twitter
    For Quick Alerts
    ALLOW NOTIFICATIONS  
    For Daily Alerts

    ಸರ್ಕಾರಿ ಶಾಲೆ ಉಳಿಸಿ ಅಭಿಯಾನಕ್ಕೆ ಬೆಂಬಲ: ಶಾಲೆಗೆ ಬಣ್ಣ ಬಳಿದ ನಟಿ ನೀತು

    By ರಾಮನಗರ ಪ್ರತಿನಿಧಿ
    |

    ಸರ್ಕಾರಿ ಶಾಲೆ ಉಳಿಸಿ ಅಭಿಯಾನಕ್ಕೆ ಚಿತ್ರ ನಟಿ ನೀತು ಕೈಜೋಡಿಸಿದ್ದು, ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ಸರ್ಕಾರಿ ಶಾಲೆಗೆ ಸ್ವತಃ ಬಣ್ಣ ಬಳಿಯುವ ಮೂಲಕ ಸರ್ಕಾರಿ ಶಾಲೆ ಉಳಿಸಿ ಎಂಬ ಸಂದೇಶ ಸಾರಿದರು‌.

    ಕನ್ನಡ ಮನಸುಗಳ ಪ್ರತಿಷ್ಠಾನ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯಾದ್ಯಂತ 9 ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಬಳಿದು, ಶಾಲೆಗಳಿಗೆ ಅಗತ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಶಾಲೆಗಳಿಗೆ ಹೊಸ ಮೆರಗನ್ನು ತಂದು ಸರ್ಕಾರಿ ಶಾಲೆ ಉಳಿಸಿ ಅಭಿಯಾನ ಮುಂದುವರೆಸಿದ್ದಾರೆ.

    ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ತವರು ಮಾಗಡಿಯಲ್ಲಿ ಇಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ 13 ಕೊಠಡಿಗಳಿಗೆ ಕನ್ನಡ ಮನಸ್ಸುಗಳ ಪ್ರತಿಷ್ಠಾನದ ಸದಸ್ಯರೊಂದಿಗೆ ಚಿತ್ರ ನಟಿ ನೀತು ಬಣ್ಣ ಬಳಿದು ಅಂದಗೊಳಿಸಿದರು.

    ಇನ್ನೂ ಕನ್ನಡ ಪ್ರತಿಷ್ಠಾನ ಹಮ್ಮಿಕೊಂಡಿರುವ ಅಭಿಯಾನಕ್ಕೆ ಹೂವಿನಹೊಳೆ ಪ್ರತಿಷ್ಠಾನ ಹಾಗೂ ರಿವರ್ಬೆಡ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸೂರ್ಯ ಫೌಂಡೇಶನ್ ಇವರುಗಳ ಸಹಕಾರದೊಂದಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ದತ್ತು ತೆಗೆದುಕೊಂಡು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗಿದ್ದಾರೆ.

    ನಿರ್ಲಕ್ಷ್ಯಕ್ಕೆ ಒಳಗಾದ ಸರ್ಕಾರಿ ಶಾಲೆಗಳನ್ನು ಗುರುತಿಸಿ ಸುಮಾರು ಐದಾರು ಲಕ್ಷ ರುಪಾಯಿ ವೆಚ್ಚದಲ್ಲಿ ಸುಣ್ಣ-ಬಣ್ಣ, ಅಗತ್ಯವಿರುವ ಎಲ್ಲ ಮೂಲಭೂತ ಸೌಕರ್ಯ ಸೇರಿದಂತೆ ಅಗತ್ಯ ವಸ್ತುಗಳನ್ನು ಕನ್ನಡ ಮನಸ್ಸುಗಳ ಪ್ರತಿಷ್ಠಾನ ಹಾಗೂ ಮಾಗಡಿ ವಿದ್ಯಾರ್ಥಿ ವೇದಿಕೆ ಸಹಕಾರದೊಂದಿಗೆ ಅನುಷ್ಠಾನಗೊಳಿಸಿದ್ದಾರೆ.

