ಟೀಸರ್ ಬಿಡುಗಡೆ: ನಿಖಿಲ್ ಹುಟ್ಟುಹಬ್ಬಕ್ಕೆ ಬಂದ 'ರೈಡರ್'

ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಅವರ ನಟನೆಯ ರೈಡರ್ ಸಿನಿಮಾದ ಟೀಸರ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ.

ಟೀಸರ್ ತುಂಬಾ ಬರೀ ನಿಖಿಲ್ ಕುಮಾರಸ್ವಾಮಿ ತುಂಬಿಕೊಂಡಿದ್ದಾರೆ. ಟೀಸರ್‌ ನ ಆರಂಭದಿಂದ ಅಂತ್ಯದ ವರೆಗೂ ದುಷ್ಟರನ್ನು ಡಿಸೈನ್-ಡಿಸೈನ್ ಆಗಿ ಹೊಡೆಯುತ್ತಿದ್ದಾರೆ ನಿಖಿಲ್.

ಸಿನಿಮಾದ ಟೈಟಲ್ ಹಾಗೂ ಟೀಸರ್ ನೋಡಿದರೆ ಗೊತ್ತಾಗುತ್ತಿದೆ ಇದೊಂದು ಪಕ್ಕಾ ಹೊಡಿ-ಬಡಿ ಸಿನಿಮಾ ಎಂದು. ಪೂರ್ಣ ಪ್ರಮಾಣದ ಆಕ್ಷನ್ ಹೀರೋ ಆಗುವತ್ತ ನಿಖಿಲ್ ಕುಮಾರಸ್ವಾಮಿ ಗಮನ ಹರಿಸಿದಂತಿದೆ. ಟೀಸರ್‌ ನಲ್ಲಿ ತೋರಿಸಲಾಗಿರುವ ಆಕ್ಷನ್ ದೃಶ್ಯಗಳು ಚೆನ್ನಾಗಿವೆ.

Nikhil Kumaraswamys Rider Movie Teaser Released

ನಿಖಿಲ್ ಕುಮಾರಸ್ವಾಮಿ ನಟನೆಯ ರೈಡರ್‌ ನಲ್ಲಿ ನಾಯಕಿಯಾಗಿ ಕಶ್ಮಿರಾ ಪರದೇಶಿ ನಟಿಸಿದ್ದಾರೆ. ಇವರ ಹೊರತಾಗಿ ದತ್ತಣ್ಣ, ಅಚ್ಯುತ್ ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ, ಅನುಷಾ ರೈ ಇನ್ನೂ ಹಲವರು ನಟಿಸಿದ್ದಾರೆ.

ರೈಡರ್ ಸಿನಿಮಾವನ್ನು ಲಹರಿ ಫಿಲಮ್ಸ್‌ ನವರು ನಿರ್ಮಾಣ ಮಾಡುತ್ತಿದ್ದು, ಸಿನಿಮಾವನ್ನು ತೆಲುಗಿನ ನಿರ್ದೇಶಕ ವಿಜಯ್ ಕುಮಾರ್ ಕೊಂಡ ನಿರ್ದೇಶಿಸುತ್ತಿದ್ದಾರೆ. ಕೊಂಡ ಅವರು ತೆಲುಗಿನಲ್ಲಿ ಹಾರ್ಟ್ ಅಟ್ಯಾಕ್, ಒಕ ಲೈಲಾ ಕೋಸಂ, ಒರೇ ಬುಜ್ಜಿಗಾ ಇನ್ನೂ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

Recommended Video

ನಿಖಿಲ್ ಮೇಲೆ ಕೋಪಗೊಂಡ ನೆಟ್ಟಿಗರು | Filmibeat Kannada

'ರೈಡರ್' ನಿಖಿಲ್ ನಟನೆಯ ಮೂರನೇ ಸಿನಿಮಾ ಆಗಿದ್ದು. ಇದರ ನಂತರ ಇನ್ನೂ ಎರಡು ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಪ್ರಸ್ತುತ ರಾಜಕೀಯ ಹಾಗೂ ಸಿನಿಮಾ ಎರಡನ್ನೂ ಸಂಭಾಳಿಸಿಕೊಂಡು ಹೋಗುತ್ತಿದ್ದಾರೆ ನಿಖಿಲ್ ಕುಮಾರಸ್ವಾಮಿ.

More from Filmibeat

English summary
Nikhil Kumaraswamy's rider movie teaser released on Nikhil's birthday. Movie directed by Telugu director Vijay Kumar Konda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X