»   » ನೀಲಿ ಚಿತ್ರಗಳ ರಾಣಿ ಸನ್ನಿ ಲಿಯೋನ್ ಮೇಲೆ ಗೃಹಿಣಿ ಕೆಂಗಣ್ಣು

ನೀಲಿ ಚಿತ್ರಗಳ ರಾಣಿ ಸನ್ನಿ ಲಿಯೋನ್ ಮೇಲೆ ಗೃಹಿಣಿ ಕೆಂಗಣ್ಣು

Posted By:
Subscribe to Filmibeat Kannada

ಮುಂಬೈ, ಮೇ. 15 : ತನ್ನ ವೈಯಕ್ತಿಕ ಅಂತರ್ಜಾಲ ತಾಣದಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಚಿತ್ರಗಳನ್ನು ಬಿತ್ತರಿಸುತ್ತಿದ್ದಾರೆ ಎಂದು, ಬಾಲಿವುಡ್ಡಿನಲ್ಲಿ ಬಿರುಗಾಳಿ ಎಬ್ಬಿಸಿರುವ ನೀಲಿ ಚಿತ್ರಗಳ ನಟಿ ಸನ್ನಿ ಲಿಯೋನ್ ಮೇಲೆ ಮುಂಬೈನ ಗೃಹಿಣಿಯೊಬ್ಬರು ಕ್ರಿಮಿನಲ್ ಕೇಸನ್ನು ಹಾಕಿದ್ದಾರೆ.

ಏನಾಗಿದೆಯೆಂದರೆ, ಅಂಜಲಿ ಪಾಲನ್ (30) ಎಂಬ ಮಹಿಳೆ ಅಂತರ್ಜಾಲವನ್ನು ಜಾಲಾಡುತ್ತಿದ್ದಾಗ ಭಾರತ ಮೂಲದ ಸನ್ನಿ ಲಿಯೋನ್ ಅವರ ಅಶ್ಲೀಲಾತಿಅಶ್ಲೀಲ ಚಿತ್ರಗಳು ಬಹಿರಂಗವಾಗಿವೆ. ಇವುಗಳನ್ನು ಕಂಡು ಹೌಹಾರಿದ ಅವರು ಡೊಂಬಿವಲಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.


"ಇಂಥ ಅಶ್ಲೀಲ ಚಿತ್ರಗಳು ನೆಟ್ಟಿಗರ, ಅದರಲ್ಲೂ ಮಕ್ಕಳ ಮನಸನ್ನು ಕೆಡಿಸುತ್ತದೆ" ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಸನ್ನಿಲಿಯೋನ್.ಕಾಂ ವೆಬ್ ಸೈಟಿನಲ್ಲಿ ನಟಿಯ ಆಕ್ಷೇಪಾರ್ಹ ಮತ್ತು ಕಾಮೋತ್ತೇಜಕ ಚಿತ್ರಗಳಿವೆ ಎಂದು ಗೃಹಿಣಿ ದೂರಿದ್ದಾರೆ. [ಸನ್ನಿ ಲಿಯೋನ್ 'ಸತ್ಯಂ ಶಿವಂ ಸುಂದರಂ' ಭಂಗಿಗಳು]

Obscenity case filed against Sunny Leone by Mumbai housewife

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 292, 292ಎ, 294 ಪ್ರಕಾರ ಸನ್ನಿ ಲಿಯೋನ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಭಾರತೀಯ ಮಹಿಳಾ ಪ್ರತಿನಿಧಿತ್ವ ಕಾಯ್ದೆ ಮತ್ತು ಐಟಿ ಕಾಯ್ದೆಯ ಅಡಿಯಲ್ಲಿಯೂ ಸನ್ನಿಯ ವಿರುದ್ಧ ಕೇಸನ್ನು ದಾಖಲಿಸಿಕೊಳ್ಳಲಾಗಿದೆ.

ಹೆಚ್ಚಿನ ತನಿಖೆಗಾಗಿ, ಡೊಂಬಿವಲಿ ಪೊಲೀಸರು ಪ್ರಕರಣವನ್ನು ಠಾಣೆಯಲ್ಲಿರುವ ಸೈಬರ್ ಕ್ರೈಂ ವಿಭಾಗಕ್ಕೆ ಹಸ್ತಾಂತರಿಸಿದ್ದಾರೆ. 'ಜಿಸಂ2' ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಿರುವ ಸನ್ನಿ ಲಿಯೋನ್ ಅವರು 'ಕುಚ್ ಕುಚ್ ಲೊಚಾ ಹೈ' ಚಿತ್ರದ ಪ್ರಚಾರಕ್ಕೆಂದು ಇತ್ತೀಚೆಗೆ ಮುಂಬೈಗೆ ಆಗಮಿಸಿದ್ದರು.


'ಡಿಕೆ' ಕನ್ನಡ ಚಿತ್ರದಲ್ಲಿ ಐಟಂ ಡಾನ್ಸ್ ಮಾಡಿ ಕನ್ನಡಿಗರ ಮನ ಮುದಗೊಳಿಸಿರುವ ಸನ್ನಿ ಲಿಯೋನ್ ಅವರು, ಸಿಕ್ಕಾಪಟ್ಟೆ ಹಾಟ್ ದೃಶ್ಯಗಳಿವೆಯೆಂದು ಏಕ್ತಾ ಕಪೂರ್ ಅವರ xxx ಚಿತ್ರವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಈ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗಬೇಕೆಂಬ ಬೇಡಿಕೆಯನ್ನು ಸನ್ನಿ ಬದಿಗೆ ಸರಿಸಿದ್ದಾರೆ. [ಆ ಚಿತ್ರದಲ್ಲಿ ಏನುಂಟೋ? ಒಲ್ಲೆ ಎಂದರು ಸನ್ನಿ]

English summary
Obscenity case has been filed against Bollywood actress Sunny Leone by Mumbai housewife alleging that the actress has posted objectionable pictures on her website and on social media. The housewife says that the pictures poison the minds of people, especially children.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada