾಗಿ ಅಲೆದು ಅಲೆದು ಸುಸ್ತಾದರು. ಆದರೂ ಅವರು ಸಹಿ ಹಾಕಲಿಲ್ಲ.

  ಸುಳ್ಳು ಹೇಳಲು ನನಗಿಷ್ಟವಿಲ್ಲ ಎನ್ನುವ ನಯನಿ

  ಸುಳ್ಳು ಹೇಳಲು ನನಗಿಷ್ಟವಿಲ್ಲ ಎನ್ನುವ ನಯನಿ

  ಆ ಸಾಬೂನನ್ನು ನಾನು ಬಳಸದೆ ಇದ್ದ ಮೇಲೆ ನಾನೇಕೆ ಆ ಜಾಹೀರಾತಿನಲ್ಲಿ ಅಭಿನಯಿಸಲಿ. ಅದು ನನ್ನ ಸೌಂದರ್ಯ ಸಾಬೂನು ಎಂದು ಜನರಿಗೇಕೆ ಸುಳ್ಳು ಹೇಳಲಿ. ಒಂದು ಪೇಯವನ್ನು ನಾನೇ ಕುಡಿಯುವುದಿಲ್ಲ ಎಂದ ಮೇಲೆ ಅದು ನನ್ನ ಸೀಕ್ರೆಟ್ ಆಫ್ ಎನರ್ಜಿ ಎಂದೇಕೆ ಹೇಳಲಿ ಎನ್ನುತ್ತಾರೆ ನಯನತಾರಾ.

  ಎಸ್ ಎಂದರೆ ಕಂಪನಿಗಳು ಕ್ಯೂ ನಿಲ್ಲುತ್ತವೆ

  ಎಸ್ ಎಂದರೆ ಕಂಪನಿಗಳು ಕ್ಯೂ ನಿಲ್ಲುತ್ತವೆ

  ಒಂದು ವೇಳೆ ನಾನು ಜಾಹೀರಾತುಗಳಿಗೆ ಎಸ್ ಎಂದರೆ ಕಂಪನಿಗಳು ನಮ್ಮ ಮನೆ ಮುಂದೆ ಕ್ಯೂ ನಿಲ್ಲುತ್ತವೆ. ಆದರೆ ನಾನೇ ಬಳಸದ ಉತ್ಪನ್ನಗಳ ಜಾಹೀರಾತುಗಳಲ್ಲಿ ನಾನೇಕೆ ಅಭಿನಯಿಸಲಿ ಎಂಬುದು ನಯನಿ ವಾದ.

  English summary
  The latest buzz is that actress Nayantara has been offered a whopping Rs 1 crore to be the brand ambassador for Srinikethan. Will she accept this deal? According to reports, Nayantara has got a lucrative deal to promote the Kalanikethan group's soon-to-be-launched brand Srinikethan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X