»   » ಹುಣ್ಣಿಮೆ ಚಂದ್ರನಾಗಿ ನಿಖಿತಾ ತುಕ್ರಲ್ ರೀ ಎಂಟ್ರಿ

ಹುಣ್ಣಿಮೆ ಚಂದ್ರನಾಗಿ ನಿಖಿತಾ ತುಕ್ರಲ್ ರೀ ಎಂಟ್ರಿ

Posted By:
Subscribe to Filmibeat Kannada

'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ಸಣ್ಣ ಪಾತ್ರ ಪೋಷಿಸಿದ್ದ ನಿಖಿತಾ ತುಕ್ರಲ್ ಕನ್ನಡಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಅವರದು ಹುಣ್ಣಿಮೆ ಚಂದ್ರನಂತೆ ಕಂಗೊಳಿಸಲಿದ್ದಾರೆ. ಚಿತ್ರದ ಹೆಸರು 'ಪೌರ್ಣಮಿ'. ಇದೇ ಮೊದಲ ಬಾರಿಗೆ ಒಲವೇ ಮಂದಾರ ಖ್ಯಾತಿಯ ಶ್ರೀಕಿಗೆ ಜೋಡಿಯಾಗುತ್ತಿದ್ದಾರೆ.

'ಪೌರ್ಣಮಿ' ಅಂತಹ ಅಪ್ಪಟ ಕನ್ನಡ ಶೀರ್ಷಿಕೆ ಹಾಗೂ ಪೌರ್ಣಮಿಯ ಪೂರ್ಣ ಚಂದ್ರನ ಬೆಳಕಿನಂತೆ ಒಂದು ಸುಂದರ ಚಿತ್ರವನ್ನು ಕಟ್ಟಿಕೊಡಲು ಫಿಲ್ಮ್ ಫ್ಯಾಕ್ಟರಿ ಕಂಬೈನ್ಸ್ ತಯಾರಿ ಶುರುವಿಟ್ಟುಕೊಂಡಿದೆ.


'ಪೌರ್ಣಮಿ' ಬೆಳಕಿನಂತೆ ಬೆಳಗುವ ನಾಯಕಿ ನಾಯಕನ ಜೀವನದಲ್ಲಿ ಹೇಗೆ, ಏನು, ಎತ್ತ ಎಂಬ ಪ್ರಶ್ನೆಗಳಿಗೆ ಎನ್ ಎಸ್ ಶ್ರೀಧರ್ ಅವರೇ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಉತ್ತರ ಸಿಗಲಿದೆ.

ಈ ಚಿತ್ರಕ್ಕಾಗಿ ಈಗಾಗಲೇ ಸೋನು ನಿಗಂ, ಸುನಿಧಿ ಚೌಹಾಣ್, ಸಿಂಚನ ದೀಕ್ಷಿತ್ ಅವರ ಕಂಠ ಸಿರಿಯಲ್ಲಿ ಹಾಡುಗಳ ಧ್ವನಿ ಮುದ್ರಣವನ್ನು ಸಂಗೀತ ನಿರ್ದೇಶಕ ಅರುಣ್ ಅವರು ಸಂಪೂರ್ಣಗೊಳಿಸಿದ್ದಾರೆ. ಇವರು ಈ ಹಿಂದೆ 'ಕೇಡಿಗಳು' ಚಿತ್ರಕ್ಕೆ ರಾಗ ಸಂಯೋಜನೆ ಮಾಡಿದವರು.

ಈ ಚಿತ್ರಕ್ಕೆ ಗೌರಿ ವೆಂಕಟೇಶ್ ಹಾಗೂ ವಿಕ್ರಮ್ ಯೋಗಾನಂದ್ ಛಾಯಾಗ್ರಾಹಕರು. ಕಿರಣ್ ವಿಪ್ರ ಹಾಗೂ ರಾಮಕೃಷ್ಣ ರಣಗಟ್ಟಿ ಸಂಭಾಷಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಹೊಸಮನೆ ಮೂರ್ತಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕೆ ಇದೆ.

ಶ್ರೀಕಿ ಹಾಗೂ ನಿಖಿತಾ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಪೋಷಕ ಪಾತ್ರಗಳಲ್ಲಿ ಪವಿತ್ರಾ ಗೌಡ, ಅರುಣ್ ಸಾಗರ್, ಧರ್ಮ, ಸುಂದರಶ್ರೀ, ಬೋಳಾರ್ ಹಾಗೂ ಇನ್ನಿತರಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Actress Nikita Thukral re enters Kannada films through Pournami. Olave Mandara fame Sriki is the hero of the movie. 'Pournami' means full moon day. How does it reflect on the life of hero and heroine is the crux of the film.
Please Wait while comments are loading...