»   » ಜೀತು ಚಿತ್ರದಲ್ಲಿ ನೀತೂ ಇಡ್ಲಿ ವಡೆ ಪೂರಿ ದೋಸೆ

ಜೀತು ಚಿತ್ರದಲ್ಲಿ ನೀತೂ ಇಡ್ಲಿ ವಡೆ ಪೂರಿ ದೋಸೆ

Posted By:
Subscribe to Filmibeat Kannada

ಗ್ಲಾಮರ್ ಡಾಲ್ ನೀತೂ ಮತ್ತೊಮ್ಮೆ ಪಡ್ಡೆಗಳ ನಿದ್ದೆಗೆಡಿಸಲು ಬರುತ್ತಿದ್ದಾರೆ. ಈ ಹಿಂದೆ ಅವರು ಬೆಂಗಳೂರು ಮೆಟ್ರೋ ಚಿತ್ರದಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕಿದ್ದರು. ಈ ಬಾರಿ ಜೀತು ಚಿತ್ರದಲ್ಲಿ ನೀತೂ ಐಟಂ ಹಾಡಿನಲ್ಲಿ ಜೀಕಾಡಿದ್ದಾರೆ.

ವಿಕಾಸ್ ವಸಿಷ್ಠ ಸಂಗೀತ ಹಾಗೂ ರಚಿಸಿರುವ "ಇಡ್ಲಿ ವಡೆ ಪೂರಿ ದೋಸೆ ಅಕ್ಕಾ ನಿನ್ನ ಮನೆ ತೋರ್ಸೆ.." ಎಂಬ ಐಟಂ ಹಾಡಿಗೆ ಅವರು ಕುಣಿದಿದ್ದಾರೆ. ಇದೊಂದು ಟಾಪಾಂಗುಚಿ ಸಾಂಗ್, ಪ್ಲೇಫುಲ್ ಆಗಿರುವ ಹಾಡು, ಕ್ಯೂಟ್ ಆಗಿರುವ ಹಾಡು ನೀವು ಬೇಕಿದ್ರೆ ಐಟಂ ಸಾಂಗ್ ಅಂತ ಬೇಕಿದ್ರೂ ಕರೆಯಬಹುದು ಅಂತಾರೆ ನೀತೂ.


ಚಿತ್ರದ ನಿರ್ದೇಶಕ ಕಮ್ ನಟ ಎಡ್ವಿನ್. ಪುನೀತ್ ರಾಜ್ ಕುಮಾರ್ ಅಭಿಮಾನಿ ಆಗಿರುವ ಅವರು 'ಅಣ್ಣಾಬಾಂಡ್' ಪೋಸ್ಟರ್ ಮುಂದೆ ಈ ಹಾಡನ್ನು ಚಿತ್ರೀಕರಿಸಿದ್ದಾರೆ. ಶ್ರೀ ಶಿವಾಲಯ ಮೂವೀ ಮೇಕರ್ಸ್ ಲಾಂಛನದಡಿಯಲ್ಲಿ ಸರಿತಾ ಮೈಕಲ್ ನಿರ್ಮಿಸುತ್ತಿರುವ 'ಜೀತು' ಚಿತ್ರವು ಇದೀಗ ತೆರೆಗೆ ಸಿದ್ಧವಾಗಿದೆ.

ಚಿತ್ರವು ತಮಿಳು ಹಾಗೂ ತೆಲುಗು ಭಾಷೆಗೂ ಡಬ್ ಆಗಲಿದೆ ಎಂದು ತಿಳಿಸಿರುವ ನಟ ನಿರ್ದೇಶಕರ ಎಡ್ವಿನ್ ಚಿತ್ರವು ಮಾಸ್ ಪ್ರೇಕ್ಷಕರನ್ನು ರಂಜಿಸಲಿದೆ ಎಂದಿದ್ದಾರೆ. ಈಗಾಗಲೇ 3 ಚಿತ್ರಗಳಿಗೆ ಸಹಿ ಮಾಡಿರುವ ನಟ ಎಡ್ವಿನ್ ಎರಡನೇ ಚಿತ್ರ 'ಜೀತು' ಬಿಡುಗಡೆಯಂದೇ ಸೆಟ್ಟೇರಲಿದೆ.

ಚಿತ್ರಕ್ಕೆ ಸೆಲ್ವಂ ಛಾಯಾಗ್ರಣ, ವಿಕಾಸ್ ವಸಿಷ್ಠ ಸಂಗೀತ, ಥ್ರಿಲ್ಲರ್ ಮಂಜು, ಸ್ಟಡಂಟ್ ಶಿವು ಸಾಹಸ, ಸುದರ್ಶನ್, ದುರ್ಗಾ ನಿರ್ದೇಶನ ಸಹಕಾರ ಸುರೇಶ್ ಸಂಕಲನವಿದ್ದು, ಚಿತ್ರದ ಕಥೆ ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಎಡ್ವಿನ್. ತಾರಾಗಣದಲ್ಲಿ ಎಡ್ವಿನ್, ರಚನಾಗೌಡ, ತಬಲನಾಣಿ, ಬ್ಯಾಂಕ್ ಜನಾರ್ಧನ್ ಮುಂತಾದವರಿದ್ದು. (ಒನ್ಇಂಡಿಯಾ ಕನ್ನಡ)

English summary
Actress Neetu Item Song In New Kannada Film "Jeetu" directed by Edwin. Music Direction by Vikas Vasishta. The movie is slated for release in July, 2013. Rachana Gowda is the female lead of the film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada