For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರು ಇಂಟರ್ನ್ಯಾಷನಲ್ ಏರ್ ಪೋರ್ಟ್ ನಲ್ಲಿ ಕೆಲಸಕ್ಕೆ ಸೇರಿದ 'ಗೊಂಬೆ' ನಿವೇದಿತಾ.!

  |

  ಒಂದು ಬಾರಿ 'ಬಿಗ್ ಬಾಸ್' ಮನೆಗೆ ಹೋಗಿ ಬಂದರೆ, ಚಿತ್ರರಂಗದಿಂದ ಆಫರ್ ಗಳು ಹುಡುಕಿಕೊಂಡು ಬರುತ್ತೆ. ಇಲ್ಲಾಂದ್ರೂ, ಕನಿಷ್ಟ ಸೀರಿಯಲ್ ಗಳಲ್ಲಿ ಅವಕಾಶ ಸಿಗುತ್ತೆ. 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ ಎಷ್ಟೋ ಮಂದಿ, ಸಿನಿಮಾ, ಸೀರಿಯಲ್, ಇತರೆ ರಿಯಾಲಿಟಿ ಶೋಗಳಲ್ಲಿ ಗುರುತಿಸಿಕೊಂಡಿದ್ದಾರೆ.

  ಹಾಗೇ, 'ಗೊಂಬೆ' ನಿವೇದಿತಾ ಗೌಡ ಕೂಡ ಚಿತ್ರರಂಗಕ್ಕೆ ಕಾಲಿಡುತ್ತಾರೆ, ಹೀರೋಯಿನ್ ಆಗುತ್ತಾರೆ ಅಂತ ಹಲವರು ಭಾವಿಸಿದ್ರು. ಅದರಂತೆ, ನಿವೇದಿತಾ ಗೌಡಗೆ ಸ್ಯಾಂಡಲ್ ವುಡ್ ನಿಂದ ಬುಲಾವ್ ಬಂದಿದ್ದು ಕೂಡ ನಿಜವೇ.

  ಹಂಪಿಯಲ್ಲಿ ಜೋರಾಯ್ತು ರಾಕಿಭಾಯ್ ಹವಾ. | Yash | FILMIBEAT KANNADA

  ಆದ್ರೆ, ಅದೆಲ್ಲವನ್ನೂ ತಿರಸ್ಕಾರ ಮಾಡಿದ 'ಗೊಂಬೆ' ನಿವೇದಿತಾ ಗೌಡ ಇದೀಗ ಹೊಸ ಕೆಲಸ ಆರಂಭಿಸಿದ್ದಾರೆ. ಓದು ಮುಗಿದ ಕೂಡಲೆ ಬಿ.ಐ.ಎ.ಎಲ್ ನಲ್ಲಿ ವೃತ್ತಿ ಆರಂಭಿಸಿದ್ದಾರೆ. ಮುಂದೆ ಓದಿರಿ...

  ಕೆಲಸಕ್ಕೆ ಸೇರಿದ ನಿವೇದಿತಾ

  ಕೆಲಸಕ್ಕೆ ಸೇರಿದ ನಿವೇದಿತಾ

  ವಿದ್ಯಾಭ್ಯಾಸ ಮುಗಿಸಿರುವ 'ಬಿಗ್ ಬಾಸ್' ಸ್ಪರ್ಧಿ ನಿವೇದಿತಾ ಗೌಡ ಇದೀಗ ಕೆಲಸಕ್ಕೆ ಸೇರಿದ್ದಾರೆ. ಬೆಂಗಳೂರು ಇಂಟರ್ನ್ಯಾಷನಲ್ ಏರ್ ಪೋರ್ಟ್ (ಬಿ.ಐ.ಎ.ಎಲ್) ನಲ್ಲಿ ಆಪರೇಷನ್ ಅಸಿಸ್ಟೆಂಟ್ ಆಗಿ ನಿವೇದಿತಾ ಗೌಡ ಕಾರ್ಯ ನಿರ್ವಹಿಸುತ್ತಿದ್ದಾರೆ.

  ಯಾರೀ 'ಕಂಗ್ಲೀಷ್ ಕುವರಿ' ನಿವೇದಿತಾ ಗೌಡ.? ನಿಜ ಬದುಕಿನ ಅನಾವರಣಯಾರೀ 'ಕಂಗ್ಲೀಷ್ ಕುವರಿ' ನಿವೇದಿತಾ ಗೌಡ.? ನಿಜ ಬದುಕಿನ ಅನಾವರಣ

  ಡಿಗ್ರಿ ಮುಗಿಸಿರುವ ನಿವೇದಿತಾ

  ಡಿಗ್ರಿ ಮುಗಿಸಿರುವ ನಿವೇದಿತಾ

  ಮೈಸೂರಿನಲ್ಲಿ ಹುಟ್ಟಿ ಬೆಳೆದ ನಿವೇದಿತಾ ಗೌಡ ಮಹಾಜನ್ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಬಿಸಿಎ ಡಿಗ್ರಿ ಮುಗಿಸಿದ್ದಾರೆ. ಮುಂದೆ ವಿದ್ಯಾಭ್ಯಾಸ ಮುಂದುವರೆಸುವ ಯೋಜನೆ ಹೊಂದಿಲ್ಲದ ನಿವೇದಿತಾ ಗೌಡ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೃತ್ತಿ ಆರಂಭಿಸಿದ್ದಾರೆ.

  ಚಂದನ್ ಶೆಟ್ಟಿ-ನಿವೇದಿತಾ ಗೌಡ ಮದುವೆ ದಿನಾಂಕ ನಿಗದಿ: ಎಲ್ಲಿ, ಯಾವಾಗ.?ಚಂದನ್ ಶೆಟ್ಟಿ-ನಿವೇದಿತಾ ಗೌಡ ಮದುವೆ ದಿನಾಂಕ ನಿಗದಿ: ಎಲ್ಲಿ, ಯಾವಾಗ.?

  ಸೋಷಿಯಲ್ ಮೀಡಿಯಾದಲ್ಲಿ ಫೇಮಸ್

  ಸೋಷಿಯಲ್ ಮೀಡಿಯಾದಲ್ಲಿ ಫೇಮಸ್

  'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಮಾತ್ರ ಸ್ಪರ್ಧಿಸಿದ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದಾರೆ. ಇನ್ಸ್ಟಾಗ್ರಾಮ್ ಒಂದರಲ್ಲೇ ನಿವೇದಿತಾ ಗೌಡ ಎಂಟು ಲಕ್ಷಕ್ಕೂ ಹೆಚ್ಚು ಮಂದಿ ಫಾಲೋವರ್ಸ್ ಹೊಂದಿದ್ದಾರೆ.

  ಮುಂದಿನ ತಿಂಗಳು ಮದುವೆ.!

  ಮುಂದಿನ ತಿಂಗಳು ಮದುವೆ.!

  ಮುಂದಿನ ತಿಂಗಳು.. ಅಂದ್ರೆ ಫೆಬ್ರವರಿ 25 ಮತ್ತು 26 ರಂದು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮದುವೆ ನಿಗದಿ ಆಗಿದೆ. ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್ ನಲ್ಲಿ ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿವಾಹ ಮಹೋತ್ಸವ ನಡೆಯಲಿದೆ.

  English summary
  Niveditha Gowda is working as Operation Assistant in BIAL.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X