»   » ಅಮೆರಿಕದಲ್ಲಿ 'ರಂಗಿತರಂಗ' ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್

ಅಮೆರಿಕದಲ್ಲಿ 'ರಂಗಿತರಂಗ' ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್

Posted By:
Subscribe to Filmibeat Kannada

ಹೊಸಬರ ಹೊಸ ಪ್ರಯತ್ನವಾಗಿರುವ ಕನ್ನಡದ 'ರಂಗಿತರಂಗ' ಚಿತ್ರಕ್ಕೆ ರಾಜ್ಯಾದ್ಯಂತ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಕರ್ನಾಟಕದ ಚಿತ್ರಮಂದಿರಗಳಲ್ಲಿ ಇನ್ನೂ ಗಟ್ಟಿಯಾಗಿ ನೆಲೆಯೂರಿರುವ 'ರಂಗಿತರಂಗ' ಯಶಸ್ವಿ ನೂರು ದಿನಗಳತ್ತ ದಾಪುಗಾಲು ಹಾಕುತ್ತಿದೆ.

ಗಾಂಧಿನಗರದ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿರುವ 'ರಂಗಿತರಂಗ' ಚಿತ್ರ ವಿದೇಶದಲ್ಲೂ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡಿದೆ. ಯು.ಎಸ್.ಎ, ಯೂರೋಪ್, ಯು.ಕೆ, ಆಸ್ಟ್ರೇಲಿಯಾ, ಸಿಂಗಪುರ್, ಮಲೇಶಿಯಾ, ಹಾಂಗ್ ಕಾಂಗ್ ಸೇರಿದಂತೆ ಹಲವು ದೇಶಗಳಲ್ಲಿ ರಿಲೀಸ್ ಆದ 'ರಂಗಿತರಂಗ' ಅಮೆರಿಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. [ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ]

rangitaranga

ವರದಿಗಳ ಪ್ರಕಾರ, ಯು.ಎಸ್.ಎ ನಲ್ಲಿ 'ರಂಗಿತರಂಗ' ಬರೋಬ್ಬರಿ 2.1 ಕೋಟಿ ಕಲೆಕ್ಷನ್ ಮಾಡಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದು ಇತಿಹಾಸ. ಸ್ಯಾಂಡಲ್ ವುಡ್ ನಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿದ್ದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಕಲೆಕ್ಷನ್ ರೆಕಾರ್ಡ್ ಬ್ರೇಕ್ ಮಾಡಿ 'ರಂಗಿತರಂಗ' ಮುಂದೆ ಸಾಗುತ್ತಿದೆ.

ಅನೂಪ್ ಭಂಡಾರಿ ನಿರ್ದೇಶನದ ಚಿತ್ರ 'ರಂಗಿತರಂಗ'. ನಿರೂಪ್ ಭಂಡಾರಿ, ರಾಧಿಕಾ ಚೇತನ್, ಸಾಯಿ ಕುಮಾರ್ ಅಭಿನಯಿಸಿರುವ ಥ್ರಿಲ್ಲರ್ ಸಿನಿಮಾಗೆ ವಿಮರ್ಶಕರು ಕೂಡ ಜೈಕಾರ ಹಾಕಿದ್ದರು. ಉತ್ತಮ ಚಿತ್ರಕ್ಕೆ ಪ್ರೇಕ್ಷಕ ಮಹಾಪ್ರಭು ಕೈ ಬಿಡುವುದಿಲ್ಲ ಅನ್ನುವುದು ಇದಕ್ಕೆ.

English summary
Nirup Bhandari starrer 'RangiTaranga' has made a record in USA by collecting 2.1 crore at the Box Office. Thereby, Anup Bhandari directorial 'RangiTaranga' has broken the record of Yash starrer 'Mr and Mrs Ramachari'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada