For Quick Alerts
  ALLOW NOTIFICATIONS  
  For Daily Alerts

  ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಗೆ ಅಶ್ಲೀಲ ಫೋಟೋ ಕಳುಹಿಸಿದ ಭೂಪ ಇವನೇ!

  By Naveen
  |

  ಸಿನಿಮಾ ನಟಿಯರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾನಸಿಕವಾಗಿ ಹಿಂಸೆ ನೀಡುವುದು ಹೆಚ್ಚಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ನಿರೂಪಕಿ ಶೀತಲ್ ಶೆಟ್ಟಿ ಈ ರೀತಿಯ ಘಟನೆಯ ವಿರುದ್ಧ ಸಿಡಿದೆದ್ದಿದರು. ಈಗ ನಟಿ ನಿತ್ಯಾ ರಾಮ್ ಕೂಡ ಇದೇ ರೀತಿಯ ಪರಿಸ್ಥಿತಿ ಎದುರಿಸಿದ್ದಾರೆ.

  ರಚಿತಾ ರಾಮ್ ಸಹೋದರಿ ಕಿರುತೆರೆ ನಟಿ ನಿತ್ಯಾ ರಾಮ್ ಅವರಿಗೆ ಫೇಸ್ ಬುಕ್ ನಲ್ಲಿ ಒಬ್ಬ ಅಶ್ಲೀಲ ಫೋಟೋ ಕಳುಹಿಸಿ ಕಾಟ ಕೊಡುತ್ತಿದ್ದಾನಂತೆ. ಈ ರೀತಿ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ ಆ ಯುವಕನ ವಿರುದ್ದ ಈಗ ನಿತ್ಯಾ ರಾಮ್ ಈಗ ತಿರುಗಿ ಬಿದ್ದಿದ್ದಾರೆ. ಮುಂದೆ ಓದಿ...

  ನಿರೂಪಕಿ ಶೀತಲ್ ಶೆಟ್ಟಿಗೆ ಯುವಕನಿಂದ ಲೈಂಗಿಕ ಕಿರುಕುಳ!

  ಅಶ್ಲೀಲ ಫೋಟೋ

  ಅಶ್ಲೀಲ ಫೋಟೋ

  ನಟಿ ನಿತ್ಯಾ ರಾಮ್ ಗೆ ಫೇಸ್ ಬುಕ್ ನಲ್ಲಿ ಗೌತಮ್ ಎಂಬ ಒಬ್ಬ ಯುವಕ ಅಶ್ಲೀಲ ಫೋಟೋಗಳನ್ನು ಕಳಿಸಿ ಕಾಟ ನೀಡುತ್ತಿದ್ದನಂತೆ.

  ಫ್ಯಾನ್ ಅಂತ ಹೇಳಿಕೊಳ್ಳುತ್ತಿದ್ದ

  ಫ್ಯಾನ್ ಅಂತ ಹೇಳಿಕೊಳ್ಳುತ್ತಿದ್ದ

  ಚೆನ್ನೈ ಮೂಲದ ಗೌತಮ್ ಎಂಬುವವನು 'ನಾನು ನಿಮ್ಮ ಫ್ಯಾನ್' ಅಂತ ಹೇಳಿ ಅಸಭ್ಯ ಫೋಟೋಗಳನ್ನು ಕಳುಹಿಸುತ್ತಿದ್ದನಂತೆ.

  ವಾರ್ನಿಂಗ್ ನೀಡಿದ ನಟಿ

  ವಾರ್ನಿಂಗ್ ನೀಡಿದ ನಟಿ

  ಅಶ್ಲೀಲ ಫೋಟೋ ಕಳುಹಿಸುತ್ತಿದ್ದ ಆತನಿಗೆ ನಿತ್ಯಾ ರಾಮ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ಒಬ್ಬ ಹುಡುಗಿಯ ಹತ್ತಿರ ಗೌರವವಾಗಿ ನಡೆದುಕೋ ಎಂದು ಹೇಳಿದ್ದಾರೆ.

  ನೋವು ಹೇಳಿಕೊಂಡ ನಿತ್ಯಾ

  ನೋವು ಹೇಳಿಕೊಂಡ ನಿತ್ಯಾ

  ''ಫೇಸ್ ಬುಕ್ ನಲ್ಲಿ ನನಗೆ ಎಷ್ಟೋ ಜನ ಅಭಿಮಾನಿಗಳು ಸಂದೇಶ ಕಳಿಸಿ ಪ್ರೀತಿ ತೋರಿಸುತ್ತಾರೆ. ಅದನ್ನು ನೋಡಿ ನನಗೆ ಖುಷಿಯಾಗುತ್ತದೆ. ಆದರೆ ಈ ರೀತಿಯ ವರ್ತನೆಗಳಿಗೆ ನಾನು ಪ್ರೋತ್ಸಾಹ ನೀಡುವುದಿಲ್ಲ'' - ನಿತ್ಯಾ ರಾಮ್, ನಟಿ

  ಕಿರುತೆರೆಯ ಜನಪ್ರಿಯ ನಟಿ

  ಕಿರುತೆರೆಯ ಜನಪ್ರಿಯ ನಟಿ

  ರಚಿತಾ ರಾಮ್ ಸಹೋದರಿ ಆಗಿರುವ ನಿತ್ಯಾ ರಾಮ್ ಕಿರುತೆರೆಯ ಜನಪ್ರಿಯ ನಟಿ. ಸದ್ಯ 'ನಂದಿನಿ' ಎಂಬ ಧಾರಾವಾಹಿಯಲ್ಲಿ ನಿತ್ಯಾ ಅಭಿನಯಿಸುತ್ತಿದ್ದಾರೆ.

  ರವಿಚಂದ್ರನ್ ಗೆ ಡಿಂಪಲ್ ಕ್ವೀನ್ ರಚಿತಾ ಅಂದ್ರೆ ಶಾನೆ ಇಷ್ಟ ಅಂತೆ!

  ಇದೇ ಮೊದಲಲ್ಲ

  ಇದೇ ಮೊದಲಲ್ಲ

  ಸದ್ಯ ನಿತ್ಯಾ ರಾಮ್ ಅವರಿಗೆ ಆಗಿರುವ ಘಟನೆಯನ್ನು ಅನೇಕ ನಟಿಯರು ಅನುಭವಿಸಿರುತ್ತಾರೆ. ಕೆಲ ದಿನಗಳ ಹಿಂದೆ ನಟಿ ಶೃತಿ ಹರಿಹರನ್ ಇದರ ವಿರುದ್ಧ ಪೊಲೀಸ್ ಗೆ ದೂರು ಕೊಟ್ಟಿದ್ದರು.

  English summary
  Kannada Actress, Rachitha Ram Sister 'Nithya Ram' Sexual Harassed by Unknown Person in Social Media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X