For Quick Alerts
  ALLOW NOTIFICATIONS  
  For Daily Alerts

  ಅವನ್ಯಾರೋ 'ಧೂಮ್-2' ಸಿನಿಮಾ ನೋಡಿ ಕಳ್ಳತನ ಮಾಡಿರ್ಬೇಕು ಮಾರ್ರೆ.!

  By ಚುಕ್ಕಿ
  |

  ಎಂಥಾ ಸಾವು ಮಾರ್ರೆ... ಇವತ್ತಿನ ದಿನಭವಿಷ್ಯ ನೋಡ್ಲಿಕ್ಕೆಂತ ಪೇಪರ್ ತಗೊಂಡ್ರೆ, ನನ್ ಕಣ್ಣಿಗೆ ರಪ್ ಅಂತ ಬಿದ್ದದ್ದು ಎಂತ ಗೊತ್ತುಂಟಾ... ಮ್ಯೂಸಿಯಂ ನಲ್ಲಿ ಕಳ್ಳತನ ಆಗಿರುವ ಸುದ್ದಿ.!

  ಒಂದ್ಕಾಲದಲ್ಲಿ ನಿಝಾಮ್ರು ಬಳಸ್ತಿದ್ದ ಬಂಗಾರದ ಟಿಫಿನ್ ಬಾಕ್ಸ್, ಛಾ ಕಪ್ ನ ಯಾರೋ ಕಳ್ಳ ಹೊತ್ತ್ಕೊಂಡು ಓಡಿ ಹೋಗಿದ್ದಾನೆ. ಮ್ಯೂಸಿಯಂನಲ್ಲಿ ಭಯಂಕರ ಸೆಕ್ಯೂರಿಟಿ ಇದ್ರೂ, ವೆಂಟಿಲೇಟರ್ ನಿಂದ ತೂರಿ ಸಿಸಿಟಿವಿ ಕ್ಯಾಮರಾವನ್ನು ತಿರುಗಿಸಿ ಚಿನ್ನದ ಟಿಫನ್ ಬಾಕ್ಸ್ ನ ಕದ್ದು ಓಡಿದ್ದಾನೆ ಚಾಲಾಕಿ ಕಳ್ಳ.

  ಈ ಕಳ್ಳತನದ ಸುದ್ದಿ ಓದ್ತಿದ್ದ ಹಾಗೆ ನನಗೆ ಥಟ್ ಅಂತ ನೆನಪಾಗಿದ್ದು 'ಧೂಮ್-2' ಚಿತ್ರ ಮಾರ್ರೆ. 'ಧೂಮ್-2' ಗೊತ್ತಲ್ಲಾ.? ಅದೇ ಹೃತಿಕ್ ರೋಷನ್, ಅಭಿಶೇಕ್ ಬಚ್ಚನ್, ಐಶ್ವರ್ಯ ರೈ, ಬಿಪಾಶಾ ಬಸು ಎಲ್ಲಾ ಇದ್ದಾರಲ್ಲ... ಆ ಸಿನಿಮಾದಲ್ಲೂ ಹೀಗೇ ಮಾರ್ರೆ.!

  ವಸ್ತುಸಂಗ್ರಹಾಲಯದ ಒಳಗೆ ಹೋಗಿ ಯಾರಿಗೂ ಗೊತ್ತಾಗದ ಹಾಗೆ ಬೆಲೆ ಬಾಳುವ ವಸ್ತುಗಳನ್ನ ಕದ್ದು ತರುವುದು ಹೃತಿಕ್ ರೋಷನ್ ಕೆಲಸ. ಆ ಚಿತ್ರದಲ್ಲಿ ಹೃತಿಕ್ ರೋಷನ್ ಮಾಡಿರೋ ಕೆಲಸ ನೋಡಿ ಭಯಂಕರ ಅಂತಿದ್ದೆ. ಆದ್ರೆ, ಹೈದರಾಬಾದ್ ಮ್ಯೂಸಿಯಂ ನಲ್ಲಿ ನಿನ್ನೆ ಆಗಿರೋ ಘಟನೆ ನೋಡಿದ್ರೆ, ಮಂಡೆ ಬಿಸಿ ಆಗ್ತದೆ ಮಾರ್ರೆ. ಯಾಕೆ ಗೊತ್ತುಂಟಾ.?

  ಕೋಟ್ಯಾಂತರ ರೂಪಾಯಿ ಬೆಲೆ ಬಾಳ್ತದೆ.!

  ಕೋಟ್ಯಾಂತರ ರೂಪಾಯಿ ಬೆಲೆ ಬಾಳ್ತದೆ.!

  ಹೈದರಾಬಾದ್ ನಲ್ಲಿರುವ ನಿಝಾಮ್ ಮ್ಯೂಸಿಯಂನಲ್ಲಿ ನಿನ್ನೆ ಕಳ್ಳತನ ಆಗಿರುವ ಚಿನ್ನದ ಟಿಫನ್ ಬಾಕ್ಸ್ ಸುಮಾರು 2 ಕೆ.ಜಿ ಉಂಟಂತೆ. ಆ ಟಿಫನ್ ಬಾಕ್ಸ್ ನಲ್ಲಿ ವಜ್ರ, ರೂಬಿ ಸೇರಿದಂತೆ ಅಮೂಲ್ಯ ರತ್ನಗಳು ಸ ಉಂಟಂತೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹರಾಜು ಹಾಕಿದರೆ, ಅದಕ್ಕೆ 50 ಕೋಟಿ ಬರ್ತದಂತೆ.

  ಕಳ್ಳತನ ಆಗಿರೋದು ಹೆಂಗ್ ಗೊತ್ತುಂಟಾ.?

  ಕಳ್ಳತನ ಆಗಿರೋದು ಹೆಂಗ್ ಗೊತ್ತುಂಟಾ.?

  ರವಿವಾರ ಮಧ್ಯರಾತ್ರಿ ಸೆಕ್ಯೂರಿಟಿಗಳ ಕಣ್ತಪ್ಪಿಸಿ, ವೆಂಟಿಲೇಟರ್ ಗಾಜು ಒಡೆದು.. ವೆಂಟಿಲೇಟರ್ ಪಕ್ಕದಲ್ಲೇ ಇದ್ದ ಸಿಸಿಟಿವಿಯನ್ನ ತಿರುಗಿಸಿ ಹಗ್ಗದ ಮೂಲಕ ಕೆಳಗೆ ಇಳಿದು, ವಜ್ರ ಖಚಿತ ಟಿಫನ್ ಬಾಕ್ಸ್ ನ ದೋಚಿದ್ದಾನಂತೆ ಕಿಲಾಡಿ ಕಳ್ಳ.

  ಎಷ್ಟು ಸಾರಿ ಅವ 'ಧೂಮ್-2' ಸಿನಿಮಾ ನೋಡಿರ್ಬೇಕು.?

  ಎಷ್ಟು ಸಾರಿ ಅವ 'ಧೂಮ್-2' ಸಿನಿಮಾ ನೋಡಿರ್ಬೇಕು.?

  ಮ್ಯೂಸಿಯಂಗಳಲ್ಲಿ ಸೆಕ್ಯೂರಿಟಿ ಹಾಗೂ ಸಿಸಿಟಿವಿ ಕ್ಯಾಮರಾಗಳಿಂದ ತಪ್ಪಿಸಿಕೊಂಡು, ಬೇರೆ ಬೇರೆ ವೇಷ ತೊಟ್ಟು ಬೆಲೆ ಬಾಳುವ ವಸ್ತುಗಳನ್ನ ಕದಿಯುವ 'ಧೂಮ್-2' ಚಿತ್ರವನ್ನ ಆ ಕಳ್ಳ ಎಷ್ಟು ಬಾರಿ ನೋಡಿದ್ದಾನೋ, ಏನೋ...ಪರಿಣಾಮ, ಒಂದೇ ಒಂದು ಕುರುಹು ಬಿಟ್ಟುಕೊಡದೆ ಎಸ್ಕೇಪ್ ಆಗಿದ್ದಾನೆ ಮಾರ್ರೆ.!

  ಹುಡುಕಾಟದಲ್ಲಿ ಪೊಲೀಸರು

  ಹುಡುಕಾಟದಲ್ಲಿ ಪೊಲೀಸರು

  ಕಳ್ಳನನ್ನ ಪತ್ತೆ ಹಚ್ಲೀಕೆ ಹೈದರಾಬಾದ್ ಪೊಲೀಸರು 10 ತಂಡ ಮಾಡಿದ್ದಾರಂತೆ. ತನಿಖೆ ಆರಂಭಿಸಿರುವ ಪೊಲೀಸರು ಆದಷ್ಟು ಬೇಗ ಕಳ್ಳನನ್ನ ಹಿಡಿಯಲಿ. ಅವನ ಮಂಡೆ ಸಮ ಮಾಡಲಿ...

  English summary
  Nizam's gold Tiffin box stolen from Hyderabad Museum in Dhoom 2 style.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X