For Quick Alerts
  ALLOW NOTIFICATIONS  
  For Daily Alerts

  ಈ ಬಾಲಿವುಡ್ ನಟ-ನಟಿಯರ ಸಿನಿಮಾಗಳನ್ನು ನೋಡದಂತೆ ನೆಟ್ಟಿಗರ ಕರೆ

  |

  ಭಾರತದಾದ್ಯಂತ ಕೊರೊನಾ ತಾಂಡವವಾಡುತ್ತಿದೆ. ಆಮ್ಲಜನಕ ಸಿಗದೆ, ಆಸ್ಪತ್ರೆ ಬೆಡ್‌ಗಳು ಸಿಗದೆ ಜನ ಬೀದಿಯಲ್ಲಿ ಹೆಣವಾಗುತ್ತಿರುವ ಚಿತ್ರಗಳು, ವಿಡಿಯೋಗಳು ಮಾಧ್ಯಮಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

  ಹಲವು ರಾಜ್ಯಗಳಲ್ಲಿ ಲಾಕ್‌ಡೌನ್, ಕಟ್ಟುನಿಟ್ಟಿನ ಕರ್ಫ್ಯೂ ಹೇರಲಾಗಿದೆ. ಚಿತ್ರಮಂದಿರಗಳು, ಚಿತ್ರೀಕರಣ ಬಂದ್ ಆಗಿದೆ. ಈ ಸಂಕಷ್ಟದ ಸಮಯದಲ್ಲಿ ಕೆಲವು ಬಾಲಿವುಡ್ ನಟ-ನಟಿಯರು ಮಜಾ ಮಾಡಲು ವಿದೇಶಗಳಿಗೆ ತೆರಳಿದ್ದಾರೆ.

  ಭಾರತದ ಜನ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ, ಸಾರ್ವಜನಿಕ ಜೀವನದಲ್ಲಿರುವ ನಟ-ನಟಿಯರು ಜವಾಬ್ದಾರಿ ಮರೆತು ವಿದೇಶದಲ್ಲಿ ಮಜಾ ಮಾಡಲು ಹೋಗುತ್ತಿರುವುದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.

  ಬಾಲಿವುಡ್ಡಿಗರು ವಿದೇಶಕ್ಕೆ ಹಾರುತ್ತಿರುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿದ್ದು, ಭಾರತದ ಜನ ಸಂಕಷ್ಟದಲ್ಲಿದ್ದಾಗ ವಿದೇಶ ಪ್ರವಾಸದಲ್ಲಿ ಮೋಜು ಮಾಡಿದ ನಟ-ನಟಿಯರ ಸಿನಿಮಾಗಳನ್ನು ನೋಡಬೇಡಿರೆಂದು ನೀಡಿರುವ ಕರೆಗೆ ಹಲವು ಬೆಂಬಲ ಸೂಚಿಸಿದ್ದಾರೆ.

  'ನೀವು ವಿದೇಶಿ ಪ್ರವಾಸಕ್ಕೆ ಲಕ್ಷಾಂತರ ಹಣ ಖರ್ಚು ಮಾಡುವ ಬದಲಿಗೆ ಅದೇ ಹಣವನ್ನು ವೈದ್ಯಕೀಯ ಅವಶ್ಯಕತೆಗಳಿಗೆ ದಾನ ಮಾಡಿ. ಭಾರತದ ಜನರ ಸಂಕಷ್ಟವನ್ನು ನಿರ್ಲಕ್ಷ್ಯ ಮಾಡಿ ವಿದೇಶದಲ್ಲಿ ಮೋಜು ಮಾಡಲು ಹೊರಟ ನಿಮ್ಮ ಸಿನಿಮಾಗಳನ್ನು ಸಹ ನಾವು ನಿರ್ಲಕ್ಷಿಸುತ್ತೇವೆ' ಎಂದು ಹಲವರು ಟ್ವೀಟ್ ಮಾಡಿದ್ದಾರೆ.

  ವಿದೇಶಿ ಪ್ರವಾಸಕ್ಕೆ ಹೋಗಿದ್ದ ರಣಬೀರ್-ಆಲಿಯಾ ನಿನ್ನೆಯಷ್ಟೆ ಮಂಬೈಗೆ ವಾಪಸ್ಸಾಗಿದ್ದಾರೆ. ದಿಶಾ ಪಟಾನಿ, ಜಾಕಿ ಶ್ರಾಫ್, ಸೊಹಾ ಅಲಿ ಖಾನ್, ಜಾಹ್ನವಿ ಕಪೂರ್ ಹಾಗೂ ಇನ್ನೂ ಕೆಲವರು ವಿದೇಶ ಪ್ರವಾಸದಲ್ಲಿದ್ದಾರೆ. ಶಾರುಖ್ ಖಾನ್ ಕುಟುಂಬವೂ ವಿದೇಶಕ್ಕೆ ಹಾರಿದೆ, ಶಾರುಖ್ ಭಾರತದಲ್ಲಿಯೇ ಇದ್ದಾರೆ.

  ಎರಡು ಮಕ್ಕಳಾದ್ಮೇಲೂ ಫಿಟ್ ನೆಸ್ ಗಾಗಿ ಕರೀನಾ ಏನ್ ಮಾಡ್ತಿದ್ದಾರೆ ನೋಡಿ | Filmibeat Kannada

  ಈ ನಡುವೆ, ಬಾಲಿವುಡ್ಡಿಗರ ಮೆಚ್ಚಿನ ಪ್ರವಾಸಿ ತಾಣವಾದ ಮಾಲ್ಡೀವ್ಸ್ ಭಾರತೀಯ ಪ್ರಯಾಣಿಕ ಮೇಲೆ ನಿರ್ಬಂಧ ಹೇರಿದೆ. ಭಾರತದ ಪ್ರವಾಸಿಗರು ಮಾಲ್ಡೀವ್ಸ್ ದ್ವೀಪಗಳಲ್ಲಿ ಉಳಿದುಕೊಳ್ಳುವಂತಿಲ್ಲ ಎಂದಿದೆ. ಹಾಗಾಗಿ ಮಾಲ್ಡೀವ್ಸ್‌ನಲ್ಲಿ ನೆಲೆಸಿರುವ ಭಾರತೀಯ ಸೆಲೆಬ್ರಿಟಿಗಳು ಅನಿವಾರ್ಯವಾಗಿ ಭಾರತಕ್ಕೆ ವಾಪಸ್ಸಾಗಬೇಕಿದೆ.

  English summary
  Netizen blasts Bollywood actors who enjoying holidays in foreign While Indians struggling Due To COVID 19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X