India
  For Quick Alerts
  ALLOW NOTIFICATIONS  
  For Daily Alerts

  ಚೆನ್ನಾಗಿ ಕುಡಿದು ಸಪ್ತಪದಿ ತುಳಿದಿದ್ದರಂತೆ ನೀತು ಕಪೂರ್!

  |

  ಮದುವೆ ಎಂದರೆ ಪವಿತ್ರ ಬಂಧ, ಮಾಂಗಲ್ಯ ಧಾರಣೆ, ಅಕ್ಷತೆ, ಸಪ್ತಪದಿ ಇದಕ್ಕೆಲ್ಲ ಬಹಳ ಮೌಲ್ಯ ನೀಡಲಾಗುತ್ತದೆ. ಆದರೆ ಹಿರಿಯ ನಟಿಯೊಬ್ಬರು ತಾವು ತಮ್ಮ ಮದುವೆ ದಿನವೇ ಚೆನ್ನಾಗಿ ಕುಡಿತು ತಾಳಿ ಕಟ್ಟಿಸಿಕೊಂಡಿದ್ದಾಗಿ ಹೇಳಿದ್ದಾರೆ.

  ಈ ನಟಿ ಮತ್ಯಾರೂ ಅಲ್ಲ, ಖ್ಯಾತ ಬಾಲಿವುಡ್ ನಟ ರಿಷಿ ಕಪೂರ್‌ರ ಪತ್ನಿ, ರಣ್ಬೀರ್ ಕಪೂರ್‌ರ ತಾಯಿ ನೀತು ಕಪೂರ್. ರಿಷಿ ಕಪೂರ್ ಅಗಲಿದ ಬಳಿಕ ಸಾಲು-ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ನಟಿ ನೀತು ಕಪೂರ್. ಇದೀಗ ಜುಗ-ಜುಗ ಜಿಯೋ ಸಿನಿಮಾದಲ್ಲಿ ನಟಿಸಿದ್ದು, ಸಂದರ್ಶನವೊಂದರಲ್ಲಿ ರಿಷಿ ಕಪೂರ್ ಜೊತೆ ತಮ್ಮ ಮದುವೆ ನೆನಪಿಸಿಕೊಂಡಿದ್ದಾರೆ.

  1980ರಲ್ಲಿ ನೀತು ಕಪೂರ್ ಹಾಗೂ ರಿಷಿ ಕಪೂರ್ ವಿವಾಹವಾಯಿತು. ಸತತ 20 ದಿನಗಳ ಕಾಲ ವಿವಾಹ ಕಾರ್ಯಕ್ರಮಗಳು ನಡೆದಿದ್ದವಂತೆ. ರಿಷಿ ಹಾಗೂ ನೀತು ಇಬ್ಬರೂ ಆಗ ದೊಡ್ಡ ಸ್ಟಾರ್‌ಗಳಾದ್ದರಿಂದ ಅವರ ವಿವಾಹವೂ ಭಾರಿ ಅದ್ಧೂರಿಯಾಗಿಯೇ ನಡೆದಿತ್ತು.

  ಆಗಿನ ಕಾಲಕ್ಕೆ ಭಾರಿ ದೊಡ್ಡ ಮದುವೆ

  ಆಗಿನ ಕಾಲಕ್ಕೆ ಭಾರಿ ದೊಡ್ಡ ಮದುವೆ

  ನೀತು ಹಾಗೂ ರಿಷಿ ಕಪೂರ್‌ರ ಮದುವೆ ಆಗಿನ ಕಾಲಕ್ಕೆ ಬಾಲಿವುಡ್‌ನ ಅತ್ಯಂತ ದುಬಾರಿ ಹಾಗೂ ಅದ್ಧೂರಿ ಮದುವೆಯಾಗಿತ್ತು. ತಮ್ಮ ಮದುವೆ ದಿನವನ್ನು ನೆನಪು ಮಾಡಿಕೊಂಡಿರುವ ನೀತು ಕಪೂರ್, ನಮ್ಮ ಮದುವೆಯಲ್ಲಿ ಜನ ಸಾಗರವೇ ನೆರೆದಿತ್ತು. ಅದೆಷ್ಟು ಜನರಿದ್ದರಂತೆ ಅವರನ್ನು ನೋಡಿ ನಾನು ಪ್ರಜ್ಞೆ ತಪ್ಪಿ ಬಿದ್ದುಬಿಟ್ಟೆ. ಅವರೊಟ್ಟಿಗೆಲ್ಲ ಫೋಟೊಕ್ಕೆ ಫೋಸ್ ನೀಡುತ್ತಾ ನೀಡುತ್ತಾ ರಿಷಿ ಕಪೂರ್ ಸಹ ಸುಸ್ತಾಗಿ ಕುಸಿದು ಬಿಟ್ಟಿದ್ದರು ಎಂದಿದ್ದಾರೆ ನೀತು.

  ಉಡುಗೊರೆ ಡಬ್ಬಗಳಲ್ಲಿ ಕಲ್ಲು-ಮಣ್ಣು, ಚಪ್ಪಲಿ

  ಉಡುಗೊರೆ ಡಬ್ಬಗಳಲ್ಲಿ ಕಲ್ಲು-ಮಣ್ಣು, ಚಪ್ಪಲಿ

  ನಮ್ಮ ಮದುವೆಗೆ ಆಹ್ವಾನವಿಲ್ಲದೆ ಬಂದ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗಿತ್ತು. ಭಾರಿ ದೊಡ್ಡ ವಿವಾಹವಾದ್ದರಿಂದ ಸಾರ್ವಜನಿಕರೆಲ್ಲ ಮದುವೆಗೆ ಆಗಮಿಸಿದ್ದರು. ಒಳ್ಳೆಯ ಡ್ರೆಸ್ ಧರಿಸಿ ಗಿಫ್ಟ್ ಪ್ಯಾಕೆಟ್ ಹಿಡಿದುಕೊಂಡು ಸಿಕ್ಕ-ಸಿಕ್ಕವರೆಲ್ಲ ಮದುವೆಗೆ ಬಂದು ಬಿಟ್ಟಿದ್ದರು. ನಮ್ಮ ಮದುವೆಗೆ ನೀಡಲಾದ ಉಡುಗೊರೆ ಡಬ್ಬಗಳಲ್ಲಿ ಕಲ್ಲುಗಳು, ಮಣ್ಣು, ಹರಿದ ಚಪ್ಪಲಿಗಳು ಸಹ ಇದ್ದವು. ಎಲ್ಲರಿಗೂ ಆ ಮದುವೆಯಲ್ಲಿ ಪಾಲ್ಗೊಳ್ಳುವ ಆಸೆಯಾಗಿತ್ತು ಹಾಗಾಗಿ ಎಲ್ಲೆಂದಿಲೋ ಜನ ಬಂದಿದ್ದರು ಎಂದರು ನೀತು.

  ಕುಡಿದು ಸಪ್ತಪದಿ ತುಳಿದಿದ್ದ ನೀತು-ರಿಷಿ

  ಕುಡಿದು ಸಪ್ತಪದಿ ತುಳಿದಿದ್ದ ನೀತು-ರಿಷಿ

  ಮದುವೆ ದಿನವಂತೂ ನಾನೂ ಹಾಗೂ ರಿಷಿ ಸುಸ್ತಾಗಿ ಹೋಗಿದ್ದೆವು. ನಮ್ಮನ್ನು ಸ್ಟೆಡಿಯಾಗಿಟ್ಟುಕೊಳ್ಳಲು ಬ್ರಾಂಡಿ ಕುಡಿದಿದ್ದೆವು. ರಿಷಿ ಕಪೂರ್ ಅಂತೂ ವಿಸ್ಕಿ, ಬ್ರ್ಯಾಂಡಿ ಎಲ್ಲ ಕುಡಿದಿದ್ದರೂ ನಾನೂ ಅಷ್ಟೆ ಒಂದರ ಹಿಂದೊಂದು ಗ್ಲಾಸು ಬ್ರ್ಯಾಂಡಿ ಹೀರಿದ್ದೆ. ಸಪ್ತಪದಿ ತುಳಿಯುವ ವೇಳೆಗೆ ನಾನು ಚೆನ್ನಾಗಿ ಕುಡಿದಿದ್ದೆ. ಆದರೂ ಹೇಗೋ ಮಾಡಿ ಸಪ್ತಪದಿ ಮುಗಿಸಿದೆವು ಎಂದಿದ್ದಾರೆ ನಟಿ ನೀತು ಕಪೂರ್.

  2020 ರಲ್ಲಿ ರಿಷಿ ಕಪೂರ್ ನಿಧನ ಹೊಂದಿದರು

  2020 ರಲ್ಲಿ ರಿಷಿ ಕಪೂರ್ ನಿಧನ ಹೊಂದಿದರು

  ನೀತು ಕಪೂರ್ ಹಾಗೂ ರಿಷಿ ಕಪೂರ್ 1980 ರಲ್ಲಿ ವಿವಾಹವಾದರು. ಸತತ 40 ವರ್ಷ ಅವರು ಒಟ್ಟಿಗೆ ಸಂಸಾರ ಮಾಡಿದರು. ಕೊನೆಗೆ 2020 ರಲ್ಲಿ ಕೋವಿಡ್‌ನಿಂದಾಗಿ ಪತಿ ರಿಷಿ ಕಪೂರ್ ನಿಧನ ಹೊಂದಿದರು. ಈ ದಂಪತಿಗೆ ಇಬ್ಬರು ಮಕ್ಕಳು. ಸ್ಟಾರ್ ನಟ ರಣ್ಬೀರ್ ಕಪೂರ್ ಮಗನಾದರೆ ರಿಧಿಮಾ ಕಪೂರ್ ಮಗಳಾಗಿದ್ದಾಳೆ. ನೀತು ಕಪೂರ್ ಇದೀಗ ತಮ್ಮನ್ನು ಮತ್ತೆ ನಟನೆಗೆ ತೊಡಗಿಸಿಕೊಂಡಿದ್ದು, ಒಂದರ ಹಿಂದೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  Actress Neetu Kapoor remembered her and Rishi Kapoor's marriage. She siad she was drunk while taking phere.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X