    ಮುಂದೆಯೂ ಕಾರ್ಯಕ್ರಮದಲ್ಲಿ ಭಾಗವಹಿಸುವೆ: ನೀತು

    ಮುಂದೆಯೂ ಕಾರ್ಯಕ್ರಮದಲ್ಲಿ ಭಾಗವಹಿಸುವೆ: ನೀತು

    ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರ ನಟಿ ನೀತು, ''ಕನ್ನಡ ಮನಸ್ಸುಗಳ ಪ್ರತಿಷ್ಠಾನ ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಂಡಿದೆ. ಈಗಾಗಲೇ 9 ಸರ್ಕಾರಿ ಶಾಲೆಗಳನ್ನು ಗುರುತಿಸಿ ಶಾಲೆ ಅಗತ್ಯ ಮೂಲಸೌಕರ್ಯ ಇದಗಿಸಿ ಸರ್ಕಾರಿ ಶಾಲೆ ಉಳಿವಿಗೆ ಶ್ರಮಿಸಿದ್ದಾರೆ. ಸರ್ಕಾರಿ ಶಾಲೆ ಉಳಿಸಿ ಅಭಿಯಾನದಲ್ಲಿ ಪಾಲ್ಗೊಂಡು ಶಾಲೆಯ ಕೊಠಡಿಗೆ ಬಣ್ಣ ಬಳಿದೆ ನನಗೆ ತುಂಬಾ ಖುಷಿಯಾಗಿದೆ ಮುಂದೆಯೂ ಕನ್ನಡ ಮಸಸ್ಸುಗಳು ಹಮ್ಮಿಕೊಳ್ಳುವ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ'' ಎಂದು ತಿಳಿಸಿದರು.

    ಈ ಮುಂಚಿನ ಕಾರ್ಯಕ್ರಮದಲ್ಲಿ ಭಾಗವಸದೇ ಇದ್ದದ್ದಕ್ಕೆ ಬೇಸರ

    ಈ ಮುಂಚಿನ ಕಾರ್ಯಕ್ರಮದಲ್ಲಿ ಭಾಗವಸದೇ ಇದ್ದದ್ದಕ್ಕೆ ಬೇಸರ

    ''ಸರ್ಕಾರಿ ಶಾಲೆ ಉಳಿಸಿ ಅಭಿಯಾನದಲ್ಲಿ ಭಾಗವಹಿಸುವಂತೆ ‌ಸ್ನೇಹಿತರು ಮನವಿ ಮಾಡಿದ್ದರು ಅದರೆ ನಾನಾ ಕಾರಣಗಳಿಂದ ಭಾಗವಹಿಸಲು ಸಾದ್ಯವಾಗಿರಲಿಲ್ಲ ಇಂದು ಬೆಂಗಳೂರು ಸಮೀಪವೇ ಕಾರ್ಯಕ್ರಮ ಹಮ್ಮಿಕೊಂಡ ಕಾರಣ ಅಭಿಯಾನದಲ್ಲಿ ಪಾಲ್ಗೊಂಡೆ. ಸಿಗಂದೂರು, ಕಾಸರಗೊಡು ಸೇರಿದಂತೆ ಕಳೆದ 9 ಶಾಲೆಗಳ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇದ್ದದ್ದಕ್ಕೆ ಬೇಸರವಾಗಿದೆ'' ಎಂದರು.

