For Quick Alerts
  ALLOW NOTIFICATIONS  
  For Daily Alerts

  ಚಿತ್ರಗಳು: 'ರನ್ ಆಂಟನಿ' ಸೆಟ್ ನಲ್ಲಿ ಒಂದು ರೌಂಡ್ ಹೋಗಿ ಬನ್ನಿ

  By Suneetha
  |

  'ದೊಡ್ಮನೆ'ಯ ಮತ್ತೊಂದು ಕುಡಿಯ ಚಿತ್ರದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದ್ದು, ಇದೀಗ ಒಂದು ಹಾಡಿನ ರೆಕಾರ್ಡಿಂಗ್ ಜೊತೆಗೆ ಶೂಟಿಂಗ್ ಕೂಡ ಮುಗಿದಿದೆ. ವಿಶೇಷವಾಗಿ ಪುನೀತ್ ಅವರು ತಮ್ಮ ಅಣ್ಣನ ಮಗನ ಚಿತ್ರದ ಒಂದು ಹಾಡಿಗೆ ಧ್ವನಿಗೂಡಿಸಿದ್ದಾರೆ.

  ಹೌದು ಹಿಂದಿ ಸಿನಿಮಾ 'ಚೆನ್ನೈ ಎಕ್ಸ್ ಪ್ರೆಸ್' ಚಿತ್ರ ತಂಡದೊಂದಿಗೆ ಕೆಲಸ ಮಾಡಿ ಅನುಭವ ಇರುವ ನಿರ್ದೇಶಕ ರಘು ಶಾಸ್ತ್ರಿ ಆಕ್ಷನ್-ಕಟ್ ಹೇಳುತ್ತಿರುವ ವಿನಯ್ ರಾಜ್ ಕುಮಾರ್ ಅವರ ಎರಡನೇ ಸಿನಿಮಾ 'ರನ್ ಆಂಟನಿ' ಬೆಂಗಳೂರಿನ ಸುತ್ತ-ಮುತ್ತ ಶೂಟಿಂಗ್ ನಡೆಸುತ್ತಿದೆ.[ವಿನಯ್ ರಾಜ್ ಕುಮಾರ್ 'ರನ್ ಆಂಟನಿ' ಸ್ಪೆಷಾಲಿಟೀಸ್ ಗೊತ್ತಾ?]

  ಅಂದಹಾಗೆ ಈ ಸಿನಿಮಾದ 'ಜನಕು..ಜನಕು..ಮಂಡೋಲೆ' ಎಂಬ ಹಾಡನ್ನು ಪವರ್ ಸ್ಟಾರ್ ಪುನೀತ್ ಅವರು ಹಾಡಿದ್ದು, ಈ ಹಾಡಿನ ಚಿತ್ರೀಕರಣ ಕಳೆದ ವಾರ ಬೆಂಗಳೂರಿನ ಸುತ್ತಮುತ್ತಲ ಪ್ರದೇಶದಲ್ಲಿ ನಡೆದಿದೆ.

  ಈಗಾಗಲೇ ಮಗನ ಚಿತ್ರದ ಬಗ್ಗೆ ತುಂಬಾ ಕಾಳಜಿ ವಹಿಸಿರುವ ನಟ ಕಮ್ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರು ಶೂಟಿಂಗ್ ಇರುವ ದಿನ ದಿನಂಪ್ರತಿ ಶೂಟಿಂಗ್ ಸೆಟ್ ನಲ್ಲಿ ಹಾಜರಿರುತ್ತಾರಂತೆ.[ವಿನಯ್ ರಾಜ್ 'ರನ್ ಆಂಟನಿ'ಗೆ ನಿರ್ಮಾಪಕರು ಯಾರು ಗೊತ್ತಾ?]

  ಮಾತ್ರವಲ್ಲದೆ ನಟ ವಿನಯ್ ಅವರ ಚಿಕ್ಕಪ್ಪಂದಿರಾದ ಶಿವರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಶೂಟಿಂಗ್ ಸೆಟ್ ಗೆ ಹಾಜರಾಗಿ ಸಲಹೆ ಮತ್ತು ಕೆಲವು ಮಾರ್ಗದರ್ಶನಗಳನ್ನು ನೀಡುತ್ತಿದ್ದಾರೆ.... ಮುಂದೆ ಓದಿ....

   ಯುವಕರ ಕುರಿತಾದ 'ಜನಕು..ಜನಕು..'ಹಾಡು

  ಯುವಕರ ಕುರಿತಾದ 'ಜನಕು..ಜನಕು..'ಹಾಡು

  ಚಿತ್ರದಲ್ಲಿರುವ 'ಜನಕು..ಜನಕು..ಮಂಡೋಲೆ' ಹಾಡು ಯುವಕರ ನಡುವಿನ ಸಂಬಂಧದ ಕುರಿತಾಗಿ ಈ ಹಾಡಿನಲ್ಲಿ ವರ್ಣಿಸಲಾಗಿದೆ. ಈ ಚಿತ್ರದಲ್ಲಿ ನಟ ವಿನಯ್ ಅವರದು ಕ್ಯಾಥೊಲಿಕ್ ಪಾತ್ರವಾಗಿರುವುದರಿಂದ ಹಾಡನ್ನು ಚರ್ಚ್ ಪಕ್ಕದಲ್ಲಿ ಚಿತ್ರೀಕರಣ ಮಾಡಲಾಗಿದೆ. ಮುರಳಿ ಮಾಸ್ಟರ್ ಇದಕ್ಕೆ ಕೊರಿಯೊಗ್ರಫಿ ಮಾಡಿದ್ದು, ನಾಗೇಂದ್ರ ಅರಸ್ ಅವರು ಸಾಹಿತ್ಯ ಬರೆದಿದ್ದಾರೆ. ನಟಿ ಸುಷ್ಮಾ ಮತ್ತು ನಟ ವಿನಯ್ ಅವರು ಈ ಹಾಡಿಗೆ ಸ್ಟೆಪ್ ಹಾಕಿದರು.['ರನ್ ಆಂಟನಿ' ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಡಾ.ರಾಜ್ ಮೊಮ್ಮಗ.!]

  ಚಿತ್ರದಲ್ಲಿ ನಾಲ್ಕು ಹಾಡುಗಳಿವೆ

  ಚಿತ್ರದಲ್ಲಿ ನಾಲ್ಕು ಹಾಡುಗಳಿವೆ

  'ರನ್ ಆಂಟನಿ' ಚಿತ್ರದಲ್ಲಿ 5 ಹಾಡುಗಳಿದ್ದು, 4 ಹಾಡುಗಳನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗುವುದು. ವಿದೇಶದಲ್ಲಿ ಚಿತ್ರೀಕರಣದ ಬಗ್ಗೆ ನಿರ್ದೇಶಕರು ಇನ್ನೂ ನಿರ್ಧರಿಸಿಲ್ಲ. ಐದನೇ ಹಾಡಿಗೆ ವಿದೇಶಕ್ಕೆ ಹೋಗಬೇಕೇ ಬೇಡವೇ ಎಂಬ ತೀರ್ಮಾನ ಇನ್ನೇನು ಆಗಬೇಕಿದೆ. ಚಿತ್ರದ ಕಥೆ ಬೆಂಗಳೂರಿನಲ್ಲಿ ನಡೆಯುವುದರಿಂದ ವಿದೇಶಿ ಸ್ಥಳಗಳ ಅಗತ್ಯವಿಲ್ಲ.

  ಮೊದಲ ಹಂತ ಜನವರಿ 18ಕ್ಕೆ

  ಮೊದಲ ಹಂತ ಜನವರಿ 18ಕ್ಕೆ

  'ರನ್ ಆಂಟನಿ' ಚಿತ್ರದ ಮೊದಲ ಹಂತದ ಚಿತ್ರೀಕರಣ ಜನವರಿ 18ಕ್ಕೆ ಮುಗಿಯಲಿದೆ. ಎರಡನೇ ಹಂತ ಫೆಬ್ರವರಿ ತಿಂಗಳಿಗೆ ಮುಗಿಸುವ ಯೋಜನೆ ಇದೆ. ಈಗಾಗಲೇ ಚಿತ್ರಕ್ಕೆ ಹೆಚ್ಚಿನ ಶಾಟ್ ತೆಗೆಯಲಾಗುತ್ತಿದೆ. ಇನ್ನೊಬ್ಬ ನಾಯಕಿ ಗೋವಾದ ಹುಡುಗಿ ರುಕ್ಸಾ ಸದ್ಯದಲ್ಲೇ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.

  ಪವರ್ ಸ್ಟಾರ್ ಪುನೀತ್

  ಪವರ್ ಸ್ಟಾರ್ ಪುನೀತ್

  ಹಾಡಿನ ರೆಕಾರ್ಡಿಂಗ್ ಗೆಂದು ಸ್ಟುಡಿಯೋಗೆ ಬಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಮ್ಯೂಸಿಕ್ ಕಂಪೋಸರ್ ಮಣಿಕಾಂತ್ ಕದ್ರಿ ಅವರ ಜೊತೆ ಗಂಭೀರವಾಗಿ ಹಾಡಿನ ಬಗ್ಗೆ ಚರ್ಚೆ ನಡೆಸುತ್ತಿರುವುದು.

  ಶಿವಣ್ಣ ಮತ್ತು ರಘು ಶಾಸ್ತ್ರಿ

  ಶಿವಣ್ಣ ಮತ್ತು ರಘು ಶಾಸ್ತ್ರಿ

  ಹೊಸ ವರ್ಷಾಚರಣೆಗೆ ಫ್ಯಾಮಿಲಿ ಸಮೇತ ಬ್ಯಾಂಕಾಕ್ ಗೆ ತೆರಳಿದ್ದ ಶಿವಣ್ಣ ಅವರು ಅಲ್ಲಿಂದ ನೇರವಾಗಿ ಬಂದಿದ್ದು ವಿನಯ್ ಅವರ 'ರನ್ ಆಂಟನಿ' ಶೂಟಿಂಗ್ ಸ್ಪಾಟ್ ಗೆ. ಶಿವರಾಜ್ ಕುಮಾರ್ ಅವರಿಗೆ ಶಾಟ್ ಗಳ ಬಗ್ಗೆ ವಿವರಿಸುತ್ತಿರುವ ನಿರ್ದೇಶಕ ರಘು ಶಾಸ್ತ್ರಿ.

  ನಾಯಕಿಯರೊಡನೆ ವಿನಯ್

  ನಾಯಕಿಯರೊಡನೆ ವಿನಯ್

  'ರನ್ ಆಂಟನಿ' ಚಿತ್ರದ ನಾಯಕಿಯರಾದ ಸುಷ್ಮಾ ಮತ್ತು ರುಕ್ಸಾ ಅವರೊಂದಿಗೆ ನಟ ವಿನಯ್ ರಾಜ್ ಕುಮಾರ್ ಫೋಸ್.

  English summary
  Kannada Actor Puneeth Rajkumar seems to find sweet pleasure surprising his close ones by giving them more than what they hope for. Having recently sung for a Shivarajkumar film, he will now lend his voice for his nephew Vinay Rajkumar's film, Run Antony.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X