For Quick Alerts
  ALLOW NOTIFICATIONS  
  For Daily Alerts

  ಅಮಿತ್ ಶಾ ಕಾರ್ಯಕ್ರಮದಲ್ಲಿ ಕನ್ನಡ ನಿರ್ಲಕ್ಷ್ಯ: ಬಿಜೆಪಿ ವಿರುದ್ಧ ನಿಖಿಲ್ ಆಕ್ರೋಶ

  |

  ಶನಿವಾರವಷ್ಟೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶಿವಮೊಗ್ಗದ ಭದ್ರಾವತಿಯಲ್ಲಿ ಆರ್.ಎ.ಎಫ್ (ಕ್ಷಿಪ್ರ ಕಾರ್ಯಾಚರಣೆ ಪಡೆ) ಘಟಕದ ಶಂಕು ಸ್ಥಾಪನೆ ನಡೆಸಿದ್ದರು. ಆ ಕಾರ್ಯಕ್ರಮ ಸಂಪೂರ್ಣ ಹಿಂದಿಮಯವಾಗಿತ್ತು. ಇದು ಕನ್ನಡಪರ ಸಂಘಟನೆಗಳು ಸೇರಿದಂತೆ ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

  ಯಡಿಯೂರಪ್ಪ ಗೆ ಕಣ್ಣು ಕಾಣಲ್ವ ಅಂದ್ರು ನಿಖಿಲ್ | Filmibeat Kannada

  ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಸಹ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದು, 'ಅಮಿತ್ ಶಾ ಪಾಲ್ಗೊಂಡಿದ್ದ ಆರ್‌ಎಎಫ್ ಶಂಕುಸ್ಥಾಪನೆ ಕಾರ್ಯಕ್ರಮ ನಡೆದಿದ್ದು, ಶಿವಮೊಗ್ಗದ ಭದ್ರಾವತಿಯಲ್ಲಿಯೋ ಅಥವಾ ದೆಹಲಿಯಲ್ಲಿಯೋ ಗೊತ್ತಾಗುತ್ತಿಲ್ಲ' ಎಂದು ಟೀಕಿಸಿದ್ದಾರೆ.

  'ಒಂದು ಅಕ್ಷರವೂ ಕನ್ನಡ ಪದ ಬಳಕೆ ಮಾಡದೇ ಮಾನ್ಯ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಶಂಕುಸ್ಥಾಪನೆ ನೆರವೇರಿಸಿರುವುದು ಕೇಂದ್ರ ಸರ್ಕಾರದ ಕನ್ನಡ ವಿರೋಧಿ ಧೋರಣೆಯನ್ನು ತೋರಿಸುತ್ತದೆ.' ಎಂದಿದ್ದಾರೆ ನಿಖಿಲ್ ಕುಮಾರಸ್ವಾಮಿ.

  ಕುವೆಂಪು ಮಾತು ನೆನಪಿಸಿದ ನಿಖಿಲ್

  ಕುವೆಂಪು ಮಾತು ನೆನಪಿಸಿದ ನಿಖಿಲ್

  'ಇಂಗ್ಲೀಷ್ ಮರದ ದೊಣ್ಣೆಯಾದರೆ ಹಿಂದಿ ಕಬ್ಬಿಣದ ಸಲಾಕೆ' ಎಂದು ಹಿಂದಿ ಹೇರಿಕೆಯನ್ನು ತೀವ್ರವಾಗಿ ವಿರೋಧಿಸಿದ್ದ ರಾಷ್ಟ್ರಕವಿ ಕುವೆಂಪು ಅವರು ಹುಟ್ಟಿದ ಜಿಲ್ಲೆಯಲ್ಲೇ ಕನ್ನಡಕ್ಕೆ ನೆಲೆ ಸಿಗದಂತಾದರೂ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಇದನ್ನು ಕಂಡು ಕಾಣದಂತೆ ಮೌನವಹಿಸಿರುವುದು ನಿಜಕ್ಕೂ ಬೇಸರದ ವಿಚಾರವಾಗಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ ನಿಖಿಲ್ ಕುಮಾರಸ್ವಾಮಿ.

  ತ್ರಿಭಾಷಾ ಸೂತ್ರದಂತೆ ಫಲಕ ಅಳವಡಿಸಿ: ನಿಖಿಲ್

  ತ್ರಿಭಾಷಾ ಸೂತ್ರದಂತೆ ಫಲಕ ಅಳವಡಿಸಿ: ನಿಖಿಲ್

  'ಇನ್ನಾದರೂ ತ್ರಿಭಾಷಾ ಸೂತ್ರದಂತೆ ಕನ್ನಡ ಫಲಕವನ್ನು ಅಳವಡಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತೇನೆ' ಎಂದಿದ್ದಾರೆ ನಿಖಿಲ್. ಆ ಮೂಲಕ ಕೇಂದ್ರ ಸರ್ಕಾರದ ಕಾರ್ಯಕ್ರಮವಾದರೂ ಇಂಗ್ಲಿಷ್, ಹಿಂದಿಯ ಜೊತೆಗೆ ಆ ರಾಜ್ಯದ ಭಾಷೆ ಬಳಕೆ ಕಡ್ಡಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

  ಹಿಂದಿ-ಇಂಗ್ಲಿಷ್ ಭಾಷೆಯಲ್ಲಿ ಅಡಿಗಲ್ಲು ಫಲಕ

  ಹಿಂದಿ-ಇಂಗ್ಲಿಷ್ ಭಾಷೆಯಲ್ಲಿ ಅಡಿಗಲ್ಲು ಫಲಕ

  ಆ ಕಾರ್ಯಕ್ರಮದ ವೇದಿಕೆ ಮೇಲೆ, ಶಂಕು ಸ್ಥಾಪನೆ ಮಾಡಿದ ಅಡಿಗಲ್ಲು ಫಲಕದ ಮೇಲೆ ಸಂಪೂರ್ಣ ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಯೇ ರಾರಾಜಿಸುತ್ತಿತ್ತು. ಸಿಎಂ ಯಡಿಯೂರಪ್ಪ ಸೇರಿದಂತೆ ಇನ್ನೂ ಕೆಲವು ಪ್ರಮುಖ ರಾಜಕಾರಣಿಗಳು ಆ ಸರ್ಕಾರಿ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದರು.

  ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ

  ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ

  ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯಲ್ಲಿ ನಿರ್ಲಕ್ಷ್ಯ ಮಾಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ, ಕರವೇ ನಾರಾಯಣಗೌಡ ಇನ್ನೂ ಹಲವಾರು ಮಂಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  English summary
  No Kannada Board In Amit Shah's Program Nikhil Kumaraswamy blame Karnataka BJP.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X