For Quick Alerts
  ALLOW NOTIFICATIONS  
  For Daily Alerts

  ಕಾಂತಾರ, ವಿಕ್ರಾಂತ್ ರೋಣ ಮರೆತು ಆರ್‌ಆರ್‌ಆರ್‌ಗೆ ವಿಶ್ ಮಾಡಿದ ಯಶ್ ವಿರುದ್ಧ ಕಿಡಿಕಾರಿದ ನೆಟ್ಟಿಗರು!

  By ಫಿಲ್ಮಿಬೀಟ್ ಡೆಸ್ಕ್
  |

  ರಾಕಿಂಗ್ ಸ್ಟಾರ್ ಯಶ್ ಕನ್ನಡ ಚಿತ್ರರಂಗದ ಟಾಪ್ ಒನ್ ನಟ. ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಾ ಬಂದಿರುವ ಯಶ್ ಕಳೆದ ವರ್ಷ ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ ಸಾವಿರ ಕೋಟಿ ಕ್ಲಬ್ ಸೇರಿ ಕನ್ನಡ ಚಿತ್ರರಂಗಕ್ಕೆ ಕೀರ್ತಿ ತಂದರು.

  ಈ ಚಿತ್ರ ಬರೋಬ್ಬರಿ 1250 ಕೋಟಿ ಕಲೆಹಾಕಿ ಆ ವರ್ಷ ಭಾರತದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆಯನ್ನು ಸೃಷ್ಟಿಸಿತ್ತು‌. ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಆರ್ ಆರ್ ಆರ್ ಕೂಡ ಕೆಜಿಎಫ್ ಚಾಪ್ಟರ್ 2 ಚಿತ್ರದಷ್ಟು ಗಳಿಕೆ ಮಾಡಲಾಗದೇ ಆ ವರ್ಷದಲ್ಲಿ ಅತಿಹೆಚ್ಚು ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತು‌. ಇನ್ನು ಅದೇ ವರ್ಷ ಕನ್ನಡದ ಮತ್ತೆರಡು ಚಿತ್ರಗಳಾದ ಕಾಂತಾರ ಹಾಗೂ ವಿಕ್ರಾಂತ್ ರೋಣ ಚಿತ್ರಗಳೂ ಸಹ ಸದ್ದು ಮಾಡಿದ್ದವು.

  ಇನ್ನು ಕಳೆದ ವರ್ಷ ಸದ್ದು ಮಾಡಿದ ಈ ಚಿತ್ರಗಳ ವಿಚಾರವಾಗಿಯೇ ಇದೀಗ ರಾಕಿಂಗ್ ಸ್ಟಾರ್ ಯಶ್ ಟೀಕೆಯೊಂದಕ್ಕೆ ಗುರಿಯಾಗಿದ್ದಾರೆ. ಕಾಂತಾರ ಹಾಗೂ ವಿಕ್ರಾಂತ್ ರೋಣ ಸಾಧನೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ನೀಡದಿದ್ದ ಯಶ್ ಆರ್ ಆರ್ ಆರ್ ಸಾಧನೆ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಕಾರಣದಿಂದಾಗಿ ಈ ರೀತಿ ಟೀಕೆಗೆ ಒಳಗಾಗಿದ್ದಾರೆ.

  ಆರ್ ಆರ್ ಆರ್ ಚಿತ್ರಕ್ಕೆ ಶುಭ ಕೋರಿದ ಯಶ್

  ಆರ್ ಆರ್ ಆರ್ ಚಿತ್ರಕ್ಕೆ ಶುಭ ಕೋರಿದ ಯಶ್

  ಆರ್ ಆರ್ ಆರ್ ಚಿತ್ರ 2023ರ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ನಾಟು ನಾಟು ಹಾಡಿಗಾಗಿ ಅತ್ಯುತ್ತಮ ಒರಿಜಿನಲ್ ಹಾಡು ಎಂಬ ಪ್ರಶಸ್ತಿಯನ್ನು ಗೆದ್ದಿದೆ. ಈ ಕುರಿತಾಗಿ ಯಶ್ ಟ್ವೀಟ್ ಮಾಡಿದ್ದಾರೆ. ಆರ್ ಆರ್ ಆರ್ ಚಿತ್ರ ಈ ಪ್ರಶಸ್ತಿ ಗೆದ್ದಿದ್ದು ಬಹಳ ಖುಷಿ ಕೊಟ್ಟಿದೆ ಎಂದಿದ್ದಾರೆ. ಅಷ್ಟೇ ಅಲ್ಲದೇ ಎಸ್ ಎಸ್ ರಾಜಮೌಳಿ ಸರ್ ಆಸ್ಕರ್ ಗೆಲ್ಲುವ ಸಾಧ್ಯತೆ ಇದೆ, ಒಳ್ಳೆದಾಗಲಿ ಎಂದೂ ಸಹ ಯಶ್ ಶುಭಕೋರಿದ್ದಾರೆ. ಜತೆಗೆ ನಾಟು ನಾಟು ಹಾಡಿನ ನೃತ್ಯಕ್ಕಾಗಿ ಎನ್ ಟಿ ಆರ್ ಹಾಗೂ ರಾಮ್ ಚರಣ್ ಅವರನ್ನು ಪ್ರಶಂಸಿಸಿದ್ದಾರೆ.

  ಯಶ್ ವಿರುದ್ಧ ಕಿಡಿ

  ಯಶ್ ವಿರುದ್ಧ ಕಿಡಿ

  ಹೀಗೆ ಯಶ್ ಮಾಡಿದ ಟ್ವೀಟ್ ಕಂಡ ಕನ್ನಡದ ನೆಟ್ಟಿಗರು ಯಶ್ ವಿರುದ್ಧ ಕಿಡಿಕಾರಿದ್ದಾರೆ. ಆರ್ ಆರ್ ಆರ್ ಪ್ರಶಸ್ತಿ ಗೆದ್ದದ್ದಕ್ಕೆ ಹಾಗೂ ಆಸ್ಕರ್ ಅರ್ಹತೆ ಗಿಟ್ಟಿಸಿಕೊಂಡಿದ್ದಕ್ಕೆ ಶುಭ ಕೋರುತ್ತಿರುವ ನೀವು ಕನ್ನಡದ ಕಾಂತಾರ ಹಾಗೂ ವಿಕ್ರಾಂತ್ ರೋಣ ಚಿತ್ರಗಳು ಆಸ್ಕರ್ ಅರ್ಹತೆ ಪಡೆದುಕೊಂಡಾಗ ಯಾಕೆ ಸೈಲೆಂಟ್ ಆಗಿದ್ರಿ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ ಕೂಡಲೇ ನಮ್ಮ‌ ಚಿತ್ರಗಳನ್ನು ಮರೆತುಬಿಟ್ರಾ ಎಂದು ಕಿಡಿಕಾರಿದ್ದಾರೆ.

  ಕೃತಜ್ಞತೆ ತಿಳಿಸಿದ ರಾಜಮೌಳಿ

  ಕೃತಜ್ಞತೆ ತಿಳಿಸಿದ ರಾಜಮೌಳಿ

  ಇನ್ನು ಯಶ್ ಮಾಡಿದ ಈ ಟ್ವೀಟ್ ಕುರಿತು ನಿರ್ದೇಶಕ ಎಸ್ ಎಸ್ ರಾಜಮೌಳಿ ಪ್ರತಿಕ್ರಿಯೆ ನೀಡಿದ್ದಾರೆ. ಧನ್ಯವಾದ ಯಶ್ ಎಂದು ರಾಜಮೌಳಿ ಬರೆದಿದ್ದರೆ, ನಾಟು‌ ನಾಟು ಹಾಡಿಗಾಗಿ ಪ್ರಶಸ್ತಿ ಗೆದ್ದ ಹಾಡಿನ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಸಹ ಯಶ್ ಅವರೇ ಧನ್ಯವಾದ ಎಂದು ಕಾಮೆಂಟ್ ‌ಮಾಡಿದ್ದಾರೆ‌.

  English summary
  Netizens trolled Yash for not wishing Kantara and Vikrant Rona oscar qualification. Read on
  Wednesday, January 11, 2023, 20:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X