Just In
Don't Miss!
- News
ಉದ್ಯಮಿ ಅಜೀಂ ಪ್ರೇಮ್ಜಿ ವಿರುದ್ಧದ ಪ್ರಕರಣ ರದ್ದು
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮುಂದಿನವಾರ ತೆರೆ ಕಾಣಬೇಕಿದ್ದ ಸಿನಿಮಾಗಳಿಗೆ ತಡೆ
UFO ಮತ್ತು cube ಸಂಸ್ಥೆಯ ದುಬಾರಿ ಶುಲ್ಕದಿಂದಾಗಿ ಬೇಸತ್ತಿರುವ ನಿರ್ಮಾಪಕರುಗಳು ಮುಂದಿನ ವಾರದಿಂದ ಸಿನಿಮಾಗಳನ್ನ ಬಿಡುಗಡೆ ಮಾಡದಂತೆ ನಿರ್ಧಾರ ಮಾಡಿದ್ದಾರೆ. ಮಾರ್ಚ್ 2 ರಿಂದಲೇ ಚಿತ್ರಗಳನ್ನ ರಿಲೀಸ್ ಮಾಡದಂತೆ ನೋಡಿಕೊಳ್ಳುವುದಾಗಿ ಮೊದಲು ತೀರ್ಮಾನ ಮಾಡಲಾಗಿತ್ತು ಆದರೆ ಈಗಾಗಲೇ ಅನೌನ್ಸ್ ಮಾಡಿರುವ ಸಿನಿಮಾಗಳಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಅನೌನ್ಸ್ ಆಗಿದ್ದ ಚಿತ್ರಗಳು ನಿನ್ನೆ (ಮಾರ್ಚ್ 2)ರಂದು ಬಿಡುಗಡೆ ಮಾಡಲಾಯ್ತು.
ಈ ಬಗ್ಗೆ ಇಂದು (ಮಾರ್ಚ್ 3) ತುರ್ತು ಸುದ್ದಿ ಗೋಷ್ಠಿಯನ್ನ ಕರೆಯಲಾಗಿತ್ತು. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಾರಾ ಗೋವಿಂದು ಸಮಸ್ಯೆ ಸರಿ ಹೋಗುವ ವರೆಗೂ ಮುಂದಿನ ವಾರದಿಂದ ಯಾವುದೇ ಚಿತ್ರಗಳನ್ನ ಬಿಡುಗಡೆ ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಮಾರ್ಚ್ 2 ರಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಇಲ್ಲ
UFO ಮತ್ತು cube ಡಿಜಿಟಲ್ ಸರ್ವಿಸ್ ಪ್ರೊವೈಡರ್ ಸಂಸ್ಥೆ ವಿರುದ್ಧ ಇಡೀ ಸೌತ್ ಚಿತ್ರರಂಗದ ನಿರ್ಮಾಪಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದೇ ಕಾರಣದಿಂದ ಮಾರ್ಚ್ 9 ರಂದು ಬಿಡುಗಡೆ ಆಗಬೇಕಿದ್ದ ಸಿನಿಮಾಗಳನ್ನ ತಡೆ ಹಿಡಿಯಲಾಗಿದೆ.
UFO ಮತ್ತು cube ಸಂಸ್ಥೆ ಅವರು ಶೇಖಡ 25 ರಷ್ಟು ಶುಲ್ಕ ಕಡಿಮೆ ಮಾಡುವವರೆಗೂ ನಾವು ಸೌತ್ ಚಿತ್ರರಂಗದಿಂದ ಯಾವುದೇ ಕಟೆಂಟ್ ಕೊಡಬಾರದು ಎಂದು ನಿರ್ಧಾರ ಮಾಡಲಾಗಿದೆ. ಕರ್ನಾಟಕ ಚಿತ್ರರಂಗದ ಜೊತೆಯಲ್ಲಿ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಾಂಡಿಚೆರಿ ಸಿನಿಮಾರಂಗದವರು ಸಮ್ಮತ ಸೂಚಿಸಿ ಒಟ್ಟಾಗಿ ಹೋರಾಟ ಮಾಡಲು ಮುಂದಾಗಿದ್ದಾರೆ.
ಹೀಗಾಗಿ ಮುಂದಿನ ವಾರ ತೆರೆಕಾಣಬೇಕಿದ್ದ ಯೋಗಿ ದುನಿಯಾ, ಇದಂ ಪ್ರೇಮಂ ಜೀವಂ, ನಂಜುಂಡಿ ಕಲ್ಯಾಣ, ಓ ಪ್ರೇಮವೇ, ಶ್ರೀ, ಹೀಗೊಂದು ದಿನ, ಮುಖ್ಯ ಮಂತ್ರಿ ಕಳದೋದ್ನಪ್ಪೊ, ಸೋಜಿಗ ಎಲ್ಲವು ಸ್ಥಗಿತ ಗೊಂಡಿದೆ.
ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ರಾಕಿಂಗ್ ಸ್ಟಾರ್ ಯಶ್
ಸೂರಿ, ಯೋಗರಾಜ್ ಭಟ್ ಜೊತೆ ಕೆಲಸ ಮಾಡಿದ್ದ ನಿರ್ದೇಶಕ ಶಿವ ನಿಧನ