For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ಪಡುಕೋಣೆ ಮತ್ತು ನಿತ್ಯಾ ಮೆನನ್ ಇಬ್ಬರ ಕಾಮನ್ ಸೀಕ್ರೆಟ್ ರಿವೀಲ್

  |
  ಸೀಕ್ರೆಟ್ ರಿವೀಲ್ ಮಾಡಿದ ದೀಪಿಕಾ ಪಡುಕೋಣೆ | DEEPIKA PADUKONE | NITHYA MENEN | FILMIBEAT KANNADA

  ಬೆಂಗಳೂರಿನ ಬೆಡಗಿ ದೀಪಿಕಾ ಪಡುಕೋಣೆ ಬಾಲಿವುಡ್ ನ ಸ್ಟಾರ್ ನಟಿಯಾಗಿ ಮೆರೆಯುತ್ತಿದ್ದಾರೆ. ಸ್ಯಾಂಡಲ್ ವುಡ್ ನಿಂದ ಬಣ್ಣ ಲೋಕದ ಜರ್ನಿ ಪ್ರಾರಂಭಿಸಿದ ದೀಪಿಕಾ ನಂತರ ಬಾಲಿವುಡ್ ಪ್ರವೇಶ ಮಾಡಿ ಈಗ ನಂಬರ್ ಒನ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅಷ್ಟೆಯಲ್ಲ ದೀಪಿಕಾ ಹಾಲಿವುಡ್ ಚಿತ್ರರಂಗದಲ್ಲಿಯೂ ಮಿಂಚಿದ್ದಾರೆ.

  ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ದೀಪಿಕಾ ಇತ್ತೀಚಿಗೆ ಬೆಂಗಳೂರಿನ ಮತ್ತೋರ್ವ ಸ್ಟಾರ್ ನಿತ್ಯಾ ಮೆನನ್ ಭೇಟಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ದೀಪಿಕಾ ಮತ್ತು ನಿತ್ಯಾ ಮೆನನ್ ಇಬ್ಬರ ಸಮಾಗಮವಾಗಿದೆ. ದೀಪಿಕಾ ಬಾಲಿವುಡ್ ಚಿತ್ರರಂಗದಲ್ಲಿ ಮೆರೆಯುತ್ತಿದ್ದರೆ, ನಿತ್ಯಾ ಮೆನನ್ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚಿಗೆ ಅಕ್ಷಯ್ ಕುಮಾರ್ ಅಭಿನಯದ ಮಿಶಿನ್ ಮಂಗಲ್ ಚಿತ್ರದ ಮೂಲಕ ಬಾಲಿವುಡ್ ನಲ್ಲಿಯೂ ಮಿಂಚಿದ್ದಾರೆ.

  ವಿವಾದದಲ್ಲಿ ದೀಪಿಕಾ ಅಭಿನಯದ ಚಪಾಕ್: ಕೋರ್ಟ್ ಮೆಟ್ಟಿಲೇರಿದ ಬರಹಗಾರ.!ವಿವಾದದಲ್ಲಿ ದೀಪಿಕಾ ಅಭಿನಯದ ಚಪಾಕ್: ಕೋರ್ಟ್ ಮೆಟ್ಟಿಲೇರಿದ ಬರಹಗಾರ.!

  ಇಬ್ಬರು ಸ್ಟಾರ್ ನಟಿಯರು ಬೆಂಗಳೂರಿನವರು ಎನ್ನುವುದೇ ಕನ್ನಡಿಗರಿಗೆ ಹೆಮ್ಮೆ. ಇಬ್ಬರು ಭೇಟಿಯಾದ ಸಮಯದಲ್ಲಿ ಒಂದಿಷ್ಟು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರಂತೆ. ನಿತ್ಯಾ ಮತ್ತು ದೀಪಿಕಾ ಬಗ್ಗೆ ಗೊತ್ತಿರದ ಒಂದು ಸಂಗತಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ನಾವು ಒಂದೆ ಸಿಟಿಯಿಂದ ಮಾತ್ರ ಬಂದವರಲ್ಲ ಒಂದೆ ಕಾಲೇಜಿನವರು ಕೂಡ ಎಂದು ಹೇಳಿದ್ದಾರೆ. ನಿತ್ಯಾ ಮೆನನ್ ಈ ವಿಚಾರವನ್ನು ಬಹಿರಂಗ ಪಡಿಸುವವರೆಗೂ ದೀಪಿಕಾ ಅವರಿಗೂ ಗೊತ್ತಿರಲಿಲ್ಲವಂತೆ.

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ದೀಪಿಕಾ ನಿಮಗೆ ಯಾರಿಗೆ ಗೊತ್ತಿರಲಿಲ್ಲ ಅವರಿಗೆ (ನನಗೂ ಕೂಡ ಅವರು ಬಹಿರಂಗ ಪಡಿಸುವವರೆಗೂ ಗೊತ್ತಿರಲಿಲ್ಲ) ನಾವು ಒಂದೆ ಸಿಟಿಯಿಂದ ಬಂದವರು ಮಾತ್ರವಲ್ಲ, ನಾವು ಒಂದೆ ಕಾಲೇಜಿನಲ್ಲಿ ಓದಿದವರು" ಎಂದು ನಿತ್ಯಾ ಮೆನನ್ ಬಗ್ಗೆ ಬರೆದುಕೊಂಡಿದ್ದಾರೆ.

  ನಿತ್ಯಾ ಮೆನನ್ ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ದೀಪಿಕಾ ಸದ್ಯ ಬಹುನಿರೀಕ್ಷೆಯ ಚಪಾಕ್ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಜೊತೆಗೆ 83 ಮತ್ತು ಮಹಾಭಾರತ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  English summary
  For those of you who didn't know, not only are we from the same city, we are also from the same college said deepika about Nithya Menen.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X