»   » ಭಾರತ್ ಬಂದ್ ಪರಿಣಾಮ : 'ನೀರ್ ದೋಸೆ' ಚಿತ್ರಕ್ಕೆ ಲಾಭ.!

ಭಾರತ್ ಬಂದ್ ಪರಿಣಾಮ : 'ನೀರ್ ದೋಸೆ' ಚಿತ್ರಕ್ಕೆ ಲಾಭ.!

Posted By:
Subscribe to Filmibeat Kannada

ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಕಾರ್ಮಿಕ ಸಂಘಟನೆಗಳು ಇಂದು 'ಭಾರತ್ ಬಂದ್'ಗೆ ಕರೆ ನೀಡಿದೆ. 'ಭಾರತ್ ಬಂದ್' ನಿಂದಾಗಿ ಇಂದು ಬಿಡುಗಡೆ ಆಗಿರುವ 'ನೀರ್ ದೋಸೆ' ಚಿತ್ರಕ್ಕೆ ಭಾರಿ ಹೊಡೆತ ಬೀಳಬಹುದು ಎಂಬ ಆತಂಕ ಸೃಷ್ಟಿ ಆಗಿತ್ತು.

ಏನೇ ಆದರೂ, 'ನೀರ್ ದೋಸೆ' ಚಿತ್ರ ಬಿಡುಗಡೆ ಸೆಪ್ಟೆಂಬರ್ 2 ರಂದೇ ಅಂತ ಚಿತ್ರತಂಡ ನಿರ್ಧರಿಸಿತ್ತು. ಅವರ ನಿರ್ಧಾರಕ್ಕೆ ಉತ್ತಮ ಪ್ರತಿಫಲ ಸಿಕ್ಕಿದೆ.


'ಭಾರತ್ ಬಂದ್' ಇದ್ದರೂ, 'ನೀರ್ ದೋಸೆ' ಪ್ರದರ್ಶನವಾಗುತ್ತಿರುವ ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳು ಸಂಪೂರ್ಣ ಭರ್ತಿ ಆಗಿವೆ. ಅಚ್ಚರಿ ಅದರೂ, ಇದೇ ಸತ್ಯ. ಮುಂದೆ ಓದಿ....


ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ

ಬೆಂಗಳೂರಿನ ಕೆ.ಜಿ.ರೋಡ್ ಬಳಿ ಇರುವ ಮೇನಕಾ, ಮಾಗಡಿ ರೋಡ್ ಬಳಿ ಇರುವ ಪ್ರಸನ್ನ ಸೇರಿದಂತೆ ಸಿಲಿಕಾನ್ ಸಿಟಿಯ ಹಲವು ಥಿಯೇಟರ್ ಗಳಲ್ಲಿ 'ನೀರ್ ದೋಸೆ' ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.


ಸಾರಿಗೆ ಇಲ್ಲ.! ಆದರೂ ಚಿತ್ರ ನೋಡ್ಬೇಕಲ್ಲ.!

ಭಾರತ್ ಬಂದ್ ಗೆ ಸಾರಿಗೆ ಸಂಸ್ಥೆ ಕೂಡ ಬೆಂಬಲ ನೀಡಿರುವ ಕಾರಣ ಇಂದು ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ ಬಸ್ ಗಳು ಬೀದಿಗೆ ಇಳಿದಿಲ್ಲ. ಆಟೋ ಸಂಖ್ಯೆ ಬೆರಳೆಣಿಕೆಯಷ್ಟು. ಓಲಾ, ಊಬರ್ ಕೂಡ ಇಂದು ಬಂದ್ ಆಗಿವೆ. ಹೀಗಿದ್ದರೂ, ಥಿಯೇಟರ್ ಮಾತ್ರ ಫುಲ್ ಆಗಿವೆ ಅಂದ್ರೆ ನೀವೇ ಊಹಿಸಿ 'ನೀರ್ ದೋಸೆ' ರುಚಿ ಹೇಗಿರಬಹುದು ಅಂತ.


ಮಲ್ಟಿಪ್ಲೆಕ್ಸ್ ನಲ್ಲೂ ಹೌಸ್ ಫುಲ್

ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ ಮಾತ್ರ ಅಲ್ಲ. ಮಲ್ಟಿಪ್ಲೆಕ್ಸ್ ನಲ್ಲೂ 'ನೀರ್ ದೋಸೆ' ಚಿತ್ರಕ್ಕೆ ಹೌಸ್ ಫುಲ್ ಬೋರ್ಡ್ ಬಿದ್ದಿದೆ.


ಸಾಲು ಸಾಲು ರಜೆ

ಭಾರತ್ ಬಂದ್, ವೀಕೆಂಡ್ ಮತ್ತು ಗೌರಿ-ಗಣೇಶ್ ಹಬ್ಬ ಸಾಲಾಗಿ ಬಂದಿರುವುದು 'ನೀರ್ ದೋಸೆ' ಚಿತ್ರ ಲಾಭದಾಯಕ.


ಜಗ್ಗೇಶ್ ಥ್ಯಾಂಕ್ಸ್ ಹೇಳಿದ್ದಾರೆ

ಭಾರತ್ ಬಂದ್ ಇದ್ದರೂ ಲೆಕ್ಕಿಸದೆ, 'ನೀರ್ ದೋಸೆ' ಚಿತ್ರ ನೋಡಿದ ಎಲ್ಲರೂ ನಟ ಜಗ್ಗೇಶ್ ಧನ್ಯವಾದ ಸಲ್ಲಿಸಿದ್ದಾರೆ.


'ನೀರ್ ದೋಸೆ' ವಿಮರ್ಶೆ ಓದಿ....

ಇಂದು ಬಿಡುಗಡೆ ಆಗಿರುವ 'ನೀರ್ ದೋಸೆ' ಚಿತ್ರ ಹೇಗಿದೆ ಅಂತ ತಿಳ್ಕೋಬೇಕಾ.? ಹಾಗಾದರೆ ಈ ಲಿಂಕ್ ಕ್ಲಿಕ್ ಮಾಡಿ...ನಾವು ನೀಡಿರುವ ವಿಮರ್ಶೆ ಇಲ್ಲಿದೆ....['ನೀರ್ ದೋಸೆ'ಯಲ್ಲಿ ಎಂತೆಂಥಾ ಡೈಲಾಗುಗಳಿವೆ ಗೊತ್ತಾ?]


English summary
Vijay Prasad Directorial Haripriya and Jaggesh starrer Kannada Movie 'Neer Dose' has hit the screens today (September 2nd). Inspite of Bharath Bandh, 'Neer Dose' is running housefull show all over.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada