For Quick Alerts
  ALLOW NOTIFICATIONS  
  For Daily Alerts

  ಸಪ್ತ ಸಾಗರದಾಚೆ 'ರಂಗಿತರಂಗ' ಕಮಾಲ್

  By Harshitha
  |

  ಹೊಸಬರ ಹೊಸ ಪ್ರಯತ್ನವಾಗಿರುವ 'ರಂಗಿತರಂಗ' ಚಿತ್ರದ ಬಗ್ಗೆ ಗಾಂಧಿನಗರದ ಅಂಗಳದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ಬಾಹುಬಲಿ' ಮತ್ತು 'ಭಜರಂಗಿ ಭಾಯ್ ಜಾನ್' ಚಿತ್ರದ ಹವಾ ನಡುವೆಯೂ ಎಲ್ಲೆಡೆ 'ರಂಗಿತರಂಗ' ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ.

  ಕರ್ನಾಟಕದಾದ್ಯಂತ ಸಖತ್ ಸೌಂಡ್ ಮಾಡುತ್ತಿರುವ 'ರಂಗಿತರಂಗ' ಚಿತ್ರ ಇದೀಗ ವಿದೇಶಗಳಲ್ಲೂ ಸದ್ದು ಮಾಡೋಕೆ ಶುರುಮಾಡಿದೆ. ಹೌದು, 'ಸ್ಯಾಂಡಲ್ ವುಡ್ ಟಾಕೀಸ್ ಹಾಲೆಂಡ್' ಸಂಸ್ಥೆ 'ರಂಗಿತರಂಗ' ಚಿತ್ರದ ಓವರ್ ಸೀಸ್ ರೈಟ್ಸ್ ಪಡೆದುಕೊಂಡಿದೆ.

  ಇನ್ನೆರಡು ಮೂರು ವಾರಗಳಲ್ಲಿ ಜರ್ಮನಿ, ಹಾಲೆಂಡ್, ಐರ್ಲ್ಯಾಂಡ್ ಸೇರಿದಂತೆ ಅನೇಕ ಯೂರೋಪಿಯನ್ ಸಿಟಿಗಳಲ್ಲಿ 'ರಂಗಿತರಂಗ' ಗ್ರ್ಯಾಂಡ್ ರಿಲೀಸ್ ಆಗುತ್ತಿದೆ. [ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ]

  ಅಂದ್ಮೇಲೆ, ಸ್ವದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ 'ರಂಗಿತರಂಗ' ಕಮಾಲ್ ಮಾಡೋದು ಖಚಿತ. ಹೊಸ ಮುಖಗಳೇ ಆಗಲಿ, ಉತ್ತಮ ಚಿತ್ರ ಬಂದರೆ ಕನ್ನಡ ಪ್ರೇಕ್ಷಕರು ಕೈಬಿಡಲ್ಲ ಅನ್ನೋದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಾ?

  English summary
  Nirup Bhandari starrer 'RangiTaranga' is all set to release in Foreign countries.'Sandalwood Talkies Holland' has bought 'RangiTaranga' overseas rights for Europe release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X