For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್-2'ನಲ್ಲಿ 'ರೈ': #ಬಾಯ್‌ಕಟ್‌ಕೆಜಿಎಫ್ ಟ್ರೆಂಡ್, ಉಳಿದ ಚಿತ್ರಕ್ಕೆ ಏಕಿಲ್ಲ ವಿರೋಧ?

  By ಫಿಲ್ಮ್ ಡೆಸ್ಕ್
  |

  'ಕೆಜಿಎಫ್-2' ಕನ್ನಡ ಚಿತ್ರರಸಿಕರು ಮಾತ್ರವಲ್ಲದೆ ಇಡೀ ಭಾರತೀಯ ಸಿನಿಮಾ ಪ್ರಿಯರು ಕುತೂಹಲದಿಂದ ಕಾಯುತ್ತಿರುವ ಸಿನಿಮಾ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಕೊನೆಯ ಹಂತದ ಚಿತ್ರೀಕರಣ ಬಾಕಿ ಉಳಿಸಿಕೊಂಡಿತ್ತು. ಲಾಕ್ ಡೌನ್ ನಿಂದ ಚಿತ್ರೀಕರಣ ಮುಂದಕ್ಕೆ ಹಾಕಿದ್ದ ಸಿನಿಮಾತಂಡ ಈಗ ಚಿತ್ರೀಕರಣ ಪ್ರಾರಂಭ ಮಾಡಿದೆ.

  Ayogya ಸಿನಿಮಾದ ಕ್ಲೈಮ್ಯಾಕ್ಸ್ ಸನ್ನಿವೇಶದ ತೆರೆ ಹಿಂದಿನ ದೃಶ್ಯ | Ayogya Climax Making | Filmibeat Kannada

  ಮತ್ತೆ ಶೂಟಿಂಗ್ ಪ್ರಾರಂಭಿಸಿರುವ ಖುಷಿಯ ಜೊತೆಗೆ ಕೆಜಿಎಫ್ ತಂಡ ಅಭಿಮಾನಿಗಳಿಗೆ ದೊಡ್ಡ ಸರ್ಪೈಸ್ ನೀಡಿದೆ. ಪ್ರಕಾಶ್ ರೈ ಪಾತ್ರವನ್ನು ಸೆರೆಹಿಡಿಯುವ ಮೂಲಕ ಕೆಜಿಎಫ್ ಪಾರ್ಟ್-2ಗೆ ಪ್ರಕಾಶ್ ರೈ ಎಂಟ್ರಿಯನ್ನು ಬಹಿರಂಗಪಡಿಸಿದೆ. ಈ ವಿಚಾರ ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ವುಡ್ ವರೆಗೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮುಂದೆ ಓದಿ...

  ಕೆಜಿಎಫ್‌ 2: ಅನಂತ್‌ನಾಗ್ ಪಾತ್ರಕ್ಕೆ ಪ್ರಕಾಶ್ ರೈ! ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದೇನು?

  ಅನಂತ್ ನಾಗ್ ಜಾಗಕ್ಕೆ ಪ್ರಕಾಶ್ ರೈ?

  ಅನಂತ್ ನಾಗ್ ಜಾಗಕ್ಕೆ ಪ್ರಕಾಶ್ ರೈ?

  ಕೆಜಿಎಫ್-2ನಲ್ಲಿ ಪ್ರಕಾಶ್ ರೈ ಕಾಣಿಸಿಕೊಳ್ಳುತ್ತಿದ್ದಂತೆ, ಆನಂತ್ ನಾಗ್ ಜಾಗಕ್ಕೆ ಬಂದಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಅನಂತ್ ನಾಗ್ ಸಿನಿಮಾದಿಂದ ಹೊರ ನಡೆದಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳ ಹಿಂದೆ ವೈರಲ್ ಆಗಿತ್ತು. ಹಾಗಾಗಿ ಅವರ ಜಾಗಕ್ಕೆ ಬಹುಭಾಷಾ ನಟ ಪ್ರಕಾಶ್ ರೈ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅನಂತ್ ನಾಗ್ ಸಿನಿಮಾದಿಂದ ಹೊರಹೋಗಿದ್ದಾರೆ ಎನ್ನುವ ಅಸಮಾಧಾನ ಒಂದೆಡೆ ಆದರೆ, ಪ್ರಕಾಶ್ ರೈ ಬಂದಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

  ಬಾಯ್ ಕಟ್ ಕೆಜಿಎಫ್-2 'ಟ್ರೆಂಡ್

  ಬಾಯ್ ಕಟ್ ಕೆಜಿಎಫ್-2 'ಟ್ರೆಂಡ್

  ಪ್ರಕಾಶ್ ರೈ ಎಂಟ್ರಿ ಕೊಡುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಕಾಶ್ ರೈ ಬದಲಿಗೆ ಕನ್ನಡದಲ್ಲಿ ಬೇರೆ ಯಾವ ನಟರಿಲ್ಲವಾ? ಎಂದು ಕೇಳುತ್ತಿದ್ದಾರೆ. ಅನಂತ್ ನಾಗ್ ಇಲ್ಲದೆ ಸಿನಿಮಾ ನೋಡುವುದಿಲ್ಲ, ಬಾಯ್ ಕಟ್ ಕೆಜಿಎಫ್-2 ಎಂದು ಟ್ರೆಂಡ್ ಮಾಡುತ್ತಿದ್ದಾರೆ. ಒಂದು ವೇಳೆ ಈ ಸಿನಿಮಾದಿಂದ ಪ್ರಕಾಶ್ ರೈ ಅವರನ್ನು ಕೈಬಿಡದಿದ್ದರೆ ಸಿನಿಮಾ ನೋಡುವುದಿಲ್ಲ, ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.

  ಬೇರೆ ಸಿನಿಮಾಗಳಿಗೆ ಯಾಕಿಲ್ಲ ವಿರೋಧ?

  ಬೇರೆ ಸಿನಿಮಾಗಳಿಗೆ ಯಾಕಿಲ್ಲ ವಿರೋಧ?

  ಪ್ರಕಾಶ್ ರೈ ಒಬ್ಬ ಅದ್ಭುತ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅವರ ರಾಜಕೀಯ ನಿಲುವುಗಳಿಂದ ನೆಟ್ಟಿಗರು ವಿರೋಧಿಸುತ್ತಿದ್ದಾರೆ ಎನ್ನುವುದೇ ಆದರೆ, ಪ್ರಕಾಶ್ ರೈ ಇತ್ತೀಚಿಗೆ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲವಾ?. ಒಪ್ಪಿಕೊಂಡಿದ್ದಾರೆ, ಕನ್ನಡದ ಸ್ಟಾರ್ ನಟರ ಸಿನಿಮಾಗಳ ಜೊತೆಗೆ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಪ್ರಕಾಶ್ ರೈ ಅಭಿನಯಿಸುತ್ತಿದ್ದಾರೆ.

  ಕೆಜಿಎಫ್ ಚಾಪ್ಟರ್-2 ಅನಂತ್ ನಾಗ್ ಜಾಗಕ್ಕೆ ಪ್ರಕಾಶ್ ರಾಜ್ ಎಂಟ್ರಿ! ಏನಿದು ಸರ್ಪ್ರೈಸ್?

   ಸ್ಟಾರ್ ನಟರ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ ರೈ

  ಸ್ಟಾರ್ ನಟರ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ ರೈ

  ಉದಾಹರಣೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ' ಸಿನಿಮಾದಲ್ಲಿ ಪ್ರಕಾಶ್ ರೈ ಕಾಣಿಸಿಕೊಳ್ಳುತ್ತಿದ್ದಾರೆ. 'ಮಾಯಾಬಜಾರ್' ಚಿತ್ರದಲ್ಲೂ ರೈ ಇದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಬಹುತೇಕ ಸಿನಿಮಾಗಳಲ್ಲಿ ಪ್ರಕಾಶ್ ನಟಿಸಿದ್ದಾರೆ. ರಜನಿಕಾಂತ್ ಅವರ 'ಅಣ್ಣಾತೆ' ಸಿನಿಮಾದಲ್ಲಿಯೂ ಬಣ್ಣಹಚ್ಚಿದ್ದಾರೆ. ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ಪ್ರಕಾಶ್ ಕೈ ಅಭಿನಯಿಸುತ್ತಿದ್ದಾರೆ. ಈ ಎಲ್ಲಾ ಚಿತ್ರಗಳಿಗೂ ಇಲ್ಲದ ವಿರೋಧ ಕೆಜಿಎಫ್-2ಗೆ ಮಾತ್ರ ಯಾಕೆ? ಎಂದು ಇನ್ನೂ ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ.

  ಪ್ರಶಾಂತ್ ನೀಲ್ ಹೇಳುವುದೇನು?

  ಪ್ರಶಾಂತ್ ನೀಲ್ ಹೇಳುವುದೇನು?

  ಅನಂತ್ ನಾಗ್ ಜಾಗಕ್ಕೆ ಪ್ರಕಾಶ್ ರೈ ಎಂಟ್ರಿ ಕೊಟ್ಟಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದ್ದಂತೆ ನಿರ್ದೇಶಕ ಪ್ರಶಾಂತ್ ನೀಲ್ ಪ್ರತಿಕ್ರಿಯೆ ನೀಡಿದ್ದಾರೆ. "ಅನಂತ್ ನಾಗ್ ಪಾತ್ರವನ್ನು ಬದಲಾಯಿಸಿಲ್ಲ. ಅನಂತ್ ನಾಗ್ ಪಾತ್ರವನ್ನು ಪ್ರಕಾಶ್‌ ರೈ ಮಾಡುತ್ತಿಲ್ಲ. ಬದಲಿಗೆ ಪ್ರಕಾಶ್ ರೈ ಅವರದ್ದು ಭಿನ್ನವಾದ ಪಾತ್ರ. ಕೆಜಿಎಫ್ 2 ಸಿನಿಮಾದಲ್ಲಿ ಸೇರಿಕೊಳ್ಳುತ್ತಿರುವ ಹೊಸ ಪಾತ್ರ" ಎಂದಿದ್ದಾರೆ. ಆದರೂ ಅನೇಕರಿಗೆ ಪ್ರಕಾಶ್ ರೈ ನಟಿಸುತ್ತಿರುವುದು ಸಹಿಸಿಕೊಳ್ಳಲು ಆಗುತ್ತಿಲ್ಲ.

  ಟೀಕೆ, ಆಕ್ರೋಶಗಳಿಗೆ ತಲೆಕೆಡಿಸಿಕೊಳ್ಳದ ಸಿನಿಮಾತಂಡ

  ಟೀಕೆ, ಆಕ್ರೋಶಗಳಿಗೆ ತಲೆಕೆಡಿಸಿಕೊಳ್ಳದ ಸಿನಿಮಾತಂಡ

  ಅನೇಕರಿಗೆ ಪ್ರಕಾಶ್ ರೈ ಕೆಜಿಎಫ್-2 ಸಿನಿಮಾದಲ್ಲಿ ನಟಿಸುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಕಾಶ್ ರೈ ಎಂಟ್ರಿಯಲ್ಲಿಯೇ ಈ ಮಟ್ಟದ ಟೀಕೆ ವ್ಯಕ್ತವಾಗುತ್ತಿದೆ ಅಂದ್ಮೇಲೆ ಇನ್ನೂ ಸಿನಿಮಾ ರಿಲೀಸ್ ಸಮಯದಲ್ಲಿ, ರಿಲೀಸ್ ಆದಮೇಲೆ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎನ್ನುವುದು ಗೊತ್ತಿಲ್ಲ. ಆದರೆ ಇದ್ಯಾವ ಟೀಕೆ, ಆಕ್ರೋಶಗಳಿಗೂ ತಲೆಕೆಡಿಸಿಕೊಳ್ಳದ ಪ್ರಶಾಂತ್ ನೀಲ್ ಮತ್ತು ತಂಡ ಚಿತ್ರೀಕರಣ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.

  English summary
  Netizens outraged against Prakash Raj for playing important character in KGF-2. Boycut kgf-2 trend in social media

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X