Don't Miss!
- News
Assembly election 2023: ಇನ್ನೊಂದು ವಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ: ಎಚ್.ಡಿ.ಕೆ
- Automobiles
ಹೋಂಡಾ ಆಕ್ಟೀವಾ 6Gಗೆ ಸೆಡ್ಡು ಹೊಡೆಯಲು ಮಾರುಕಟ್ಟೆಗಿಳಿದ ಹೀರೋ Xoom... ಏನಿದರ ವಿಶೇಷತೆ!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Technology
ಜಿಯೋ ಟ್ರೂ 5G ಸೇವೆ ಈಗ ಚಿತ್ರದುರ್ಗದಲ್ಲಿಯೂ ಲಭ್ಯ!..5G ರೀಚಾರ್ಜ್ ಬೆಲೆ ಎಷ್ಟು?
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಜ್ ಮೊಮ್ಮಗಳ 'ನಿನ್ನ ಸನಿಹಕೆ' ಚಿತ್ರಕ್ಕೆ ಮೊದಲ ದಿನವೇ ವಿಘ್ನ
ಭಾರಿ ನಿರೀಕ್ಷೆಗಳೊಂದಿಗೆ ತೆರೆಗೆ ಬಂದ 'ನಿನ್ನ ಸನಿಹಕೆ' ಚಿತ್ರಕ್ಕೆ ಮೊದಲ ದಿನವೇ ವಿಘ್ನ ಎದುರಾಗಿದೆ. ಚಿತ್ರಮಂದಿರಗಳಿಗೆ 100% ಅನುಮತಿ ಸಿಕ್ಕ ಮೇಲೆ ನಿರೀಕ್ಷೆಯ ಚಿತ್ರಗಳು ಬಿಡುಗಡೆಯಾಗುತ್ತಿವೆ. ತುಂಬಾ ದಿನದಿಂದ ಕಾದು ಕುಳಿತು ಈಗ ಸಂಭ್ರಮದಿಂದ ಸಿನಿಮಾ ರಿಲೀಸ್ ಮಾಡಿದ್ರೆ, ಮೊದಲ ಶೋನಲ್ಲೇ ಸಮಸ್ಯೆ ಎದುರಾಗಿದೆ.
ಸೂರಜ್ ಗೌಡ ಮತ್ತು ಧನ್ಯಾ ರಾಮ್ ಕುಮಾರ್ ನಟನೆಯ 'ನಿನ್ನ ಸನಿಹಕೆ' ಚಿತ್ರ ಇಂದು (ಅಕ್ಟೋಬರ್ 8) ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರ ಈ ಚಿತ್ರಕ್ಕೆ ಪ್ರಮುಖ ಥಿಯೇಟರ್ ಆಗಿತ್ತು. ಆದ್ರೀಗ, ಸಂತೋಷ್ ಥಿಯೇಟರ್ ಬೆಳಗ್ಗಿನ ಪ್ರದರ್ಶನ ರದ್ದಾಗಿದೆ.
'ನಿನ್ನ
ಸನಿಹಕೆ'
ಪ್ರೀಮಿಯರ್
ಶೋನಲ್ಲಿ
ಅಣ್ಣಾವ್ರ
ಇಡೀ
ಕುಟುಂಬ
ಭಾಗಿ
ತಾಂತ್ರಿಕ ದೋಷದಿಂದ ಸಂತೋಷ್ ಚಿತ್ರಮಂದಿರದಲ್ಲಿ 'ನಿನ್ನ ಸನಿಹಕೆ' ಚಿತ್ರದ ಶೋ ಸ್ಥಗಿತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾಗಿ, ಮಧ್ಯಾಹ್ನದ ಶೋ ವೀಕ್ಷಿಸಲು ಸಂತೋಷ್ ಥಿಯೇಟರ್ ಬಳಿ ನೆರೆದಿದ್ದ ಪ್ರೇಕ್ಷಕರು ನವರಂಗ್ ಚಿತ್ರಮಂದಿರದ ಕಡೆ ಹೆಜ್ಜೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಮೂರು ದಿನದಿಂದಲೂ ಸಮಸ್ಯೆ ಇದ್ರೂ ಥಿಯೇಟರ್ ಮಾಲೀಕರಿಂದ ಚಿತ್ರತಂಡಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಚಿತ್ರತಂಡ ಅಲಂಕಾರ ಮಾಡಿಕೊಂಡು ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರೂ ಯಾವುದೇ ಮಾಹಿತಿ ನೀಡಿಲ್ಲ. ಕೊನೆ ಕ್ಷಣದಲ್ಲಿ ಪ್ರದರ್ಶನ ಸಾಧ್ಯವಿಲ್ಲ ಎಂದು ತಿಳಿಸಿರುವುದರಿಂದ ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ.
ಪ್ರತಿಯೊಬ್ಬ ನಟ-ನಟಿಯರಿಗೂ ಮುಖ್ಯ ಚಿತ್ರಮಂದಿರದಲ್ಲಿ ಮೊದಲ ಶೋ ಸಕ್ಸಸ್ ಆಗಬೇಕು ಎಂಬ ಆಸೆ ಇರುತ್ತದೆ. ಅದರಲ್ಲೂ ಡಾ ರಾಜ್ ಕುಮಾರ್ ಮೊಮ್ಮಗಳ ಮೊದಲ ಚಿತ್ರ. ನಟ ಸೂರಜ್ ಗೌಡ ನಿರ್ದೇಶಿಸಿರುವ ಚೊಚ್ಚಲ ಸಿನಿಮಾ. ಈ ಇಬ್ಬರು ಬಹಳ ಆಸೆಗಳೊಂದಿಗೆ ಮೇನ್ ಥಿಯೇಟರ್‌ನಲ್ಲಿ ಮೊದಲ ಶೋ ನೋಡಲು ಕಾಯುತ್ತಿದ್ದರು. ಆದರೆ, ಚಿತ್ರತಂಡ ನಿರ್ಲಕ್ಷ್ಯದಿಂದ ಯುವ ಕಲಾವಿದರಿಗೆ ನಿರಾಸೆ ಉಂಟಾಗಿದೆ.
ನಿನ್ನ
ಸನಿಹಕೆ
ಚಿತ್ರದ
ಮೊದಲ
ಟಿಕೆಟ್
ಮುಖ್ಯಮಂತ್ರಿ
ಬೊಮ್ಮಾಯಿಗೆ
ಇನ್ನುಳಿದಂತೆ ರಾಜ್ಯದಾದ್ಯಂತ ತೆರೆಕಂಡಿರುವ 'ನಿನ್ನ ಸನಿಹಕೆ' ಚಿತ್ರ ಅದ್ಧೂರಿ ಓಪನಿಂಗ್ ಪಡೆದುಕೊಂಡಿದೆ. ವಿಶೇಷವಾಗಿ ಮಲ್ಟಿಪ್ಲೆಕ್ಸ್ ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಪ್ರೀಮಿಯರ್ ಪ್ರದರ್ಶನದಲ್ಲಿ ರಾಜ್ ಕುಟುಂಬ
ಗುರುವಾರ ರಾತ್ರಿ ಬೆಂಗಳೂರಿನ ಒರೆಯಾನ್ ಮಾಲ್‌ನಲ್ಲಿ ನಿನ್ನ ಸನಿಹಕೆ ಚಿತ್ರದ ಪ್ರೀಮಿಯರ್ ಪ್ರದರ್ಶನ ಆಯೋಜಿಸಲಾಗಿತ್ತು. ಈ ಶೋಗೆ ಇಡೀ ರಾಜ್ ಕುಟುಂಬ ಭಾಗಿಯಾಗಿತ್ತು. ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸಿನಿಮಾ ನೋಡಿ ಧನ್ಯಾ ಹಾಗೂ ಸೂರಜ್ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಧನ್ಯಾ ನಾಯಕಿಯಾಗಿ ನಟಿಸಿರುವ 'ನಿನ್ನ ಸನಿಹಕೆ' ಚಿತ್ರದಲ್ಲಿ ಸೂರಜ್ ಗೌಡ ನಾಯಕನಾಗಿ ನಟಿಸಿ ಸ್ವತಃ ಅವರೇ ನಿರ್ದೇಶಿಸಿದ್ದಾರೆ. ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸಿದ್ದಾರೆ. ರಘು ದೀಕ್ಷಿತ್ ಸಂಗೀತ ಒದಗಿಸಿದ್ದಾರೆ.