    ಸರ್ಕಾರಿ ಶಾಲೆಗಳನ್ನು ಉಳಿಸುವುದು ಸರ್ಕಾರಗಳ ಕರ್ತವ್ಯ: ನೀತು

    ಸರ್ಕಾರಿ ಶಾಲೆಗಳನ್ನು ಉಳಿಸುವುದು ಸರ್ಕಾರಗಳ ಕರ್ತವ್ಯ: ನೀತು

    ''ಸರ್ಕಾರಿ ಶಾಲೆಗಳನ್ನು ಉಳಿಸುವುದು ಸರ್ಕಾರಗಳ ಕರ್ತವ್ಯ ಅದನ್ನು ಸರ್ಕಾರಗಳು ಯಾರಿಂದಲೂ ಹೇಳಿಸಿಕೊಳ್ಳಬಾರದು‌. ಅಧಿಕಾರದಲ್ಲಿ ಯಾವುದೇ ಸರ್ಕಾರವಿರಲಿ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದರೆ ಮಕ್ಕಳು ಸರ್ಕಾರಿ ಶಾಲೆಗೆ ಬರುತ್ತಾರೆ. ಖಾಸಗಿ ಶಾಲೆಗಳ ಅಭಿವೃದ್ಧಿಯನ್ನು ಅಡಳಿತ ಮಂಡಳಿ ಮಾಡುತ್ತದೆ, ಸರ್ಕಾರಿ ಶಾಲೆಗಳು ಅಭಿವೃದ್ಧಿಯಲ್ಲಿ ಕಡೆಗಣನೆಯಾಗುತ್ತವೆ. ಯಾವುದೇ ಕಾರಣಕ್ಕೆ ಖಾಸಗಿ ಶಾಲೆ ಸರ್ಕಾರಿ ಶಾಲೆ ತಾರತಮ್ಯ ಆಗಬಾರದು, ಸರ್ಕಾರಗಳು ಖಾಸಗಿ ಶಾಲೆಗೆ ಸರಿಸಮವಾಗಿ ಸರ್ಕಾರಿ ಶಾಲೆಯಗಳನ್ನು ಅಭಿವೃದ್ಧಿ ಪಡಿಸಬೇಕು'' ಎಂದರು.

    ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಡುವುದು ಬಿಡಿ: ನೀತು

    ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಡುವುದು ಬಿಡಿ: ನೀತು

    ''ಇಂದಿನ ಯುವ ಜನಾಂಗ ಫೇಸ್ ಬುಕ್, ವಾಟ್ಸಪ್, ಟ್ವಿಟರ್, ಸರ್ಕಾರಗಳನ್ನು ಟೀಕಿಸುತ್ತಾ ಪರಸ್ಪರ ಕಿತ್ತಾಡುವುದನ್ನು ಬಿಡಿ, ಸರ್ಕಾರ ತನ್ನ ಜವಾಬ್ದಾರಿ ತಾನು ಮಾಡುತ್ತಾದೆ. ಯುವಕರು ತಳ ಮಟ್ಟಕ್ಕೆ ಬಂದು ತಮ್ಮ ಕೈಲಾದ ಸೇವೆಯನ್ನು ಮಾಡಿ, ಸಮಾಜಕ್ಕೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸುವಂತೆ ಯುವ ಜನಾಂಗಕ್ಕೆ ಚಿತ್ರ ನಟಿ ನೀತು ಕರೆ ನೀಡಿದರು. ಸರ್ಕಾರಿ ಶಾಲೆ ಉಳಿಸಿ ಅಭಿಯಾನ ಹಮ್ಮಿಕೊಂಡಿರುವ ಕನ್ನಡ ಪ್ರತಿಷ್ಠಾನದ ಪವನ್, ಚಿನ್ಮಯಿ , ವಿದ್ಯಾರ್ಥಿ ಮಿತ್ರ ಟ್ರಸ್ಟ್ ಕಿರಣ್ ಮತ್ತು ಸ್ವಯಂ ಸೇವಕರಾಗಿ ಪಾಲ್ಗೊಂಡಿರುವ ಎಲ್ಲಾ ಸದಸ್ಯರಿಗೆ ಚಿತ್ರ ನಟಿ ಅಭಿನಂದನೆ ಸಲ್ಲಿಸಿದರು.

    English summary
    Actress Neethu Shetty participated in save government school program organized in Ramanagara. She painted a government school.
    Tuesday, November 30, 2021, 10:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X