»   » ರಿಯಲ್ ಸ್ಟಾರ್ 'ಉಪ್ಪಿ 2' ಗೆ ಟ್ರೈಲರೇ ಇಲ್ವಂತೆ!

ರಿಯಲ್ ಸ್ಟಾರ್ 'ಉಪ್ಪಿ 2' ಗೆ ಟ್ರೈಲರೇ ಇಲ್ವಂತೆ!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಅದೇನೇ ಮಾಡಿದ್ರೂ ಸ್ವಲ್ಪ ಸ್ಪೆಷಲ್ ಆಗೇ ಮಾಡ್ತಾರೆ ಅನ್ನೋದಕ್ಕೆ ಅವರು ನಿರ್ದೇಶಿಸಿ, ನಟಿಸುತ್ತಿರುವ 'ಉಪ್ಪಿ 2' ಚಿತ್ರದಲ್ಲಿನ ಡಿಫರೆಂಟ್ ಸ್ಟೈಲ್ ನೋಡ್ತಾ ಇದ್ರೇನೇ ಗೊತ್ತಾಗುತ್ತೆ.

ಅಂದ ಹಾಗೆ ಇದೀಗ 'ಉಪ್ಪಿ 2' ಚಿತ್ರದಿಂದ ಮತ್ತೊಂದು ಖಬರ್ ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ ರಿಯಲ್ ಸ್ಟಾರ್ ಉಪೇಂದ್ರ ಅವರ 'ಉಪ್ಪಿ 2' ಚಿತ್ರಕ್ಕೆ ಟ್ರೈಲರ್ ಇಲ್ವಂತೆ. ಈ ಮೊದಲು ಆಡಿಯೋ ರಿಲೀಸ್ ನ ಖಾಲಿ ಪೋಸ್ಟರ್ ಬಿಡುಗಡೆ ಮಾಡಿ ಪ್ರೇಕ್ಷಕರಿಗೆ ಬಿಟ್ಟ ಸ್ಥಳ ತುಂಬಲು ಅವಕಾಶ ಮಾಡಿ ಕೊಟ್ಟಿದ್ದರು.[ಬಿಟ್ಟಿ ಪ್ರಚಾರ ಕೊಟ್ಟ ನವರಸ ನಾಯಕ ಜಗ್ಗೇಶ್.!]

ಇದೀಗ 'ಉಪ್ಪಿ 2' ಚಿತ್ರದ ಟ್ರೈಲರ್ ಬಿಡುಗಡೆ ಮಾಡದೆ ಅದ್ಯಾವ ಕಮಾಲ್ ಮಾಡಲು ಹೊರಟಿದ್ದಾರೆ ಅಂತ ಮುಂದೆ ನೋಡಬೇಕು. ಸದ್ಯಕ್ಕೆ ಚಿತ್ರದ ಬಗ್ಗೆ ಏನೂ ಸುಳಿವು ನೀಡದ ಉಪೇಂದ್ರ ಚಿತ್ರದ ಸೀಕ್ರೆಟ್ ಅಭಿಮಾನಿಗಳಿಗೆ ಬಿಟ್ಟುಕೊಡುತ್ತಿಲ್ಲ.['ಉಪ್ಪಿ 2' ಚೆನ್ನಾಗಿದೆ ಅಂದ ಸೆನ್ಸಾರ್ ಮಂಡಳಿ]

Upendra

ಈ ಮೊದಲು 'ಉಪ್ಪಿ 2' ಚಿತ್ರದ ಟೀಸರ್ ಕೂಡ ಅಭಿಮಾನಿಗಳೇ ತಯಾರಿಸಿದ್ದು, ವಿಶೇಷ. ಇನ್ನೂ ಚಿತ್ರ ಬಿಡುಗಡೆ ಮೊದಲು ಟ್ರೈಲರ್ ಬಿಡುಗಡೆ ಮಾಡುವುದರಿಂದ ಚಿತ್ರದ ಬಗ್ಗೆ ಸುಳಿವು ಸಿಗಬಹುದೇನೋ ಅಂತ ಟ್ರೈಲರ್ ರಿಲೀಸ್ ಮಾಡದೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರಬಹುದು.

ಉಪೇಂದ್ರ ಅವರ ಹೋಮ್ ಬ್ಯಾನರಡಿಯಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಪ್ರೀಯಾಂಕ ಉಪೇಂದ್ರ ಬಂಡವಾಳ ಹೂಡಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದು, ಕ್ರಿಸ್ಟೀನಾ ಅಖೀವಾ ಉಪೇಂದ್ರ ಜೊತೆ ಡ್ಯುಯೆಟ್ ಹಾಡಲಿದ್ದಾರೆ.['ಉಪ್ಪಿ 2' ಚಿತ್ರದ ಹೊಚ್ಚ ಹೊಸ ಪೋಸ್ಟರ್ ರಿಲೀಸ್]

ಒಟ್ನಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ರಿಯಲ್ ಸ್ಟಾರ್ ಅವರ 'ಉಪ್ಪಿ 2' ಆಗಸ್ಟ್ 14ರಂದು ತೆರೆ ಮೇಲೆ ಬರುತ್ತಿದ್ದು, ಗಾಂಧಿನಗರದಲ್ಲಿ ಎಷ್ಟರಮಟ್ಟಿಗೆ ಕಮಾಲ್ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

English summary
There will be no trailer for Kannada actor Upendr's 'Uppi 2'. Upendra who is directing the film has kept most things about the film a top secret. Actor Upendra, Actress Kristina Akheeva have played lead in 'Uppi 2'. The movie is directed by Upendra. Releasing on August 14th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada